ಭಾರೀ ಭದ್ರತೆಯಲ್ಲಿ 415ನೇ ದಸರಾ ಉದ್ಘಾಟಿಸಿದ ಬೂಕ‌ರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಸ್ತಾಕ್

ದಸರಾ ಸ್ಟೋರಿ: ನಂದಿನಿ ಮನುಪ್ರಸಾದ್ ನಾಯಕ್

ಚಾಮುಂಡಿಬೆಟ್ಟದಲ್ಲಿ 
415 ನೇ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರೆಯಿತು.

ಮೈಸೂರಿನ ಚಾಮುಂಡಿ ಬೆಟ್ಟದ ಸುತ್ತಾ ಮುತ್ತ ಬಾರೀ ಭದ್ರತೆ ನಡುವೆ ಹಳದಿ ಬಣ್ಣದ ಸೀರೆಯುಟ್ಟು ಮುಡಿಗೆ ಮಲ್ಲಿಗೆ ಹೂ ಮುಡಿದು ದೇವಸ್ಥಾನಕ್ಕೆ ತೆರಳಿ ಮೊದಲಿಗೆ ಚಾಮುಂಡಿ ತಾಯಿ ದರ್ಶನ ಪಡೆದು ವೇದಿಕೆ ಅಲಂಕರಿಸಿದ್ದರು.ಅವರ ಕುಟುಂಬದ ಸದಸ್ಯರೊಂದಿಗೆ ಆಗಮಿಸಿದ್ದರು.

