ಮೈಸೂರಿನಲ್ಲಿ ಸೌಂದರ್ಯಕ್ಕೆ ಹೊಸ ವ್ಯಾಖ್ಯಾನ: ಬಾಡಿ ಕ್ರಾಫ್ಟ್ ಕ್ಲಿನಿಕ್ – ಸಲೂನ್‌ನಿಂದ ಹೊಸ ಫ್ಲ್ಯಾಗ್ಶಿಫ್ ಮಳಿಗೆ ಶುಭಾರಂಭ

ನಂದಿನಿ ಮನುಪ್ರಸಾದ್ ನಾಯಕ್

ಮೈಸೂರಿನಲ್ಲಿ ಸೌಂದರ್ಯಕ್ಕೆ ಹೊಸ ವ್ಯಾಖ್ಯಾನ:
ಬಾಡಿ ಕ್ರಾಫ್ಟ್ ಕ್ಲಿನಿಕ್ – ಸಲೂನ್‌ನಿಂದ ಹೊಸ ಫ್ಲ್ಯಾಗ್ಶಿಫ್ ಮಳಿಗೆ ಶುಭಾರಂಭ

ಮೈಸೂರು ಸೆಪ್ಟೆಂಬರ್ 6, 2024: ಚರ್ಮರೋಗ ಶಾಸ್ತ್ರ-ಆಧಾರಿತ ಸೌಂದರ್ಯವರ್ಧಕ ಚಿಕಿತ್ಸೆಗಳು ಮತ್ತು ಸಲೂನ್ ಪರಿಣತಿಯಲ್ಲಿ ಭಾರತದ ಅಗ್ರಗಣ್ಯ ಹಾಗೂ ವಿಶ್ವಾಸಾರ್ಹ ಸಂಸ್ಥೆಯಾದ ಬಾಡಿ ಕ್ರಾಫ್ಟ್ ಕ್ಲಿನಿಕ್ ಮತ್ತು ಸಲೂನ್, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತನ್ನ ಮೊತ್ತಮೊದಲ ಬೃಹತ್ ಮಳಿಗೆಯನ್ನು (Flagship Destination) ಅನಾವರಣಗೊಳಿಸಿದೆ. 3,950 ಚದರ ಅಡಿಗಳ ವಿಸ್ತಾರವಾದ ಈ ಕೇಂದ್ರವು, ಸಂಸ್ಥೆಯ ವಿಶಿಷ್ಟವಾದ ‘ಸಿಗ್ನೇಚರ್ ಹೈಬ್ರಿಡ್ ಎಕ್ಸ್‌ಪೀರಿಯನ್ಸ್’ (ಚರ್ಮರೋಗ ಚಿಕಿತ್ಸೆ, ಕಾಸ್ಮೆಟಾಲಜಿ ಮತ್ತು ಸಲೂನ್ ಸೇವೆಗಳ ಸಮಗ್ರ ಸಂಗಮ) ಅನ್ನು ಮೈಸೂರು ನಗರಕ್ಕೆ ಪ್ರಥಮ ಬಾರಿಗೆ ಪರಿಚಯಿಸುತ್ತಿದೆ. 1997ರಲ್ಲಿ ಶ್ರೀಮತಿ ಮಂಜುಳಾ ಗುಪ್ತಾ ಅವರಿಂದ ಸ್ಥಾಪಿಸಲ್ಪಟ್ಟ ಬಾಡಿ ಕ್ರಾಫ್ಟ್, 28 ವರ್ಷಗಳ ತನ್ನ ಸಮೃದ್ಧ ಪರಂಪರೆಯಲ್ಲಿ, ತಜ್ಞರ ನೇತೃತ್ವದ ಸೌಂದರ್ಯ ಮತ್ತು ಸ್ವಾಸ್ಥ್ಯ ಸೇವೆಗಳನ್ನು ನೀಡುತ್ತಾ ಬಂದಿದೆ. ಈ ಮಳಿಗೆಯ ಸ್ಥಾಪನೆಯೊಂದಿಗೆ, ಸಂಸ್ಥೆಯು ತನ್ನ 31ನೇ ಕ್ಲಿನಿಕ್ ಹಾಗೂ 32ನೇ ಸಲೂನ್‌ಗೆ ಚಾಲನೆ ನೀಡಿದ್ದು, ಮಹಾನಗರಗಳನ್ನು ಮೀರಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬಾಡಿ ಕ್ರಾಫ್ಟ್ ಸಂಸ್ಥಾಪಕಿ ಶ್ರೀಮತಿ ಮಂಜುಳಾ ಗುಪ್ತಾ, “ಬಾಡಿ ಕ್ರಾಫ್ಟ್ ಅನ್ನು ಮೈಸೂರಿಗೆ ತರುತ್ತಿರುವುದು ನನಗೆ ಅಪಾರ ಹರ್ಷವನ್ನುಂಟುಮಾಡಿದೆ. ಸುಮಾರು ಮೂರು ದಶಕಗಳಿಂದ, ನಮ್ಮ ಗ್ರಾಹಕರಿಗೆ ವಿಶ್ವದರ್ಜೆಯ, ಚರ್ಮರೋಗ ತಜ್ಞರ ಬೆಂಬಲಿತ ಸೇವೆಗಳನ್ನು ವೈಯಕ್ತಿಕ ಕಾಳಜಿಯೊಂದಿಗೆ ನೀಡುವುದೇ ನಮ್ಮ ಧ್ಯೇಯ. ಈ ಮಳಿಗೆಯು ನಮ್ಮ ಈ ಸುದೀರ್ಘ ಪಯಣದ ದ್ಯೋತಕ. ಮೈಸೂರಿನ ಜನರು ಬಾಡಿ ಕ್ರಾಫ್ಟ್‌ನ ಸಮಗ್ರ ಸೌಂದರ್ಯ ಮತ್ತು ಸ್ವಾಸ್ಥ್ಯದ ಅನುಭವವನ್ನು ಪಡೆಯಲಿದ್ದಾರೆ ಎಂಬುದು ನನಗೆ ಸಂತಸ ತಂದಿದೆ,” ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.
ಈ ಮಳಿಗೆಯ ಆರಂಭದೊಂದಿಗೆ, ಬಾಡಿ ಕ್ರಾಫ್ಟ್ ಕ್ಲಿನಿಕ್ ಮತ್ತು ಸಲೂನ್, ಭಾರತದ 10 ನಗರಗಳಲ್ಲಿ ಒಟ್ಟು 63 ಮಳಿಗೆಗಳನ್ನು (31 ಕ್ಲಿನಿಕ್‌ಗಳು ಮತ್ತು 32 ಸಲೂನ್‌ಗಳು) ಹೊಂದಿದ್ದು, ದೇಶಾದ್ಯಂತ 3.5 ಲಕ್ಷಕ್ಕೂ ಹೆಚ್ಚು ನಿಷ್ಠಾವಂತ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಬೆಂಗಳೂರು, ಗುರುಗ್ರಾಮ, ಚೆನ್ನೈ, ಮುಂಬೈ, ಕಾನ್ಪುರ, ಲಕ್ನೋ, ಡೆಹ್ರಾಡೂನ್ ಮತ್ತು ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಈಗಾಗಲೇ ತನ್ನ ಛಾಪು ಮೂಡಿಸಿರುವ ಸಂಸ್ಥೆಯು, ಪ್ರೀಮಿಯಂ ಸೌಂದರ್ಯ ಮತ್ತು ಸ್ವಾಸ್ಥ್ಯ ವಿಭಾಗದಲ್ಲಿ ತನ್ನ ವ್ಯಾಪ್ತಿ, ವಿಶ್ವಾಸಾರ್ಹತೆ ಮತ್ತು ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸುತ್ತಿದೆ.
