ನಂದಿನಿ ಮನುಪ್ರಸಾದ್ ನಾಯಕ್
ರಾಷ್ಟ್ರೀಯ ಮಟ್ಟದ ಗಾಂಧಿ ಶಿಲ್ಪ ಬಜಾರ್
ಪುಪುಥಮ ಬಾರಿಗೆ ಅಭಿವೃದ್ಧಿ ಆಯುಕ್ತರು (ಕರಕುಶಲ), ಜವಳಿ ಸಚಿವಾಲಯ, ಭಾರತ ಸರಕಾರ, ನವದೆಹಲಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಜೆ ಎಸ್ ಎಸ್ ಮಹಾವಿದ್ಯಾಪೀಠದ ಜೆ ಎಸ್ ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ, ಗಾಂಧಿ ಶಿಲ್ಪ ಬಜಾರ್ ಮೇಳವನ್ನು ದಿನಾಂಕ 12-09-2025 ರಿಂದ 21-09-2026 ರವರೆಗೆ ಆಯೋಜನೆ ಮಾಡಲಾಗಿದ್ದು ಶಾಸಕ ಶ್ರೀವತ್ಸ ರವರು ಚಾಲನೆ ನೀಡಿದರು.
ಅಭಿವೃದ್ಧಿ ಆಯುಕ್ತರು (ಕರಕುಶಲ), ಜವಳಿ ಸಚಿವಾಲಯ, ಭಾರತ ಸರ್ಕಾರ, ನವದೆಹಲಿ ಕಚೇರಿಯ ಪ್ರಾಯೋಜಕತ್ವದಲ್ಲಿ, ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ರಾಷ್ಟ್ರೀಯ ಮಟ್ಟದ ಗಾಂಧಿ ಶಿಲ್ಪ, ಬಜಾರ್ ಮೇಳವನ್ನು 150 ಮಳಿಗೆಗಳಲ್ಲಿ ಆಯೋಜನ ಮಾಡಲಾಗಿದೆ. ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ರವರೆಗೆ 148 ಮೇಳಗಳನ್ನು ಯಶಸ್ವಿಯಾಗಿ ಆಯೋಜನೆ ಮಾಡಲಾಗಿದೆ.
ನಮ್ಮ ದೇಶದ 25 ಕ್ಕೂ ಹೆಚ್ಚು ರಾಜ್ಯಗಳ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಕರಕುಶಲಕರ್ಮಿಗಳು ಹಾಗೂ ಕೈಮಗ್ಗ ನೇಕಾರರು ಕರಕುಶಲ ಮತ್ತು ಕ್ರಮಗ ಉತ್ಪನ್ನಗಳು ಒಂದೇ ಸೂರಿ ನಡಿಯಲ್ಲಿ ಮೈಸೂರಿನ ಸಂಸ್ಕೃತಿ ಪ್ರಿಯರಿಗೆ ಲಭ್ಯವಾಗುವಂತೆ ಈ ಮೇಳದಲ್ಲಿ ಮಾಡಲಾಗಿದೆ. ಕುಶಲಕರ್ಮಿಗಳು ತಮ್ಮ ಕುಲಶಕಲೆಗಳನ್ನು ಗ್ರಾಹಕರ ಅಗತ್ಯ ಮತ್ತು ಅಭಿರುಚಿಯನ್ನು ತಿಳಿದುಕೊಂಡು ಮಾರುಕಟ್ಟೆಗೆ ಬೇಕಾದ ನವೀನ ವಿನ್ಯಾಸದ ವಸ್ತುಗಳನ್ನು ರೂಪಿಸಿಕೊಳ್ಳಲು ಈ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ.
ಮರದ ಕತ್ರನ, ಶಿಲಾ ಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ಮಣ್ಣಿನ ಮಡಿಕೆಗಳು, ಪೇಪರ್, ರತ್ನಗಂಬಳಿ, ಹತ್ತಿ ಜಮಕಾನ, ಇಮಿಟೇಶನ್ ಆಭರಣಗಳು, ಮರದ ಅರಗಿನ ಕಲಾವಸ್ತುಗಳು, ಬಾಟಿಕ್, ಕಲಾಂಕಾರಿ ಚಿತ್ರಕಲೆ, ಚರ್ಮದ ಅಕರ್ಷಕ ವಸ್ತುಗಳು,ಕಲಾತ್ಮಕ ಚರ್ಮದ ಚಪ್ಪಲಿಗಳು, ಚನ್ನಪಟ್ಟಣದ ಗೊಂಬೆಗಳು, ಕಸೂತಿ ಕಲೆ, ತಮಿಳುನಾಡು ರಾಜ್ಯದ ಶಾಂಜಾವೂರ್ ಚಿತ್ರಕಲೆಗಳು, ಮರದ ಕೆತ್ತನೆಗಳು,ಮಧ್ಯಪ್ರದೇಶ ರಾಜ್ಯದ ಮಹೇಶ್ವರಿ, ಚಂದೇರಿ ಸೀರೆಗಳು, ಬಿಹಾರ್ ರಾಜ್ಯದ ಮಧುಬನಿ ಚಿತ್ರಕಲೆ,ಒಡಿಶಾ ರಾಜ್ಯದ ಪಟ್ಟ ಚಿತ್ರ, ಬೆಳ್ಳಿಯ ಸೂಕ್ಷ್ಮ ವಿನ್ಯಾಸ ವಸ್ತುಗಳು, ಅಸ್ಕಾರಿ ರಾಜ್ಯದ ಬಿದಿರು-ಚಿತ್ರದ ವಸ್ತುಗಳು, ಡ್ರೈ ಪ್ರವರ್ಗಗಳು, ಉತ್ತರ ಪ್ರದೇಶ ರಾಜ್ಯದ ಚಿಕನ್ ಎಂಬಾಯರಿ ಕಲಾತ್ಮಕ ಕಲ್ಲಿನ ವಸ್ತುಗಳು, ಪಂಜಾಬ್ ರಾಜ್ಯದ ಫುಲ್ಕಾರಿ ಬಟ್ಟೆ ಗಳು, ಪಶ್ಚಿಮ ಬಂಗಾಳದ ಕಾಂತಾ ಸೀರೆಗಳು ಈ ಮೇಳ ದಲ್ಲಿ ಒಂದೇ ಸೂರಿನಡಿ ಖರೀದಿಗೆ ಸಿಗಲಿದೆ.
