ನಂದಿನಿ ಮನುಪ್ರಸಾದ್ ನಾಯಕ್
ಚಿನ್ನ ಬೆಳ್ಳಿ ಕೆಲಸಗಾರರು ಎದುರಿಸುತ್ತಿರುವ ತೊಂದರೆಗಳು, ಹಾಗೂ ಚಿನ್ನ ಬೆಳ್ಳಿಯ ಬೆಲೆ ದಿನೇ ದಿನೇ ದುಬಾರಿಯಾಗುತ್ತಿರುವ ಪರಿಣಾಮ ಕೆಲಸಗಾರರ ಮೇಲೆ ಉಂಟು ಮಾಡುತ್ತಿದೆ ಇದರ ಸಮಸ್ಯೆಯ ಕುರಿತು ಮೈಸೂರು ಜಿಲ್ಲಾ, ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದಿಂದ ಎಂಟಿಆರ್ ಹೋಟೆಲ್, ಮೈಸೂರು ಇಲ್ಲಿ ಆಯೋಜಿಸಿದ್ದ ಸಂಘದ ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.
ಈ ಸಮಾರಂಭದಲ್ಲಿ ಸಂಘದ ಗೌರವಾಧ್ಯಕ್ಷರಾದ ರವಿಪ್ರಕಾಶ್ ರವರು, ಅಧ್ಯಕ್ಷರಾದ ಗೋಲ್ಡನ್ ಸುರೇಶ್, ಪ್ರಧಾನ ಕಾರ್ಯದರ್ಶಿ ಗುರು ಡೈಮಂಡ್, ಉಪಾಧ್ಯಕ್ಷ ರಮೇಶ್, ನಿರ್ದೇಶಕರಾದ ಶಿವು ಹಾಗೂ ಬಸವರಾಜು, ಮತ್ತು ಸಂಘದ ಖಜಾಂಚಿ ಅಣ್ಣಯ್ಯ ಆಚಾರ್ ಬಿ.ಸಿ ಉಪಸ್ಥಿತರಿದ್ದರು.
ಈ ದಿನದ ಪ್ರಮುಖ ಅತಿಥಿಯಾಗಿ ಜೆಡಿಎಸ್ ಪಕ್ಷದಲ್ಲಿ ಮೂರು ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿರುವ ಶ್ರೀ ರಮೇಶ್ ರಮಣಿ ರವರು ಆಗಮಿಸಿದ್ದು ಸಂಘದಿಂದ ಅವರಿಗೆ ಗೌರವ ಪೂರ್ವಕ ಸನ್ಮಾನ ನೆರವೇರಿಸಲಾಯಿತು.