ಜಾಗತಿಕ ಗುಣಮಟ್ಟದ ಸೇವೆಗಳನ್ನು ಸ್ಥಳೀಯವಾಗಿ ಬಯಸುವ ವಿವೇಚನಾಶೀಲ ಗ್ರಾಹಕರಿಂದಾಗಿ, ಮೈಸೂರು ಪ್ರೀಮಿಯಂ ಸೌಂದರ್ಯ ಮತ್ತು ಸ್ವಾಸ್ಥ್ಯ ಸೇವೆಗಳ ಪ್ರಮುಖ ಬೆಳವಣಿಗೆಯ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿದೆ. ಈ ಹಿನ್ನೆಲೆಯಲ್ಲಿ, ಬಾಡಿ ಕ್ರಾಫ್ಟ್ ಸಂಸ್ಥೆಯು ಮೈಸೂರಿನಲ್ಲಿ ತನ್ನ ಮಳಿಗೆಯನ್ನು ಸ್ಥಾಪಿಸಲು ಬಹಳ ಹಿಂದಿನಿಂದಲೇ ಯೋಜನೆ ರೂಪಿಸಿತ್ತು. ಈ ಕುರಿತು ಮಾತನಾಡಿದ ಬಾಡಿ ಕ್ರಾಫ್ಟ್ ಕ್ಲಿನಿಕ್ಸ್‌ನ ಸಂಸ್ಥಾಪಕರು ಮತ್ತು ವೈದ್ಯಕೀಯ ನಿರ್ದೇಶಕರಾದ, ಪ್ರಮಾಣೀಕೃತ ಚರ್ಮರೋಗ ತಜ್ಞೆ ಡಾ. ಮಿಕ್ಕಿ ಸಿಂಗ್, “ಮೈಸೂರು ನಮಗೆ ಯಾವಾಗಲೂ ಎರಡನೇ ಮನೆಯಂತೆ ಭಾಸವಾಗಿದೆ. ಬೆಂಗಳೂರಿನ ನಮ್ಮ ಮಳಿಗೆಗಳಲ್ಲಿ ಮೈಸೂರಿನ ಅನೇಕ ಗ್ರಾಹಕರಿಗೆ ನಾವು ಸೇವೆ ನೀಡಿದ್ದೇವೆ. ಇಲ್ಲಿ ಮಳಿಗೆ ತೆರೆಯುವುದು ನಮ್ಮ ಪಾಲಿಗೆ ಒಂದು ಸಹಜ ಆಲೋಚನೆ. ಈ ಮೂಲಕ ಇಂಜೆಕ್ಟಬಲ್ಸ್, ತೂಕ ನಿರ್ವಹಣೆ, ಮತ್ತು ಇತರ ಸುಧಾರಿತ ಚರ್ಮರೋಗ ಚಿಕಿತ್ಸೆಗಳನ್ನು ನಾವು ಜಾಗತಿಕ ಗುಣಮಟ್ಟವನ್ನು ಬಯಸುವ ಮೈಸೂರಿನ ವಿವೇಚನಾಶೀಲ ಗ್ರಾಹಕರಿಗೆ ತಲುಪಿಸಲು ಉತ್ಸುಕರಾಗಿದ್ದೇವೆ,” ಎಂದರು.
ಗ್ರಾಹಕರು ಬಾಡಿ ಕ್ರಾಫ್ಟ್ ಕ್ಲಿನಿಕ್‌ನ ಅತ್ಯುನ್ನತ ಕಾಸ್ಮೆಟಾಲಜಿ ಮತ್ತು ಚರ್ಮರೋಗ ಚಿಕಿತ್ಸಾ ಸೇವೆಗಳನ್ನು ನಿರೀಕ್ಷಿಸಬಹುದು. ಇದರಲ್ಲಿ, ಮೊಡವೆ, ವಯಸ್ಸಾಗುವಿಕೆ ತಡೆ (anti-ageing), ಚರ್ಮದ ಪುನಶ್ಚೇತನ, ತೂಕ ಇಳಿಕೆ ಮತ್ತು ಸುಧಾರಿತ ಕೂದಲು ಬೆಳವಣಿಗೆಯಂತಹ ವಿಶೇಷ ಪರಿಹಾರಗಳು ಸೇರಿವೆ.
ಸಲೂನ್ ವಿಭಾಗದಲ್ಲಿ, ಮೈಸೂರಿನ ಗ್ರಾಹಕರು ಪರಿಣಿತ ಕೇಶ ವಿನ್ಯಾಸ, ಹೇರ್ ಕಲರಿಂಗ್, ಕರ್ಲ್ ಕೇರ್, ಸ್ಪಾ ಮತ್ತು ಸ್ವಾಸ್ಥ್ಯ ಚಿಕಿತ್ಸೆಗಳು ಹಾಗೂ ಸಮಗ್ರ ಅಂದಗೊಳಿಸುವ (holistic grooming) ಸೇವೆಗಳಲ್ಲಿ ಬಾಡಿ ಕ್ರಾಫ್ಟ್‌ನ ಪರಿಣತಿಯನ್ನು ಅನುಭವಿಸಬಹುದು. ಈ ಎಲ್ಲಾ ಸೇವೆಗಳನ್ನು ತರಬೇತಿ ಪಡೆದ ಸ್ಟೈಲಿಸ್ಟ್‌ಗಳು ಮತ್ತು ತಜ್ಞರು ಒದಗಿಸಲಿದ್ದಾರೆ.