ಮಧ್ಯವರ್ತಿಗಳು ಇಲ್ಲದೆ ಗ್ರಾಹಕರು ಮತ್ತು ಉತ್ಪಾದಕರ ಮಧ್ಯೆ ನೇರ ಸಂಪರ್ಕ ಮತ್ತು ಸಂವಹನಕ್ಕೆ ಅವಕಾಶ ಕಲ್ಪಿಸುವ ಈ ಮೇಳ ಗ್ರಾಹಕ ಮತ್ತು ಕುಶಲಕರ್ಮಿಗಳ ಬಾಂಧವ್ಯ ವೃದ್ಧಿಗೂ ಅನುಕೂಲ ಒದಗಿಸುತ್ತಿದೆ, ಗಾಂಧಿ ಶಿಲ್ಪ, ಬಜಾರ್ ಮೇಳದಲ್ಲಿ ಭಾಗವಹಿಸುತ್ತಿರುವ ಕುಶಲಕರ್ಮಿಗಳಿಗೆ ಉಚಿತವಾಗಿ ಮಳಿಗೆಗಳನ್ನು ನೀಡಲಾಗುವುದು, ಜತೆಗೆ, ಪುಯಾಣ ಭತ್ಯೆ, ದಿನಭತ್ಯೆನ್ನೂ ಕರಕುಶಲ ಅಭಿವೃದ್ಧಿ ಅಯುಕ್ತರ ಕಚೇರಿಯಿಂದ ನೀಡಲಾಗುವುದು. ಈ ಗಾಂಧಿ ಶಿಲ್ಪ, ಬಜಾರ್ ಮೇಳದ ಮುಖ್ಯ ಆಕರ್ಷಣೆಯಾಗಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು (KSHDCL) ಇವರು ಕರ್ನಾಟಕದ ಭೌಗೋಳಿಕ ಗುರುತು ಪಡೆದ (GI) ಕರಕುಶಲ ವಸ್ತುಗಳೆಂದರೆ ಬಿದ್ರಿವೇರ್ (Bidriware) -ಬೀದರ್, ಕಸೂತಿ ಕಲೆ (Kasuti) – ಧಾರವಾಡ, ಮೈಸೂರು ರೋಸ್‌ುಡ್ ಇನ್‌ಲೇ (Mysore Rosewood Inlay) – ಮೈಸೂರು, ಚನ್ನಪಟ್ಟಣದ ಆಟಿಕೆಗಳು (Channapatna Toys) – ಚನ್ನಪಟ್ಟಣ, ಕಿನ್ನಾಳದ réริจ (Kinnal Toys) – ๒๐ (Lambeni Embroidery) – Nockeds, rozštapa ໖ (Ganjifa Art), ebod 4 (Navalgund Durries) (dderbod), ಮೈಸೂರು ಪೇಂಟಿಂಗ್‌ಗಳು (Mysore Paintings) – ಮೈಸೂರು ಇವುಗಳನ್ನು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
ಮೇಳದ ಇನ್ನೊಂದು ವಿಶೇಷತೆ ಎಂದರೆ ಮೇಳದ ಎಲ್ಲಾ 10 ದಿನಗಳಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಜೆಎಸ್‌ಎಸ್ ಹಾಸ್ಪಿಟಲ್ ರವರು ಮೇಳದಲ್ಲಿ ಭಾಗವಹಿಸಿರುವ ಕರಕುಶಲಕರ್ಮಿಗಳಿಗೆ, ಕೈಮಗ್ಗ ನೇಕಾರರಿಗೆ ಮತ್ತು ಮೇಳಕ್ಕೆ ಭೇಟಿ ನೀಡುವ ಗ್ರಾಹಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನ ಮಾಡಿದ್ರು, ಗ್ರಾಹಕರು ಇದರ ಪ್ರಯೋಜನನ್ನು ಪಡೆದುಕೊಳ್ಳಬೇಕೆಂದು ವಿನಂತಿಸಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು 2025ರ ಸೆಪ್ಟೆಂಬರ್ 12 ರಂದು ಶುಕ್ರವಾರ ಸಂಜೆ 4 ಗಂಟೆಗೆ ನೆರವೇರಿಸಲಾಗುವುದು. ಈ ಪ್ರದರ್ಶನ ಹಾಗೂ ಮಾರಾಟ 2025 ರ ಸೆಪ್ಟೆಂಬರ್ 12 ರಿಂದ 21 ರವರೆಗೆ ಬೆಳಿಗ್ಗೆ ಗಂಟೆ 10.30 ರಿಂದ ರಾತ್ರಿ 9.00ರವರೆಗೆ ಉಚಿತವಾಗಿ ತೆರೆದಿರುತ್ತದೆ.