ನಂದಿನಿ ಮನುಪ್ರಸಾದ್ ನಾಯಕ್
ಮಹಿಳೆಯರು ಸ್ವಾವಲಂಬನೆಯಾಗಿ ಬದುಕಲೆಂದು ಹೊಲಿಗೆ ತರಬೇತಿ ಪಡೆದಿದ್ದು ಅದರ ಪ್ರಮಾಣ ಪತ್ರಕ್ಕಾಗಿ ಪಡುವಾರಹಳ್ಳಿ ಪಾಪಣ್ಣರವರಿಗೆ ಮನವಿ ಮಾಡಿದ್ದರು.ಮಹಿಳೆಯರ ಮನವಿಗೆ ಸ್ಪಂದಿಸಿದ ಪಾಪಣ್ಣರವರು ಮಹಿಳೆಯರಿಗೆ ಟೈಲರಿಂಗ್ ಪ್ರಮಾಣ ಪತ್ರ ನೀಡುವ ಮೂಲಕ ಗೌರಿ ಗಣೇಶ ಹಬ್ಬಕ್ಕೆ ಉಡುಗೊರೆ ನೀಡಿದ್ದಾರೆ.
ಹೌದು
ಬಡವರ ಬಂಧು ಅಭಿಮಾನಿಗಳ ಸಂಘದಿಂದ ಗೌರಿ ಹಬ್ಬದ ಪ್ರಯುಕ್ತ ಬಸವನಹಳ್ಳಿ ಮಾರಮ್ಮ ದೇವಸ್ಥಾನದಲ್ಲಿ ಶಾಸಕರಾದ ಹರೀಶ್ ಗೌಡ ಪತ್ನಿ ಗೌರಿ ಹರೀಶ್ ಗೌಡ, ಮಾಜಿನಗರ ಪಾಲಿಕೆ ಸದಸ್ಯರಾದ ಭಾಗ್ಯ ಮಾದೇಶ್, ಪ್ರಭ ಟಾಕೀಸ್ ಮಾಲೀಕರ ಮಗಳಾದ ತೇಜಸ್ವಿನಿ, ಸೌಭಾಗ್ಯ ಗಿರೀಶ್ ಇವರು ಮಹಿಳೆಯರಿಗೆ ಟೈಲರಿಂಗ್ ಸರ್ಟಿಫಿಕೇಟ್,ಗೌರಿ ಬಾಗೀನ ಅರಿಶಿನ ಕುಂಕುಮ, ಹಸಿರು ಬಳೆ,ಬ್ಲೌಸ್ ಪೀಸ್ ವಿತರಿಸಿದರು.
ಸಮಾರಂಭ ಕುರಿತು ಗೌರಿ ಹರೀಶ್ ಗೌಡರು ಮಾತನಾಡಿ
ಪ್ರತಿ ವರ್ಷ ಗೌರಿ ಹಬ್ಬದಂದು
ಬಡವರ ಬಂಧು ಅಭಿಮಾನಿಗಳ ಸಂಘದಿಂದ ಪಡುವಾರಳ್ಳಿ ಪಾಪಣ್ಣ ಸುಣ್ಣದ ಕೇರಿ ರಮೇಶ್ ಇವರು ವಿಶೇಷವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ ಆ ಕಾರ್ಯಕ್ರಮಕ್ಕೆ ಭಾಗವಹಿಸಿ ಅಲ್ಲಿರುವ ಜನರನ್ನು ನೋಡಿ ಖುಷಿಪಡುತ್ತೇನೆ .
ಈ ಹಬ್ಬ ಅಂದ್ರೇ ನನಗೆ ತುಂಬ ಇಷ್ಟ. ಯಾಕಂದರೆ ನನ್ನ ಹೆಸರು ಗೌರಿ ಆದರಿಂದ ಈ ಹಬ್ಬಕ್ಕೆ ನಾನು ನನಗೆ ಅನ್ನಿಸಿದ ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ.ಇಂದು ಮಹಿಳೆಯರಿಗೆ ಟೈಲರಿಂಗ್ ಸರ್ಟಿಫಿಕೇಟ್ ನೀಡಿದ್ದು ಸಂತೋಷ ತಂದಿದೆ.ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಮಾಡಿಲಿ ಎಂದು ಎಲ್ಲರಿಗೂ ಶುಭ ಹಾರೈಸಿದರು.
