ಸಹಪಂಕ್ತಿ ಭೋಜನದ ಮೂಲಕ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿದ ಕೆ.ಎಸ್.ಶಿವರಾಮು

ನಂದಿನಿ ಮನುಪ್ರಸಾದ್ ನಾಯಕ್

ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಸಹಪಂಕ್ತಿ ಭೋಜನದ ಮೂಲಕ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮ ದಿನದ ಅಂಗವಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ವತಿಯಿಂದ ಮಂಗಳವಾರ, ಪೌರಕಾರ್ಮಿಕರು, ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ಸಮುದಾಯಗಳೊಂದಿಗೆ ಸಹಪಂಕ್ತಿ ಭೋಜನ ನಡೆಯಿತು.

ನಗರದ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ನಡೆದ ಸಾಹಿತಿಗಳು, ಪ್ರಗತಿಪರ ಚಿಂತಕರು, ಅಲ್ಪಸಂಖ್ಯಾತ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಇದೆ ವೇಳೆ ಪೌರಕಾರ್ಮಿಕ ಮಹಿಳೆಯರಿಗೆ ಸೀರೆ ವಿತರಿಸಲಾಯಿತು.

ಅನ್ನ, ಸಾಂಬಾರು, ತಿಳಿ ಸಾರು, ಒಬ್ಬಟ್ಟು, ಪಾಯಸ, ಪಲ್ಯ, ಬಜ್ಜಿ, ಹಪ್ಪಳ ಒಳಗೊಂಡ ಹೋಳಿಗೆ ಊಟವನ್ನು ನೂರಾರು ಮಂದಿ ಸವಿದು ಸಮಾಜದ ಸಹಬಾಳ್ವೆ, ಭಾತೃತ್ವ ಮೂಡಿಸುವ ಸಂದೇಶ ಸಾರಿದರು.

ಇದಕ್ಕೂ ಮುನ್ನ ವೇದಿಕೆ ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ಪೆÇ್ರ.ಕಾಳೇಗೌಡ ನಾಗವಾರ ಮಾತನಾಡಿ, ಬಸವಲಿಂಗಪ್ಪ ಅವರು ಮಲ ಹೊರುವ ಪದ್ಧತಿ ನಿರ್ಮೂಲನೆಗೆ ಕಾಯ್ದೆ ಜಾರಿಗೆ ತಂದರು. ಇಂದು ನಾವು ತಲೆಯಲ್ಲಿ ತುಂಬಿರುವ ಜಾತಿ ತಾರತಮ್ಯ, ಮೇಲು-ಕೀಳಿನ ಕಸದ ಪದ್ಧತಿಯನ್ನು ಕೊನೆಗಾಣಿಸಲು ಪಣತೊಡಬೇಕು. ಸಾಮೂಹಿಕ ಹೊಣೆಗಾರಿಕೆಯಿಂದ ಈ ಕೆಲಸ ಮಾಡಬೇಕು ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಗಾಂಧೀಜಿ, ಗೋಪಾಲಕೃಷ್ಣ ಗೋಖಲೆ, ಡಾ.ಬಿ.ಆರ್.ಅಂಬೇಡ್ಕರ್‍ಗೆ ಬುದ್ಧ ಪ್ರಭಾವ ಬೀರಿದಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಹಿಯಾ, ಜಯಪ್ರಕಾಶ್ ನಾರಾಯಣ, ಪೆÇ್ರ.ನಂಜುಂಡಸ್ವಾಮಿ ಅವರ ಪ್ರಭಾವ ಬೀರಿದೆ. ಸೈದ್ಧಾಂತಿಕ ರಾಜಕಾರಣದಲ್ಲಿ ಎಂದಿಗೂ ಸಿದ್ದರಾಮಯ್ಯ ರಾಜಿಯಾಗಲಿಲ್ಲ ಎಂದರು.

ಸಂವಿಧಾನ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಎನ್.ಭಾಸ್ಕರ್, ಸಂಸ್ಕೃತಿ ಚಿಂತಕ ಕೆ.ರಘುರಾಮ ವಾಜಪೇಯಿ, ಮಾಜಿ ಮಹಾಪೌರ ಪುರುಷೋತ್ತಮ್, ವಕೀಲ ಶಿವಪ್ರಸಾದ್, ದಲಿತ ನವ ನಿರ್ಮಾಣ ವೇದಿಕೆಯ ಹರಿಹರ ಆನಂದ ಸ್ವಾಮಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ದೇಶದಲ್ಲಿ ಮಾನವೀಯ ಮೌಲ್ಯ ಹೊಂದಿರುವ ಮನುಷ್ಯರಿಲ್ಲ. ಕೇವಲ ಜಾತಿಗಳೇ ಇವೆ. ಹೀಗಾಗಿ ಜಾತಿ ವ್ಯವಸ್ಥೆಯನ್ನು ಕಾಪಾಡುತ್ತಿರುವ ಧರ್ಮದಿಂದ ಹೊರಬರಬೇಕು. ದಬ್ಬಾಳಿಕೆಯ ವ್ಯವಸ್ಥೆಯನ್ನು ತಿರಸ್ಕರಿಸಬೇಕು. ಇಲ್ಲದಿದ್ದರೆ ನಿಮಗೆ ಆತ್ಮ ಗೌರವ, ಸ್ವಾಭಿಮಾನ ಬರುವುದಿಲ್ಲ.

•.ಕೆ.ಎಸ್.ಭಗವಾನ್, ವಿಚಾರವಾದಿಗಳು.

 

ಬುದ್ಧ, ಬಸವ ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಳವಡಿಸಿಕೊಂಡಿದ್ದಾರೆ. ಬಡವರ ಬಗ್ಗೆ ಕಾಳಜಿ, ಜಾತ್ಯಾತೀತ ನಿಲುವುಗಳು ಅವರನ್ನು ಸಮರ್ಥ ರಾಜಕಾರಣಿಯಾಗಿ ಹೊರ ಹೊಮ್ಮಿಸಿದೆ. ರಾಜ್ಯದ ಆರ್ಥಿಕ ಹಿಂದುಳಿದ ಕುಟುಂಬಗಳ ಬದುಕಿಗೆ ಗ್ಯಾರಂಟಿ ಯೋಜನೆಗಳು ಬೆಳಕಾಗಿವೆ.

• ಶ್ರೀ ಜ್ಞಾನ ಸ್ವರೂಪನಂದ ಸ್ವಾಮೀಜಿ, ಪೀಠಾಧ್ಯಕ್ಷರು, ಶ್ರೀ ಆದಿ ಕರ್ನಾಟಕ ಮಹಾಸಂಸ್ಥಾನ ಮಠ

Leave a Reply

Your email address will not be published. Required fields are marked *