ಚಾಮುಂಡಿ ಬೆಟ್ಟದ ದೇವಾಲಯ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್
ಚಾಮುಂಡಿ ತಾಯಿಗೆ ಮುಂಜಾನೆಯೇ ವಿಶೇಷ ಪೂಜೆ ಸಲ್ಲಿಸಿ ರಥದಲ್ಲಿ ಕೂರಿಸಲಾಗಿತ್ತು.
10.40 ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಬೂಕ‌ರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಸ್ತಾಕ್ ಅವರು ನಾಡದೇವಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ 2025ನೇ ಸಾಲಿನ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದ್ದು, ಉದ್ಘಾಟಕಿ ಬಾನು ಮುಷ್ತಾಕ್‌ ಅವರು ಭಾಷಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಾನು ಮುಷ್ತಾಕ್‌ ಅವರು, ಈ ದಿನ ದಸರಾ ಉತ್ಸವದ ಉದ್ಘಾಟನೆಯನ್ನು ತಾಯಿ ಚಾಮುಂಡೇಶ್ವರಿ ಕೃಪಾರ್ಶಿವಾದದಿಂದ ಉದ್ಘಾಟಿಸಿದ್ದೇನೆ.
ನನ್ನ ಗೆಳತಿಯೊಬ್ಬರು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬರುತ್ತೇನೆ ಎಂದು ಹರಕೆ ಹೊತ್ತಿದ್ದಳು. ಬರಲು ಸಾಧ್ಯವಾಗಿರಲಿಲ್ಲ. ಆದರೆ ರಾಜ್ಯ ಸರ್ಕಾರದ ಮೂಲಕ ನನ್ನನ್ನು ಚಾಮುಂಡೇಶ್ವರಿ ಕರೆಸಿಕೊಂಡಿದ್ದಾಳೆ. ಒಂದು ಚರಿತ್ರಿಕ ಸನ್ನಿವೇಶಗಳು ಉದ್ಭವವಾದರು ತಾಯಿ ಚಾಮುಂಡೇಶ್ವರಿ ಕರೆಸಿಕೊಂಡಿದ್ದಾಳೆ. ಸಾಂಸ್ಕೃತಿಕ ಉತ್ಸವ ಎಲ್ಲರನ್ನು ಸಮನ್ವಯಗೊಳಿಸುತ್ತದೆ. ಈ ಮಣ್ಣಿನಲ್ಲಿ ಹುಟ್ಟಿರುವ ಪ್ರತಿಯೊಬ್ಬರಿಗೂ ಪಾಲ್ಗೊಳ್ಳುವ ಅವಕಾಶ ಇದೆ. ಕನ್ನಡ ಭಾಷೆಯ ಹೃದಯದ ಸ್ಪಂದನೆಗೆ ಈ ಹಬ್ಬ ನೆನಪಿಸುತ್ತದೆ. ಏಕತೆಯ ಸುಗಂಧ ಈ ಹಬ್ಬದ ಪ್ರತೀಕವಾಗಿದೆ ಮೈಸೂರಿನ ಉರ್ದು ಭಾಷಿಕರು ದಸರಾ ಹಬ್ಬದ ಎಲ್ಲಾ ಹತ್ತು ದಿನಗಳಲ್ಲೂ ತಮ್ಮ ಗುರುತುಗಳನ್ನು ನೀಡಿದ್ದಾರೆ.
ಎಲ್ಲರನ್ನು ಒಳಗೊಂಡು ಆಚರಿಸುವ ಸಂಸ್ಕೃತಿ ಇದಾಗಿದೆ. ನನ್ನ ಮಾವ ಮೈಸೂರು ಮಹಾರಾಜರ ಅಂಗ ರಕ್ಷಕರಾಗಿದ್ದರು. ಅಂತಹ ಅನೇಕ ಮುಸ್ಲಿಂಮರು ಮಹಾರಾಜರಿಗೆ ಅಂಗರಕ್ಷಕರಾಗಿದ್ದರು. ಮಹಾರಾಜರು ಮುಸ್ಲಿಂರನ್ನು ನಂಬಿ ಅವರನ್ನು ಅಂಗರಕ್ಷಕರಾಗಿ ಇಟ್ಟು ಕೊಂಡಿದ್ದು ಬಹಳ ಖುಷಿ. ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸೋಣ. ಈ ದಸರಾ ಕೇವಲ ಮೈಸೂರಿಗೆ ಸೀಮಿತವಾಗದೆ ಇಡೀ ಜಗತ್ತಿನ ಮಾನವ ಕುಲಕ್ಕೆ ಶಾಂತಿ, ನ್ಯಾಯ, ಸಮಾನತೆಯ ದೀಪವಾಗಲಿ. ಈ ದಸರಾ ಆಚರಣೆ ಇಡೀ ಪ್ರಪಂಚಾದ್ಯಂತ ನೆಲೆ ಕಂಡುಕೊಳ್ಳಲಿ ಎಂದು ಆಶಿಸುತ್ತೇನೆ.ನಾವೆಲ್ಲರೂ ಒಂದೇ ಗಗನದಡಿಯ ಪಯಣಿಗರು. ಮನುಷ್ಯ ಮಾತ್ರ ಗಡಿಗಳನ್ನು ಹಾಕಿಕೊಂಡಿರುತ್ತಾನೆ. ಪರಿಸರ ಎಂದಿಗೂ ಗಡಿ ಹಾಕಿಕೊಳ್ಳುವುದಿಲ್ಲ.. ಸ್ತ್ರೀ ಎಂದರೆ ಕೇವಲ ತಾಯಿ ಮಾತ್ರವಲ್ಲ ಅನ್ಯಾಯದ ವಿರುದ್ಧ ಹೊರಡುವ ಶಕ್ತಿಯು ಹೌದು. ನಾವೆಲ್ಲರೂ ಒಂದೇ ಗಗನದಡಿಯ ಪಯಣಿಗರು. ಮನುಷ್ಯ ಮಾತ್ರ ಗಡಿಗಳನ್ನು ಹಾಕಿಕೊಂಡಿರುತ್ತಾನೆ. ಪರಿಸರ ಎಂದಿಗೂ ಗಡಿ ಹಾಕಿಕೊಳ್ಳುವುದಿಲ್ಲ.. ನಾನು ನೂರಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಮಂಗಳಾರತಿಯನ್ನು ತೆಗೆದುಕೊಂಡಿದ್ದೇನೆ. ಎಷ್ಟೇ ಸವಾಲುಗಳು ಬಂದರು ದಿಟ್ಟವಾಗಿ ನಿಂತು ನೈತಿಕ ಬೆಂಬಲ ನೀಡಿದ ಸಿಎಂ ಸಿದ್ದರಾಮಯ್ಯ ಅವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
*
ವಿರೋಧ ಮಾಡಿದವರಿಗೆ ಭಾಷಣದ ಮೂಲಕ ಟಾಂಗ್ ಕೊಟ್ಟ ಬಾನುಮುಷ್ತಾಕ್*

ಈ ನೆಲದ ಪರಂಪರೆ ಇದು ಸರ್ವಜನಾಂಗದ ಶಾಂತಿಯ ತೋಟದ ಅಂತ ಹೇಳುತ್ತೆ. ಪ್ರತಿ ಹೂ ತನ್ನ ತೋಟದಲ್ಲಿ ಅರಳಲಿ. ಒಟ್ಟಿಗೆ ಸೇರಿದಾಗ ಎಲ್ಲರೂ ಒಂದಾಗಲಿ. ನಾವೆಲ್ಲರೂ ಒಂದೇ ಗಗನದ ಪಯಣಿಕರು. ಭೂಮಿ ಯಾರನ್ನು ಹೊರ ತಳ್ಳಲ್ಲ. ಮನುಷ್ಯ ಮಾತ್ರ ಗಡಿ ಹಾಕುತ್ತಾನೆ. ಇದನ್ನು ನಾವೇ ಅಳಿಸಬೇಕು. ಆಸ್ತಗಳಿಂದಲ್ಲ ಅಕ್ಷರಗಳಿಂದ ನಾವು ಗೆಲ್ಲಬೇಕು ಎಂದು ವಿರೋಧ ಮಾಡಿದವರಿಗೆ ಭಾಷಣದ ಮೂಲಕ ಬಾನುಮುಷ್ತಾಕ್ ಟಾಂಗ್ ಕೊಟ್ಟರುಕೃಷ್ಣರಾಜ ಒಡೆಯರ್ ಸಾಮಾಜಿಕ ನ್ಯಾಯದ ದೊರೆ ಆಗಿದ್ದರು. ಭೇದ ಭಾವ ತೋರಲಿಲ್ಲ. ಶಕ್ತಿಯನ್ನು ಹಂಚಿಕೊಂಡರೆ ಧೀರ್ಘ ಕಾಲ ಉಳಿಯುತ್ತೆ ಅಂತ ಹೇಳಿದರು ಎಂದರು.ನಾನು ಒಬ್ಬ ಸಾಹಿತಿ ಲೇಖಕಿ. ಸಾಹಿತ್ಯದ ಮೂಲಕ ಸಂದೇಶ ಸಾರುತ್ತೇನೆ. 10 ವರ್ಷದ ಹಿಂದೆ ಬರೆದಿದ್ದ ಪ್ರಕಟಣೆ ಆಗಿದೆ.ಬಾಗಿನ ಅಂತ ಅದರ ಹೆಸರು. ಪ್ರೀತಿಯ ಸಮಾಜದ ಕಟ್ಟೋಣ ಎಲ್ಲರಿಗೂ ಸಮಪಾಲು ಸಮಬಾಳು ಇರಲಿ. ನಾನು ನೂರಾರು ದೀಪಗಳನ್ನು ಬೆಳಗಿದ್ದೇನೆ. ಪುಷ್ಪಾರ್ಚನೆ ಮಾಡಿದೇವೆ. ಮಂಗಳಾರತಿ ಸ್ವೀಕರಿಸಿದ್ದೇವೆ. ನನ್ನ ಹಿಂದೂ ಧರ್ಮದ ಸಂಬಂಧ ನನ್ನ ಆತ್ಮಕಥೆಯಲ್ಲಿ ಬರೆದಿದ್ದೇನೆ. ಅದು ನಾಳೆ ಪ್ರಕಟ ಆಗತ್ತೆ. ಎಷ್ಟೇ ಸವಾಲು ಬಂದರೂ ದಿಟ್ಟವಾಗಿ ನನ್ನನ್ನು ಆಹ್ವಾನ ನೀಡಿ ನೈತಿಕ ಬೆಂಬಲ ನೀಡಿದ ಸಿಎಂ ಜಿಲ್ಲಾಡಳಿತಕ್ಕೆ ನನ್ನ ಧನ್ಯವಾದಗಳು ಎಂದು ಬಾನು ಮುಸ್ತಾಕ್ ತಿಳಿಸಿದರು.

Leave a Reply

Your email address will not be published. Required fields are marked *