ನಂತರ ಭಾಗ್ಯ ಮಾದೇಶ್ ಅವರು ಮಾತನಾಡಿ ಪಾಪಣ್ಣ ರಮೇಶ್ ಇವರು ಮಾಡುವ ಯಾವುದೇ ಕಾರ್ಯಕ್ರಮಗಳಾಗಲಿ ಅದರಲ್ಲಿ ಒಂದು ವಿಶೇಷತೆ ಇರುತ್ತದೆ ಇವರ ಕಾರ್ಯಕ್ರಮಕ್ಕೆ ಬರುವುದು ನನಗೆ ತುಂಬಾ ಸಂತೋಷ. ಈ ಸಂದರ್ಭದಲ್ಲಿ ಎಲ್ಲರಿಗೂ ವಿಶೇಷವಾಗಿ ಗೌರಿ ಹರೀಶ್ ಗೌಡ ಹಾಗೂ ಸೌಭಾಗ್ಯ ಗಿರೀಶ್ ಮತ್ತು ಪ್ರಭ ಟಾಕೀಸಿನ ಮಾಲೀಕರ ಮಗಳಾದ ತೇಜಸ್ವಿನಿ ಇವರಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ತಿಳಿಸಲು ಇಷ್ಟಪಡುತ್ತೇನೆ ಎಂದು ತಿಳಿಸಿದರು.
ನಂತರ ತೇಜಸ್ವಿನಿ ಅವರು ಮಾತನಾಡಿ ನನಗೆ ಕನ್ನಡ ಮಾತನಾಡುವುದು ಕಷ್ಟ ಆದರೂ ನಿಮ್ಮನ್ನು ನೋಡಿದ ಕೂಡಲೇ ಕನ್ನಡ ಮಾತನಾಡುತ್ತಿದ್ದೇನೆ ಇಂತಹ ಒಳ್ಳೆಯ ಕಾರ್ಯಕ್ರಮ ಬಡವರ ಕಾರ್ಯಕ್ರಮ ರೂಪಿಸಿದಂತಹ ಪಡುವಾರಳ್ಳಿ ಪಾಪಣ್ಣ ರಮೇಶ್ ಹಾಗೂ ಬಸವನಹಳ್ಳಿ ಗ್ರಾಮದ ಮುಖಂಡರಿಗೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇನೆ.
ಇಂತಹ ಕಾರ್ಯಕ್ರಮಗಳಿಗೆ ನಾನು ಹೋಗಿಲ್ಲ ಇದು ಮೊದಲನೇ ಬಾರಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಇಲ್ಲಿ ನಡೆದ ಕಾರ್ಯಕ್ರಮ ನನಗೆ ತುಂಬಾ ಖುಷಿ ಕೊಟ್ಟಿದೆ ಎಂದರು.
ನಂತರ ಪಡುವಳ್ಳಿ ಪಾಪಣ್ಣನವರು ಮಾತನಾಡಿ ನಾವು 20 ವರ್ಷಗಳಿಂದ ಬಡ ಮಕ್ಕಳಿಗೆ ನೋಟ್ ಬುಕ್ ಕೊಡಿಸುವುದು ಹೆಣ್ಣು ಮಕ್ಕಳಿಗೆ ಸೀರೆ ಕೊಡಿಸುವುದು ಸಾಕಷ್ಟು ಬಡತನದಲ್ಲಿ ಇರುವಂತಹ ಜನರನ್ನು ಹುಡುಕಿ ಅವರಿಗೆ ಆಗುವ ತೊಂದರೆಗಳನ್ನು ನಿವಾರಿಸಲು ಈ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಇಂತಹ ಕಾರ್ಯಕ್ರಮದಲ್ಲಿ ಇವರಿಗೆ ಟೈಲರಿಂಗ್ ಮಿಷನ್ ಕೊಡಿಸುವುದು ಟೈಲರಿಂಗ್ ಸರ್ಟಿಫಿಕೇಟ್ ಕೊಡಿಸುವುದು ಇಲ್ಲಿಯವರೆಗೂ ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಗುರುಸ್ವಾಮಿ ಅವರು ಮಲ್ಲೇಶ ಮಾದೇಶ್ ರವರು ವೆಂಕಟೇಶ್ ಮಾದೇವ್ ರಂಗ ಮುತ್ತ ಪ್ರದೀಪ ಕುಮಾರ ಮುತ್ತಣ್ಣ ಇವರುಗಳು ಉಪಸ್ಥಿತರಿದ್ದರು.