ಕರ್ನಾಟಕ ಗೃಹ ಮಂಡಳಿ ಚಾಮರಾಜನಗರ ತಾ. ವಿದ್ವಾತ್ ಇನ್ಫ್ರೂ ಮೈಸೂರು ಸಂಸ್ಥೆಯೊಂದಿಗೆ ಮಾರ್ಕೆಟಿಂಗ್ ಜಂಟಿ ಸಹಭಾಗಿತ್ವದಡಿ ಎಲ್ಲಾ ಮೂಲಭೂತ ಸೌಲಭ್ಯನ್ನೊಳಗೊಂಡ ವಸತಿ ಯೋಜನೆ ಸಾರ್ವಜನಿಕರಿಂದ ಬೇಡಿಕೆ ಸಮೀಕ್ಷೆಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

ಕರ್ನಾಟಕ ಗೃಹ ಮಂಡಳಿ * ಗೃಹ ಆಯುಕ್ತರ ಕಛೇರಿ, ಕರ್ನಾಟಕ ಗೃಹ ಮಂಡಳಿ, ಕಾವೇರಿ ಭವನ, ಬೆಂಗಳೂರು-560 009.

ಸಂಖ್ಯೆ: ಕಗೃಮಂ/ಕಾ/ಹಂಚಿಕೆ-10/ಬೇ.ಸ.ಪ್ರ/2025-26

ಬೇಡಿಕೆ ಸಮೀಕ್ಷೆ ಸಾರ್ವಜನಿಕ ಪ್ರಕಟಣೆ ಕರ್ನಾಟಕ ಗೃಹ ಮಂಡಳಿಯ ವತಿಯಿಂದ ಚಾಮರಾಜನಗರ ತಾಲ್ಲೂಕು ಕಸಬಾ ಹೋಬಳಿ ಸರ್ವೆ ನಂ 506/1B, 507/1B, 508/18 ಮತ್ತು ಹಾಗೂ ಉತ್ತುವಳ್ಳಿ ಗ್ರಾಮದ 42/1, 43/2. 68. 70 ಹಾಗೂ 71 ರಲ್ಲಿ ಒಟ್ಟು 24 ಎಕರೆ 13 ಗುಂಟೆ ಜಮೀನಿನಲ್ಲಿ M/s Vidwath Infra Pvt Ltd., ಮೈಸೂರು ಸಂಸ್ಥೆಯೊಂದಿಗೆ ಮಾರ್ಕೆಟಿಂಗ್ ಜಂಟಿ ಸಹಭಾಗಿತ್ವದಡಿ ಎಲ್ಲಾ ಮೂಲಭೂತ ಸೌಲಭ್ಯನ್ನೊಳಗೊಂಡ ವಸತಿ ಯೋಜನೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಸದರಿ ವಸತಿ ಯೋಜನೆಯಲ್ಲಿ ವಿವಿಧ ವರ್ಗದ ನಿವೇಶನ ಹೊಂದಲು ಬಯಸುವ ಸಾರ್ವಜನಿಕರಿಂದ ಬೇಡಿಕೆ ಸಮೀಕ್ಷೆಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಸಾರ್ವಜನಿಕರು e-payment ಮೂಲಕ ನೋಂದಣಿ ಶುಲ್ಕ ಮತ್ತು ಆರಂಭಿಕ ಠೇವಣಿ ಹಣವನ್ನು ಪಾವತಿಸಿ ದಿನಾಂಕ: 12.12.2025 ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31.12.2025 ಆಗಿರುತ್ತದೆ.

 

ಬಡಾವಣೆಯ ಸ್ಥಳ ವರ್ಗ ನಿವೇಶನದ ಅಳತೆ (ಮೀಟರ್‌ಗಳಲ್ಲಿ) ನೋಂದಣಿ ಶುಲ್ಕ (ರೂ.ಗಳಲ್ಲಿ) ಆರಂಭಿಕ ಠೇವಣಿ ಹಣ (ರೂ.ಗಳಲ್ಲಿ) ಬೆಲೆ ಪ್ರತಿ.ಚ.ಅಡಿಗೆ ಚಾಮರಾಜನಗರ ತಾಲ್ಲೂಕು, ಕಸಬಾ ಹೋಬಳಿ ಹಾಗೂ ಉತ್ತುವಳ್ಳಿ ಗ್ರಾಮ EWS 6 x 9 300/- 5,000/- 2.750/- LIG 9 x 12 500/- 10,000/- MIG 9 x 15 1,000/- 40,000/- ರೂ. 1500/- HIG 12 x 18 1,500/- 50,000/- ಅರ್ಜಿ ನೊಂದಣಿ ಮತ್ತು ಆರಂಭಿಕ ಠೇವಣಿ ಹಣವನ್ನು e-payment ಮೂಲಕ ಪಾವತಿಸಿ ಅರ್ಜಿ ಸಲ್ಲಿಸಲು ಹಾಗೂ ನಿಯಮ ಮತ್ತು ಷರತ್ತುಗಳ ವಿವರಗಳಿಗಾಗಿ ವೆಬ್ ಸೈಟ್ https://www.khb.karnataka.gov.in ಸಂಪರ್ಕಿಸುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಗೃಮಂ, ಜಿಲ್ಲಾ ಯೋಜನಾ ಕಛೇರಿ, ಚಾಮರಾಜನಗರ ಮೊಬೈಲ್ ನಂ. 8310045887 ಅಥವಾ ಕಂದಾಯ ಅಧಿಕಾರಿಗಳು, ಹಂಚಿಕೆ ಶಾಖೆ, ಕಛೇರಿ ದೂರವಾಣಿ ಸಂಖ್ಯೆ: 080-22273511 ext 306/309. DIPR/CP/RO4333/AAPL/2025-26 ಸಹಿ/- ಗೃಹ ಆಯುಕ್ತರು, ಕರ್ನಾಟಕ ಗೃಹ ಮಂಡಳಿ, ಬೆಂಗಳೂರು.

Leave a Reply

Your email address will not be published. Required fields are marked *