ನಂದಿನಿ ಮನುಪ್ರಸಾದ್ ಮೈಸೂರು
ಬಿ ಮರಿಯಪ್ಪ ಅಸೋಸಿಯೇಟ್ಸ್ ಅವರ ವತಿಯಿಂದ ಇಂದು ಮೈಸೂರು ದಸರಾ ಮಹೋತ್ಸವ 2025ರ ಹಿನ್ನೆಲೆಯಲ್ಲಿ ಮಾವುತರು ಹಾಗೂ ಕಾವಾಡಿಗರ ಕುಟುಂಬದೊಂದಿಗೆ ಅರಮನೆ ಆವರಣದಲ್ಲಿ ಔತಣಕೂಟವನ್ನು ಏರ್ಪಡಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ನ ಜಿಲ್ಲಾಧ್ಯಕ್ಷರಾದ ಡಾ. ಬಿ.ಜೆ ವಿಜಯ್ ಕುಮಾರ್, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿಕಟ ಪೂರ್ವ ರಾಜ್ಯದ್ಯಕ್ಷರಾದ ಬಿ ಸುಬ್ರಹ್ಮಣ್ಯರವರು, ಆಯೋಜಕರಾದ ಬಿ ಮರಿಯಪ್ಪನವರು, ಪವನ್ ಸಿದ್ದರಾಮ ಮಂಡಳಿ ಸದಸ್ಯರು ಕಾರಾಗೃಹ ಮತ್ತು ಸುಧಾರಣಾಸೇವೆ, ಮಹಿಳಾ ಮುಖಂಡರುಗಳಾದ ಶ್ರೀಮತಿ ರಾಧಾ ಅವಿನಾಶ್, ಮೀನಾಕ್ಷಿ ಕೃಷ್ಣಮೂರ್ತಿ, ತೇಜಸ್, ರಾಣಿಪ್ರಭ, ರಾಜೇಶ್, ಅರಣ್ಯಾಧಿಕಾರಿಗಳು ಅರಮನೆ ಸಿಬ್ಬಂದಿಗಳು ಸೇರಿದಂತೆ ಇನ್ನು ಅನೇಕರು ಭಾಗಿಯಾಗಿದ್ದರು.