ಸ್ವಚ್ಚತೆಗಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ಮಹಿಳಾ ಪೌರ ಕಾರ್ಮಿಕರಿಗೆ ಬಾಗೀನ ವಿತರಿಸಿದ ನಿರ್ಮಲಾ ಹರೀಶ್

ನಂದಿನಿ ಮನುಪ್ರಸಾದ್ ನಾಯಕ್

ವರ್ಷದ 356 ದಿನಗಳ ಕಾಲ ಬಿಡುವಿಲ್ಲದೇ ನಗರ ಸ್ವಚ್ಚತೆಗಾಗಿ ಜೀವನವನ್ನೇ ಮುಡಿಪಿಟ್ಟಿರುವ ಮಹಿಳಾ ಪೌರ ಕಾರ್ಮಿಕರಿಗೆ ಬಾಗೀನ ವಿತರಿಸಲಾಯಿತು.

*ಗೌರಿ ಗಣೇಶ ಹಬ್ಬದ ಪ್ರಯುಕ್ತ ವಾರ್ಡ್ ನಂಬರ್ 45ರ ಆನಂದ್ ನಗರದಲ್ಲಿರುವ ಮಾಜಿನಗರ ಪಾಲಿಕೆ ಸದಸ್ಯರಾದ ನಿರ್ಮಲ ಹರೀಶ್ ಹಾಗೂ ಅವರ ಪತಿ ಹರೀಶ್ ರವರು ಪೌರಕಾರ್ಮಿಕರನ್ನು ಮನೆಗೆ ಕರೆಸಿ ಬಾಗಿನ ನೀಡಿದರು.

ಮಾಜಿನಗರ ಪಾಲಿಕೆ ಸದಸ್ಯೆ ನಿರ್ಮಲ ಹರೀಶ್ ಮಾತನಾಡಿ ನಾವು ಪೌರಕಾರ್ಮಿಕರನ್ನು ನಮ್ಮ ಸ್ವಂತ ಸಹೋದರಿ ಸಹೋದರ ರಂತೆ ಕಾಣುತ್ತೇವೆ
ಪ್ರತಿಯೊಂದು ಹಬ್ಬವನ್ನು ಸಹ ಅವರ ಜೊತೆಯಲ್ಲೇ ವಿಶೇಷವಾಗಿ ಆಚರಿಸುತ್ತಾ ಬಂದಿದ್ದೇವೆ, ನಮ್ಮ ಮೈಸೂರು ಸುಂದರವಾಗಲು ಅವರ ಪರಿಶ್ರಮ ಹೆಚ್ಚು, ಅವರೊಡನೆ ನಾವು ಇರುತ್ತೇವೆ ಎಂದು ಹೇಳಿದರು.

ಹರೀಶ್ ರವರು ಮಾತನಾಡಿ ಪ್ರತಿ ವರ್ಷ ನಾನು ಬಾಗೀನ ಕೊಡುತ್ತಾ ಬಂದಿದ್ದೇವೆ.ಅಧಿಕಾರದಲ್ಲಿ ಇದ್ದಾಗ ಸ್ವಾತಂತ್ರ್ಯ ದಿನಾಚರಣೆ,ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನ ಪೌರಕಾರ್ಮಿಕರಿಂದ ಮಾಡಿಸುತ್ತಿದ್ದೇವು.ಪೌರಕಾರ್ಮಿಕರು ತುಂಬ ಹಸನ್ಮುಖಿಯಾಗಿ ಕೆಲಸ ಮಾಡುತ್ತಾರೆ.ಅವರಿಂದಲೇ ನಾವು .ಪೌರಕಾರ್ಮಿಕರು ನಮ್ಮ ಕುಟುಂಬದವರೇ ಎಂದು ಭಾವಿಸಿದ್ದೇವೆ ಎಂದರು.

ಬಾಗೀನ‌ ಪಡೆದ ಮಹಿಳೆಯರು ಮಾತನಾಡಿ
ಪೌರಕಾರ್ಮಿಕರನ್ನು ಮನೆಗೆ ಕರೆಸಿ ಬಾಗೀನ ನೀಡಿದ ನಿರ್ಮಲ ಹರೀಶ್ ರವರಿಗೆ ಧನ್ಯವಾದ ಎಂದರು .

ಈ ಸಂದರ್ಭದಲ್ಲಿ ಕರುಣೆ ಸೇವಾ ಟ್ರಸ್ಟ್ ಅಧ್ಯಕ್ಷರಾದ ರುಕ್ಮಿಣಿ ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *