ಫ್ರೆಶ್ ಫೇಸ್ ಸೀಸನ್ 8 ಸಂಪನ್ನ

ನಂದಿನಿ ಮನುಪ್ರಸಾದ್ ನಾಯಕ್ 

 

*ಕಂಕಣ ಸಿಲ್ಕ್ಸ್ ಸಹಯೋಗದೊಂದಿಗೆ ರಾಜ್ ಡೈಮಂಡ್ಸ್ ವತಿಯಿಂದ ಜಯಂತಿ ಬಲ್ಲಾಳ್ ನೇತೃತ್ವದಲ್ಲಿ ಜೆಬಿ ಫ್ರೆಶ್ ಫೇಸ್ ಸೀಸನ್ 8 ಸಂಪನ್ನ*

– ಫ್ರೆಶ್ ಫೇಸ್ ಸೀಸನ್ 8 ಗ್ರ್ಯಾಂಡ್ ಫಿನಾಲೆಯು ಶನಿವಾರ ಮೈಸೂರಿನ ಅರ್ಕೋರ್‌ ಹೋಟೆಲ್ ನಲ್ಲಿ ನಡೆಯಿತು,

ಯುವಜನತೆ, ಪ್ರತಿಭೆ, ಫ್ಯಾಷನ್ ಮತ್ತು ಆತ್ಮವಿಶ್ವಾಸವನ್ನು ಆಚರಿಸುವ ಒಂದು ಐಕಾನಿಕ್ ವೇದಿಕೆಯಾದ ಫ್ರೆಶ್ ಫೇಸ್ ಬಹುನಿರೀಕ್ಷಿತ ,ವರ್ಷದ ಅತ್ಯಂತ ಮನಮೋಹಕ ಸುಂದರ ಕ್ಷಣಗಳನ್ನ ಕಣ್ತುಂಬಿಕೊಂಡ ವೀಕ್ಷಕರು,
ಈ ಸೀಸನ್ ದೊಡ್ಡ ಮತ್ತು ಪ್ರಕಾಶಮಾನವಾಗಿ ಯಶಸ್ವಿಯಾಗಿ ಮೂಡಿಬಂದಿತು,

ಗ್ರೂಮಿಂಗ್ ಸೆಷನ್‌ಗಳು ಮತ್ತು ಕ್ಯುರೇಟೆಡ್ ಸುತ್ತುಗಳ ಮೂಲಕ ತಮ್ಮ ಶೈಲಿ, ಸೃಜನಶೀಲತೆ ಮತ್ತು ವ್ಯಕ್ತಿತ್ವವನ್ನು ಪ್ರದರ್ಶಿಸಿದ ಸ್ಪರ್ಧಿಗಳು, ಅಂತಿಮ ಸ್ಪರ್ಧಿಗಳು ಪ್ರಸಿದ್ಧ ಉದ್ಯಮ ತಜ್ಞರಿಂದ ವ್ಯಾಪಕ ತರಬೇತಿ ಮತ್ತು ಮಾರ್ಗದರ್ಶನವನ್ನು ಪಡೆದು ಜಡ್ಜ್ ಗಳ ಗಮನ ಸೆಳೆಯಲು ಯಶಸ್ವಿಯಾದರು,

ಗ್ರ್ಯಾಂಡ್ ಫಿನಾಲೆಯಲ್ಲಿ 32 ಜನ ಸ್ಪರ್ಧಿಗಳಲ್ಲಿ ಶಶಾಂಕ್ , ಅನುಷ್ಕಾ ಉತ್ತಯ್ಯ ವಿನ್ನರ್ಸ್ ಪಟ್ಟ ಪಡೆದರೆ, ತರುಣ್ ಉತ್ತಪ್ಪ, ಸಿಯಾ ರನ್ನರ್ ಅಪ್ ಸ್ಥಾನ ಪಡೆದರು.ಬೆಸ್ಟ್ ಸ್ಮೈಲ್ ಅಂಜಲ್ ಹಾಗೂ ಸಚಿನ್,ಮಿಸ್ ಅ್ಯಟಿಟ್ಯೂಡ್ವ್ ಶ್ರೀವತ್ಸಲ ,ಮೇಲ್ ಆ್ಯಟಿಡ್ಯೂಡ್ ಯಾಸೀಮ್,

ಒಟ್ಟಾರೆ ಗ್ರ್ಯಾಂಡ್ ಫಿನಾಲೆಯಲ್ಲಿ ಹೈ-ಫ್ಯಾಷನ್ ಪ್ರದರ್ಶನಗಳು ಮತ್ತು ಈ ಸಾಲಿನ ಫ್ರೆಶ್ ಫೇಸ್ ವಿಜೇತರಿಗೆ ಕಿರೀಟಧಾರಣೆ ಮಾಡಲಾಯಿತು, ಜೊತೆಗೆ ಅಂಜಲಿ ಅನೀಶ್ , ಸೂರಜ್ ಗೌಡ, ಪ್ರಿಯಾಂಕಾ ಕುಮಾರ್ ತಾರಾ ಮೆರುಗು ನೀಡಿದರು

ಇದೆ ಸಂಧರ್ಭದಲ್ಲಿ ಕಾರ್ಯಕ್ರಮದ ಮುಖ್ಯ ರೂವಾರಿ ಜಯಂತಿ ಬಲ್ಲಾಳ್, ಕಂಕಣಸಿಲ್ಕ್ , ರಾಜ್ ಡೈಮಂಡ್ಸ್ , ಆರ್ಕೂರ್ ಹೋಟೆಲ್ ನ ಮಾಲಿಕರು ಸದಸ್ಯರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *