ನಂದಿನಿ ಮನುಪ್ರಸಾದ್ ನಾಯಕ್
೨೧ ಸಾವಿರ ಮ್ಯಾಟ್ಗಳ ವಿತರಣೆ: ಗುರುಸ್ವಾಮಿ
ಮೈಸೂರು: ಜಿಲ್ಲೆಯಾದ್ಯಂತ ರಾಸುಗಳಿಗೆ ಏಳು ತಾಲ್ಲೂಕಿನಿಂದ ೨೧ಸಾವಿರ ಮ್ಯಾಟ್ಗಳನ್ನು ವಿತರಿಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿಯಮಿತದ ನಿರ್ದೇಶಕ ಬಿ.ಗುರುಸ್ವಾಮಿ ತಿಳಿಸಿದರು.
ತಾಲ್ಲೂಕಿನ ಹಂಚ್ಯಾ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದ ೨೦೨೪-೨೫ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಮೈಸೂರು ಏಳು ತಾಲ್ಲೂಕಿಗೆ ೨೧ ಸಾವಿರ ಮ್ಯಾಟ್ ಮಾತ್ರ ಖರೀದಿಗೆ ಮಾತ್ರ ಅವಕಾಶವಿದೆ. ಒಂದು ತಾಲ್ಲೂಕಿಗೆ ೩ ಸಾವಿರ ವಿಂಗಡಿಸಿದ್ದೇವೆ. ತಾಲ್ಲೂಕಿನಲ್ಲಿ ಬಿಎಂಸಿಗಳಿಗೆ ಕನಿಷ್ಠ ೨೫ ಮ್ಯಾಟ್, ಸೊಸೈಟಿಗಳಿಗೆ ೧೫ ಮ್ಯಾಟ್ ನೀಡಲಾಗುತ್ತಿದೆ. ಚಾಪ್ ಕಟರ್ ವಿತರಣೆಗೆ ಟೆಂಡರ್ ಆಗಿದ್ದು, ತಮ್ಮ ಸಂಘಗಳ ಮೂಲಕ ವಿನಿಯಿತಿ ದರದಲ್ಲಿ ಕೊಳ್ಳಬಹುದಾಗಿದೆ ಎಂದರು.
ಹಂಚ್ಯಾ ಹಾಲು ಉತ್ಪಾದಕರ ಸಹಕಾರ ಸಂಘ ೨೪ಲಕ್ಷ ಹಾಲು ವಾರ್ಷಿಕ ಮಾರಾಟ ಮಾಡಿರುವುದು ಸ್ವಾಗತಾರ್ಹವಾಗಿದೆ. ಉತ್ತಮವಾಗಿ ಕೆಲಸ ಮಾಡುತ್ತಿರುವ ಆಡಳಿತ ಮಂಡಳಿಯಿಂದ ಕನಿಷ್ಠ ೫೬೧೦೫೪ ರೂ. ಹಣ ಉಳಿತಾಯ ಮಾಡಿದ್ದಾರೆ. ಇದರಲ್ಲಿ ೨ಲಕ್ಷ ೬೫ ಸಾವಿರ ರೂ.ಗಳನ್ನು ರೈತ ಸದಸ್ಯರಿಗೆ ಬೋನಸ್ ನೀಡುತ್ತಿದ್ದಾರೆ ಸಂತಸದ ವಿಚಾರ ಎಂದು ಹೇಳಿದರು.
ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿಯಮಿತದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೆ.ಊಮಾಶಂಕರ್ ಮಾತನಾಡಿ, ಪ್ರತಿ ಸಾರಿಯೂ ಸಂಘ ಲಾಭದಾಯಕವಾಗಿ ನಡೆಯುತ್ತಿರುವುದು ಸಂತಸದ ವಿಷಯ. ಹಿಂದೆ ವಿಮೆಯನ್ನು ಶೇ.೫೦ರಷ್ಟು ಒಕ್ಕೂಟ ಉಳಿದಿದ್ದು ರೈತರು ಭರಿಸುತ್ತಿದ್ದರೂ ಈಗ ಸಂಪೂರ್ಣ ವಿಮಾ ಹಣವನ್ನು ಒಕ್ಕೂಟವೇ ಭರಿಸಲು ತೀರ್ಮಾನಿಸಿದ್ದು, ನೀವು ಕೇವಲ ದಾಖಲಾತಿ ಕೊಡಬೇಕಷ್ಟೇ ಆಗಿದೆ. ಮಾತ್ರವಲ್ಲದೆ ಶೇ.೫೦ರಷ್ಟು ರಾಸುಗಳಿಗೂ ವಿಮೆ ಸೌಲಭ್ಯ ನೀಡಲಾಗುತ್ತಿದೆ. ಇದನ್ನು ಈಗ ಶೇ.೭೫ರಷ್ಟು ಒಕ್ಕೂಟ ಭರಿಸಲು ತೀರ್ಮಾನಿಸಿದೆ. ಹೀಗಾಗಿ ನೀವು ಹಾಗೂ ರಾಸುಗಳಿಗೂ ಕಡ್ಡಾಯವಾಗಿ ವಿಮೆ ಮಾಡಿಸುವಂತೆ ಸಲಹೆ ನೀಡಿದರು.
ಮೈಮುಲ್ ವಿಸ್ತರಣಾಧಿಕಾರಿ ಡಾ.ಎಂ.ಪರಮೇಶ್ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು. ಹಂಚ್ಯಾ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಎಚ್.ಸಿ.ನಾಗೇಂದ್ರಮೂರ್ತಿ ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಒಕ್ಕೂಟದ ತಾಲ್ಲೂಕು ಮೇಲ್ವೀಚಾರಕ ಸಂತೋಷ್ ರಾಸುಗಳು ಹಾಲಿನ ಗುಣಮಟ್ಟದ ಕುರಿತು ತಿಳಿಸಿಕೊಟ್ಟರು.
ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿಯಮಿತದ ಒಕ್ಕೂಟದ ನಿರ್ದೇಶಕಿ ಲೀಲಾ ನಾಗರಾಜ್, ಹಂಚ್ಯಾ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದ ಉಪಾಧ್ಯಕ್ಷ ಮಹದೇವ, ನಿರ್ದೇಶಕರಾದ ದೇವರಾಜ, ಜವರೇಗೌಡ, ಚನ್ನಬೋರೇಗೌಡ, ರಾಮಚಂದ್ರ, ಎಚ್.ಎಂ.ಶಿವಣ್ಣ, ಸಿದ್ದಲಿಂಗು, ತಿಮ್ಮಶೆಟ್ಟಿ, ಚಿಕ್ಕನಂಜಯ್ಯ, ಸಾಕಮ್ಮ, ಪುಟ್ಟಮ್ಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್.ರಾಮಚಂದ್ರ, ಹಾಲು ಪರೀಕ್ಷಕ ಶಂಭುಲಿಂಗಪ್ಪ ಇನ್ನಿತರರು ಉಪಸ್ಥಿತರಿದ್ದರು.