ನಂದಿನಿ ಮನುಪ್ರಸಾದ್ ನಾಯಕ್
ಗೋಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ ಬಿ.ಎನ್ ಮತ್ತು ಹೇಮಲತಾ ಜಗದೀಶ್ ಆಯೋಜಿಸಿರುವ ದಿ ಜ್ಯುವೆಲರಿ ಶೋ ಆಭರಣಗಳ ಪ್ರದರ್ಶನ ಮತ್ತು ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಲಾಯಿತು.
ಮೈಸೂರಿನ ಪ್ರತಿಷ್ಠಿತ ರ‍್ಯಾಡಿಸನ್ ಬ್ಲ್ಯೂ ಹೋಟೆಲ್‌ನಲ್ಲಿ ಗುರುವಾರದಿಂದ ಮೂರು ದಿನಗಳ ಕಾಲ ನಡೆಯುವ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ನಟಿ ಅಮೃತ ಪ್ರೇಮ್ ಸೇರಿದಂತೆ ನಗರದ ಗಣ್ಯ ಮಹಿಳೆಯರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.
ಮದುವೆ, ಹಾಗೂ ಶುಭಕಾರ್ಯಗಳಿಗೆ ಮೆರಗು ನೀಡಲು ಮೈಸೂರಿನಲ್ಲಿ ವಿನೂತನ ಆಭರಣ ಪ್ರದರ್ಶನ ಮತ್ತು ಮಾರಾಟವನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತಪಡಿಸಲಾಗಿದೆ.
ದೇಶದ ೩೦ ಅಗ್ರ ಶ್ರೇಣಿಯ ಆಭರಣ ತಯಾರಕರು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಮೊದಲ ದಿನವೇ ನೂರಾರು ಗ್ರಾಹಕರು ಪ್ರದರ್ಶನಕ್ಕೆ ಆಗಮಿಸಿ ಅಮೋಘವಾದ ಭಾರತೀಯ ಒಡವೆಗಳ ಉತ್ಸವದಲ್ಲಿ ಪಾಲ್ಗೊಂಡು ಆಭರಣಗಳನ್ನು ವೀಕ್ಷಿಸಿದರು. ಕೆಲವರು ಖರೀದಿಸಿ ಸಂತಸಪಟ್ಟರು.
ಆಭರಣ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚಿನದಾಗಿದ್ದು, ನಂಬಿಕಸ್ತ ಹೂಡಿಕೆಯೂ ಆಗಿದೆ. ಈ ಮೇಳದಲ್ಲಿ ಪ್ರಶಸ್ತಿ ವಿಜೇತ ಹಾಗೂ ಹೆಸರಾಂತ ಆಭರಣ ಮಳಿಗೆಗಳವರು ಭಾಗವಹಿಸಿರುವುದು ವಿಶೇಷವಾಗಿತ್ತು. ಅಷ್ಟೇ ಅಲ್ಲದೆ ಮುಂಬರುವ ಮದುವೆ ಸಮಾರಂಭ ಹಾಗೂ ಹಬ್ಬದ ಶುಭ ಸಂದರ್ಭದಲ್ಲಿ ಆಭರಣಗಳನ್ನು ಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ಮೈಸೂರು ನಗರ ಮತ್ತು ಸುತ್ತಮುತ್ತಲಿನ ನಾಗರೀಕರಿಗೆ ಆಭರಣಗಳನ್ನು ನೋಡಲು ಮತ್ತು ಕೊಳ್ಳಲು ಈ ಮೇಳದ ಮೂಲಕ ಅನುವು ಮಾಡಿಕೊಡಲಾಗಿದೆ. ಭಾರತ ದೇಶದ ವಿವಿಧ ಕುಶಲಕರ್ಮಿಗಳು ತಯಾರಿಸಿದಂತಹ ವಿಭಿನ್ನ ಶೈಲಿಯ ಆಭರಣಗಳು ಈ ಮೇಳದಲ್ಲಿ ದೊರೆಯಲಿವೆ.
ಹೆಸರಾಂತ ಆಭರಣ ಮಳಿಗೆಗಳು ಭಾಗವಹಿಸಲಿರುವ ಈ ಮೇಳದಲ್ಲಿ ವಿಶೇಷ ವಿನ್ಯಾಸಗಳನ್ನೊಳಗೊಂಡ ಆಭರಣಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆs ಇಟ್ಟಿದ್ದು, ಎಲ್ಲಾ ಚಿನ್ನದ ಆಭರಣಗಳು ಬಿಐಎಸ್ ಹಾಲ್ ಮಾರ್ಕ್ ಹೊಂದಿದೆ. ವಜ್ರಾಭರಣಗಳು ಅಂತರರಾಷ್ಟ್ರೀಯ ಗುಣಮಟ್ಟದ ಜಿಐಎ/ಐಜಿಐ ಪ್ರಮಾಣಿತ ಹೊಂದಿರುತ್ತದೆ. ಆಭರಣ ಮಳಿಗೆಗಳ ಸದಸ್ಯರು, ಚಿನ್ನಾಭರಣ ಮತ್ತು ವಜ್ರಾಭರಣ ಬಗ್ಗೆ ಎಲ್ಲಾ ತರಹದ ಉಚಿತ ಮಾಹಿತಿಯನ್ನು ನೀಡುತ್ತಾರೆ. ಖರೀದಿದಾರರು ಹಳೇ ಚಿನ್ನವನ್ನು ಬದಲಾಯಿಸಿಕ್ಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಮೇಳದ ನಂತರವೂ ಗ್ರಾಹಕರಿಗೆ ಆಭರಣಗಳಿಗೆ ಸಂಬಂಧಿಸಿದ ಸೇವೆಯನ್ನು ಒದಗಿಸಲಾಗುವುದು. ಮೈಸೂರಿನ ಸುತ್ತ ಮುತ್ತಲಿನ ಜನರ ಅಭಿರುಚಿಯನ್ನು ಅರಿತು ಅವರ ಇಚ್ಛೆಗನುಗುಣವಾಗಿ ಆಭರಣಗಳನ್ನು ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಬರುವಂತಹ ಹಬ್ಬ ಹರಿದಿನಗಳಿಗೆ ಹಾಗೂ ಮದುವೆ ಸಮಾರಂಭಗಳಿಗೆ ಆಭರಣ ಖರೀದಿಸಲು ಒಂದೇ ವೇದಿಕೆಯಲ್ಲಿ ಭಾರತದ ೩೦ ಹೆಸರಾಂತ ಆಭರಣ ಮಳಿಗೆಗಳು ಕಣ್ಣುಗಳಿಗೆ ರಸದೌತಣ ನೀಡಲಿವೆ ಎಂದು ಚಿತ್ರನಟಿ ನಟಿ ಅಮೃತ ಪ್ರೇಮ್ ಹೇಳಿದರು.
ಈ ಸಂದರ್ಭದಲ್ಲಿ ಗಣ್ಯರಾದ ವರ್ಷಾ ಬಲ್ಯಂಡ, ಡಾ.ತನುಜಾ, ಹೇಮಮಾಲಿನಿ ಲಕ್ಷ್ಮಣ, ಪಲ್ಲವಿ ಸಿ.ಟಿ., ರವಿ, ಜ್ಯೋತಿ ಪ್ರೇಮ್, ಅಮೃತಾ ಪ್ರೇಮ್, ರಮ್ಯಾ ಕಾಂತರಾಜ್ ಅರಸ್, ಚೈತ್ರಾ ರಂಗಸ್ವಾಮಿ, ಕುಸುಮಾ ಜಗನಾಥ ಶೆಣೈ, ಅಮೃತಾ ಶೆಣೈ, ಅನುಷಾ ಶೆಣೈ ಮತ್ತಿತರರು ಇದ್ದರು.