ನಂದಿನಿ ಮನುಪ್ರಸಾದ್ ನಾಯಕ್
ಸೆ.27ರಂದು ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ಅಂತರರಾಷ್ಟ್ರೀಯ ಉರ್ದು ಕವಿಗೋಷ್ಠಿ ಏರ್ಪಡಿಸಲಾಗಿದೆ ಎಂದು ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಕಚೇರಿ ಆವರಣದಲ್ಲಿ ಮೊದಲಿಗೆ ಉರ್ದು ಕವಿಗೋಷ್ಠಿ(ಮುಪಾಯಿರ) ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ವಸ್ತುಪ್ರದರ್ಶನ ಪ್ರಾಧಿಕಾರ ಮತ್ತು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಸಹಯೋಗ ದೊಂದಿಗೆ ದೆಸ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಸೆ.27ರಂದು ಅಂತರ ರಾಷ್ಟ್ರೀಯ ಗುಣಮಟ್ಟದ ಉರ್ದು ಕವಿ ಕಾವ್ಯ ವೈಭವ ಉರ್ದು ಕವಿಗೋಷ್ಠಿ (ಮುಷಾಯಿರ) ನಡೆಯಲಿದೆ..
ವಸ್ತುಪ್ರದರ್ಶನದ ಕಾಳಿಂಗ ರಾವ್ ಮಂಟಪದಲ್ಲಿ ಸಂಜೆ 7 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಉರ್ದು ಕವಿಗೋಷ್ಠಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗೆ ಳಾಗಿ ಸಚಿವ ಜಮೀರ್ ಅಹಮ್ಮದ್ ಖಾನ್, ಶಾಸಕ ಟಿ.ಎಸ್.ಶ್ರೀವತ್ಸ ಆಗಮಿಸಲಿದ್ದಾರೆ ಎಂದರು. ಸಂಜೆ 7 ಗಂಟೆಯಿಂದ ರಾತ್ರಿ 11ರವರಗೆ ಉರ್ದು ಶಾಯರಿಯ ವಿವಿಧ ಪ್ರಕಾರಗಳಲ್ಲಿ ದೇಶ-ವಿದೇಶಗಳಲ್ಲಿ ಖ್ಯಾತಿಗಳಿಸಿರುವ ಸಂಸತ್ ಸದಸ್ಯರೂ ಆದ ಇಮ್ರಾನ್ ಪ್ರಕಾಪ್ ಫಡಿ, ಗುಜರಾತಿನ ಸಂಪತ್ ಸರಳ್, ಮೊಹ ಮೃದ್ ನದೀಮ್ ಅಯ್ತಾರ್, ಮಾಣಿಕ್ ದುಬೆ, ಶಾಮ್ಸ್ ತಬ್ರೇಜ್ ಹಕ್ಕಿ, ಹಿಮಾನಿ ಬಾಬ್ರ, ಅದಿಲ್ ರಶೀದ್, ಐಎಫ್‌ಎಸ್ ಅಧಿಕಾರಿಯಾದ ಡಾ. ಸುನೀಲ್ ಪಾನ್ವಾರ್ ವಾರ್ಸಿ, ತನ್ನೀರ್ ಅಹಮದ್ ಅಜೀಮ್, ಅಲಿ, ಅಬ್ದುಲ್ ಹಕೀಮ್, ಬಿಬಿ ಆಯಿಶಾ ಷಾ ಅಬ್ದುಲ್ ರಷೀದ್. ಮಿರ್ಜಾ ಅಬ್ಬಾಸ್ 14 ಕವಿಗಳು ಉರ್ದು ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.ಅಂದು ಪ್ರವೇಶ ಉಚಿತವಾಗಿರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕವಿಗೋಷ್ಠಿ ಉಪಸಮಿತಿ ಉಪವಿಶೇಷಾಧಿಕಾರಿ ಸೋಮ
ಶೇಖರ್, ಕಾರ್ಯಾಧ್ಯಕ್ಷೆ ಲೋಲಾಕ್ಷಿ, ಅಧ್ಯಕ್ಷ ಸುರೇಶ್, ಮನೋತ್ಕಣಿ, ಮರಿದೇವಯ್ಯ, ಸುಹೇಲ್ ಬೇಗ್, ಅಕ್ರಮ್ ಮತ್ತಿತರರು ಉಪಸ್ಥಿತರಿದ್ದರು.