ಈ ಕುರಿತು ಮಾತನಾಡಿದ ಬಾಡಿ ಕ್ರಾಫ್ಟ್ ಕ್ಲಿನಿಕ್ಸ್ ಮತ್ತು ಸಲೂನ್ಸ್‌ನ ಸಿಇಒ ಶ್ರೀ ಸಾಹಿಲ್ ಗುಪ್ತಾ, “ಬಾಡಿ ಕ್ರಾಫ್ಟ್‌ನಲ್ಲಿ, ನಾವು ಕೇವಲ ವಿಸ್ತರಣೆಗಾಗಿ ಬೆಳೆಯುವುದಿಲ್ಲ, ಒಂದು ಉದ್ದೇಶದೊಂದಿಗೆ ಬೆಳೆಯುತ್ತೇವೆ. ಮೈಸೂರಿಗೆ ನಮ್ಮ ಪ್ರವೇಶವು, ಪ್ರತಿ ಹೊಸ ಮಾರುಕಟ್ಟೆಯಲ್ಲೂ ಗುಣಮಟ್ಟ, ಸ್ಥಿರತೆ ಮತ್ತು ಗ್ರಾಹಕರ ನಂಬಿಕೆಗೆ ಆದ್ಯತೆ ನೀಡುವ ನಮ್ಮ ಚಿಂತನಶೀಲ ವಿಸ್ತರಣಾ ಯೋಜನೆಯ ಭಾಗವಾಗಿದೆ,” ಎಂದು ಹೇಳಿದರು.
ಈ ಶುಭಾರಂಭದ ಅಂಗವಾಗಿ, ಬಾಡಿ ಕ್ರಾಫ್ಟ್ ಸಂಸ್ಥೆಯು ಆಕರ್ಷಕ ಆರಂಭಿಕ ಕೊಡುಗೆಗಳನ್ನು ಘೋಷಿಸಿದೆ. ಮೊದಲ ಬಾರಿಗೆ ಸಲೂನ್‌ಗೆ ಭೇಟಿ ನೀಡುವ ಗ್ರಾಹಕರಿಗೆ 50% ರಿಯಾಯಿತಿ ಹಾಗೂ ಉಚಿತ ಸೇವೆಗಳನ್ನು ನೀಡಲಾಗುತ್ತಿದೆ. ಹಾಗೆಯೇ, ಕ್ಲಿನಿಕ್ ಗ್ರಾಹಕರಿಗಾಗಿ, ಆಯ್ದ ಕ್ಲಿನಿಕ್ ಚಿಕಿತ್ಸೆಗಳ ಮೇಲೆ 40% ವರೆಗೆ ರಿಯಾಯಿತಿ ಮತ್ತು ಉಚಿತ ವೈದ್ಯಕೀಯ ಸಮಾಲೋಚನೆಯನ್ನು ನೀಡಲಾಗುತ್ತಿದೆ.

ಈ ಕುರಿತು ಮಾತನಾಡಿದ ಬಾಡಿ ಕ್ರಾಫ್ಟ್ ಸಲೂನ್‌ನ ನಿರ್ದೇಶಕಿ ಮತ್ತು ಸೃಜನಾತ್ಮಕ ವಿಭಾಗದ ಮುಖ್ಯಸ್ಥೆ ಕು. ಸ್ವಾತಿ ಗುಪ್ತಾ, “ಮೈಸೂರಿನಲ್ಲಿ ನಾವು ನೀಡುವ ಪ್ರತಿಯೊಂದು ಸೇವೆಯು ಜಾಗತಿಕ ಪರಿಣತಿಯೊಂದಿಗೆ ಬಾಡಿ ಕ್ರಾಫ್ಟ್‌ನ ವಿಶಿಷ್ಟವಾದ ವೈಯಕ್ತಿಕ ಸ್ಪರ್ಶ ಹೊಂದಿದೆ. ಇದು ನಮ್ಮ ಎಲ್ಲಾ ಮಳಿಗೆಗಳಲ್ಲಿ ನಾವು ನೀಡುವ ಶ್ರೇಷ್ಠತೆಯ ಗುಣಮಟ್ಟವನ್ನೇ ಮೈಸೂರಿನ ಗ್ರಾಹಕರಿಗೂ ಖಾತ್ರಿಪಡಿಸುತ್ತದೆ,” ಎಂದು ಹೇಳಿದರು.
ತನ್ನ 28 ವರ್ಷಗಳ ಸುದೀರ್ಘ ಪರಂಪರೆಯೊಂದಿಗೆ, ಬಾಡಿ ಕ್ರಾಫ್ಟ್ ಸಂಸ್ಥೆಯು ಸಮಗ್ರ ಸೌಂದರ್ಯ ಮತ್ತು ಸ್ವಾಸ್ಥ್ಯದ ಎಲ್ಲೆಗಳನ್ನು ವಿಸ್ತರಿಸುತ್ತಲೇ ಇದೆ. ಗ್ರಾಹಕರು ಇನ್ನು ಮುಂದೆ ಸಲೂನ್ ಸೇವೆಗಳಿಂದ ಹಿಡಿದು, ಸುಧಾರಿತ ಚರ್ಮರೋಗ ಚಿಕಿತ್ಸೆ (dermatology), ಕಾಸ್ಮೆಟಾಲಜಿ ಮತ್ತು ವೈಯಕ್ತಿಕಗೊಳಿಸಿದ ತೂಕ ನಿರ್ವಹಣೆ ಕಾರ್ಯಕ್ರಮಗಳವರೆಗೆ, ಬಾಡಿ ಕ್ರಾಫ್ಟ್‌ನ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ಪಡೆಯಬಹುದು. ಇಲ್ಲಿ, ‘ಸ್ಯಾಸೂನ್ ಅಕಾಡೆಮಿ’ಯಲ್ಲಿ ತರಬೇತಿ ಪಡೆದ ಪರಿಣಿತ ಸ್ಟೈಲಿಸ್ಟ್‌ಗಳು, FDA-ಅನುಮೋದಿತ ಸೌಂದರ್ಯವರ್ಧಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಆಧಾರಿತ ತ್ವಚೆಯ ವಿಶ್ಲೇಷಣೆ, ಸುಧಾರಿತ ಕೂದಲು ರೋಗನಿರ್ಣಯ, ಹಾಗೂ ರಕ್ತ ಪರೀಕ್ಷೆ (blood marker) ಮತ್ತು ಕರುಳಿನ ಸೂಕ್ಷ್ಮಜೀವಿಗಳ (gut microbiome) ಪರೀಕ್ಷೆಯ ಆಧಾರದ ಮೇಲೆ ರೂಪಿಸಲಾದ ವೈಯಕ್ತಿಕ ತೂಕ ನಿರ್ವಹಣಾ ಕಾರ್ಯಕ್ರಮಗಳು ಲಭ್ಯವಿವೆ.
ದೇಶಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸಿರುವ ಮತ್ತು ಬೆಂಗಳೂರು, ಲಕ್ನೋ, ಹಾಗೂ ಹೈದರಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ಬಾಡಿ ಕ್ರಾಫ್ಟ್ ಸಂಸ್ಥೆಗೆ, ಮೈಸೂರಿನ ಈ ಬೃಹತ್ ಮಳಿಗೆಯು ಅದರ ಬೆಳವಣಿಗೆ, ವ್ಯಾಪ್ತಿ ಮತ್ತು ವಿಶ್ವಾಸಾರ್ಹತೆಗೆ ಹಿಡಿದ ಕೈಗನ್ನಡಿಯಾಗಿದೆ. ಇದಲ್ಲದೆ, ಸಂಸ್ಥೆಯು ತನ್ನ ನಿಷ್ಠಾವಂತ ಗ್ರಾಹಕರಿಗೆ ವಿಶೇಷ ಸವಲತ್ತುಗಳು ಮತ್ತು ಪ್ರಯೋಜನಗಳನ್ನು ನೀಡಲು ವಿನ್ಯಾಸಗೊಳಿಸಲಾದ “ಬಾಡಿ ಕ್ರಾಫ್ಟ್ ಒನ್” (Bodycraft ONE) ಎಂಬ ಸದಸ್ಯತ್ವ ಕಾರ್ಯಕ್ರಮವನ್ನು ಸಹ ನೀಡುತ್ತದೆ.
ಸುರಕ್ಷಿತ, ಪರಿಣಾಮಕಾರಿ, ಮತ್ತು ನಿಮಗಾಗಿಯೇ ರೂಪಿಸಿದ ಸೌಂದರ್ಯ ಪರಿಹಾರಗಳಿಗಾಗಿ ನಿಮ್ಮ ಏಕೈಕ ತಾಣ. ಬಾಡಿ ಕ್ರಾಫ್ಟ್ ಕ್ಲಿನಿಕ್ ಮತ್ತು ಸಲೂನ್‌ನಲ್ಲಿ, ಪ್ರತಿಯೊಂದು ಸೇವೆಯೂ ನಿಮ್ಮನ್ನು ಒಳಗಿನಿಂದ ಮತ್ತು ಹೊರಗಿನಿಂದ ಸುಂದರವಾಗಿ ಅನುಭವಿಸಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *