ಮೈಸೂರಿನ ಮದರ್‌ಹುಡ್ ಆಸ್ಪತ್ರೆಯಲ್ಲಿ ಅವಧಿಗೆ ಮುನ್ನ ಜನಿಸಿದ ಹಾಗೂ ಸೂಕ್ಷ್ಮ ಗಾತ್ರದ ಎರಡು ಶಿಶುಗಳ ರಕ್ಷಣೆ

ನಂದಿನಿ ಮೈಸೂರು

ಮೈಸೂರಿನ ಮದರ್‌ಹುಡ್ ಆಸ್ಪತ್ರೆಯಲ್ಲಿ ಅವಧಿಗೆ ಮುನ್ನ ಜನಿಸಿದ ಹಾಗೂ ಸೂಕ್ಷ್ಮ ಗಾತ್ರದ ಎರಡು ಶಿಶುಗಳ ರಕ್ಷಣೆ

ಮೈಸೂರು, ಆಗಸ್ಟ್ ೧೧, ೨೦೨೫: ಪ್ರಸವದ ಅವಧಿಗೆ ಬಹಳ ಮುಂಚಿತವಾಗಿ ಜನಿಸಿದ ಎರಡು ಶಿಶುಗಳ ಜೀವ ಉಳಿಸಿದ ಅಸಾಧಾರಣ ಸಾಧನೆಯನ್ನು ಕುರಿತು ಹಂಚಿಕೊಳ್ಳಲು ಮೈಸೂರಿನ ಮದರ್‌ಹುಡ್ ಹಾಸ್ಪಿಟಲ್ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ಇದರಲ್ಲಿ ಸಾಮಾನ್ಯ ಆರೋಗ್ಯ ಸ್ಥಿತಿಗೆ ಮರಳುವಲ್ಲಿ ಈ ಎರಡು ಅತ್ಯಂತ ಸಣ್ಣ ಗಾತ್ರದ ಶಿಶುಗಳ ಅಸಾಧಾರಣ ದೃಢನಿಶ್ಚಯದ ಪ್ರಯಾಣ ಕುರಿತು ವಿವರ ನೀಡಲಾಯಿತು. ಇಂತಹ ಸೂಕ್ಷ್ಮ ಗಾತ್ರದ ಶಿಶುಗಳಿಗೆ ತಾಯಿಯ ಗರ್ಭಾಶಯದ ಹೊರಗಿನ ಬದುಕು ಬಹಳ ಸವಾಲಿನದಾಗಿರುತ್ತದೆ. ಈ ಶಿಶುಗಳನ್ನು ರಕ್ಷಿಸಲು ಅಲ್ಲದೇ ಅವುಗಳಲ್ಲಿ ಪ್ರಮುಖ ದೈಹಿಕ ಬೆಳವಣಿಗೆಯ ಪ್ರಕ್ರಿಯೆಗಳಿಗೆ ಅವಕಾಶ ಮಾಡಿಕೊಡಲು ಉನ್ನತ ವೈದ್ಯಕೀಯ ತಂತ್ರಗಳನ್ನು ಬಳಸುವುದಲ್ಲದೇ ಗರ್ಭಾಶಯದೊಳಗಿನ ರೀತಿಯ ಆರೈಕೆಯನ್ನು ಗರ್ಭಾಶಯದ ಹೊರಗೆ ನೀಡಬೇಕಾಗಿರುತ್ತದೆ. ಇದು ಅತ್ಯಂತ ಹೆಚ್ಚಿನ ಸವಾಲಿನ ವಿಷಯವಾಗಿದ್ದು, ಸಾಮಾನ್ಯ ಆರೈಕೆಗಿಂತ ಹೆಚ್ಚಿನ ಸಾಮರ್ಥ್ಯದ ಅಗತ್ಯವಿರುತ್ತದೆ.
ನವಜಾತಶಿಶು ತೀವ್ರ ನಿಗಾ ಘಟಕದ ಆರೈಕೆಯಲ್ಲಿ ಸಾಟಿಯಿಲ್ಲದ ಪರಿಣತಿಯನ್ನು ಈ ಪ್ರಕರಣಗಳು ಎತ್ತಿ ತೋರಿದ್ದವು. ಪ್ರಸವದ ಅವಧಿಗೆ ಬಹಳ ಮುಂಚಿತವಾಗಿ ಜನಿಸಿದ ಹಾಗೂ ಜನನದ ಸಮಯದಲ್ಲಿ ಬಹಳ ಕಡಿಮೆ ದೇಹ ತೂಕ ಹೊಂದಿರುವ ಶಿಶುಗಳು ಬದುಕಿ ಉಳಿಯುವುದು ಮಾತ್ರವಲ್ಲದೇ ಅವುಗಳ ಬೆಳವಣಿಗೆ ಕೂಡ ಗರಿಷ್ಠವಾಗಿರುವ ಫಲಿತಾಂಶ ಇಲ್ಲಿ ಕಂಡು ಬಂದಿದೆ.
ಮೊದಲ ಪ್ರಕರಣದಲ್ಲಿ ಶ್ರೀಮತಿ ಉಮಾ ಮತ್ತು ಶ್ರೀ ಚೇತನ್‌ಕುಮಾರ್ ಅವರಿಗೆ ಕೇವಲ ೨೯ ವಾರಗಳಲ್ಲಿಯೇ ಗಂಡು ಶಿಶುವಿನ ಜನನವಾಗಿತ್ತು. ತಾಯಿಯ ಗರ್ಭಾಶಯದಲ್ಲಿ ಶಿಶುವಿನ ಬೆಳವಣಿಗೆಗೆ ತೀವ್ರ ರೀತಿಯ ನಿರ್ಬಂಧವಿದ್ದು(ಸಿವಿಯರ್ ಇಂಟ್ರಾಯುಟರೀನ್ ಗ್ರೋತ್ ರಿಸ್ಟ್ರಿಕ್ಷನ್[ಐಯುಜಿಆರ್]), ಶಿಶು ಜನನದ ಸಮಯದಲ್ಲಿ ಕೇವಲ ೪೮೦ ಗ್ರಾಮ್ ತೂಕ ಹೊಂದಿತ್ತು ಅಂದರೆ ಶಿಶು ಕೇವಲ ಅಂಗೈ ಅಗಲದ ಗಾತ್ರ ಹೊಂದಿತ್ತು. ಇದಲ್ಲದೇ ಶಿಶುವಿನ ಜೀವಕ್ಕೆ ಬೆದರಿಕೆ ಒಡ್ಡುವಂತಹ ಹಲವಾರು ತೊಂದರೆಗಳಿದ್ದವು. ಶಂಕಿತ ಸಿಎಂವಿ ಸೈಟೊಮೆಗಾಲೊ ವೈರಸ್ ಸೋಂಕು, ಫಂಗಲ್ ಸೆಪ್ಸಿಸ್, ಸಿವಿಯರ್ ಫೀಡ್ ಇಂಟಾಲರೆನ್ಸ್(ದೇಹವು ಕೆಲವು ಆಹಾರಗಳನ್ನು ಜೀರ್ಣಿಸಿ ಕೊಳ್ಳಲಾಗದಂತಹ ಅಥವ ಸಹಿಸಿಕೊಳ್ಳಲಾಗದಂತಹ ಸ್ಥಿತಿ) ಅಲ್ಲದೆ ರೆಟಿನೊಪಥಿ ಆಫ್ ಪ್ರೀಮೆಚುರಿಟಿ[ಅವಧಿಗೆ ಮುನ್ನ ಜನಿಸಿದ ಶಿಶುಗಳಲ್ಲಿ ಉಂಟಾಗುವ ಕಣ್ಣಿನ ರಕ್ತನಾಳಗಳ ತೊಂದರೆ](ಆರ್‌ಒಪಿ ಹಂತ ೩) ಮುಂತಾದ ಅನಾರೋಗ್ಯ ಸ್ಥಿತಿಗಳು ಇದ್ದವು. ಈ ಸಂಕೀರ್ಣ ತೊಂದರೆಗಳು ಇದ್ದರೂ ಕೂಡ, ಆಮ್ಲಜನಕ, ಪೋಷಕಾಂಶ, ತಾಪಮಾನಗಳನ್ನು ಬಹಳ ಎಚ್ಚರಿಕೆಯೊಂದಿಗೆ ನಿಯಂತ್ರಿಸಿ ಗರ್ಭಾಶಯದೊಳಗಿನ ಸ್ಥಿರವಾದ ಸ್ಥಿತಿಯನ್ನು ಎನ್‌ಐಸಿಯು ತಂಡ ಉಳಿಸಿಕೊಂಡಿತ್ತು. ಇದಲ್ಲದೆ, ಗರ್ಭಾಶಯದ ಹೊರಗೆ ಬಂದ ನಂತರ ಬೆಳವಣಿಗೆಯ ಸ್ಥಿತಿಯಲ್ಲಿರುವ ದುರ್ಬಲವಾದ ಅಂಗಗಳಿಗೆ ಬೆಂಬಲ ನೀಡಲು ಸಂವೇದನಾಶೀಲ ಸಂಪರ್ಕ ಪೂರೈಸಲಾಗಿತ್ತು.
“ಗರ್ಭಾಶಯವು ನಂಬಲಾಗದಷ್ಟು ಸಂಕೀರ್ಣವಾದ ವಾತಾವರಣವನ್ನು ಹೊಂದಿರುತ್ತದೆ. ಒಂದು ಶಿಶು ಇಲ್ಲಿಯ ಪ್ರಕರಣದಷ್ಟು ಬೇಗನೇ ಜನಿಸಿದಾಗ ಅವುಗಳ ಶ್ವಾಸಕೋಶಗಳು, ಮೆದುಳು ಮತ್ತು ಪಚನಾಂಗ ವ್ಯವಸ್ಥೆ ಇನ್ನು ಅಪ್ರಬುದ್ಧ ಸ್ಥಿತಿಯಲ್ಲಿರುತ್ತವೆ ಎಂದು ಈ ಪ್ರಕರಣದಲ್ಲಿ ಚಿಕಿತ್ಸೆ ನೀಡಿದ್ದ ತಂಡದ ನೇತೃತ್ವ ವಹಿಸಿದ್ದ ಮೈಸೂರಿನ ಮದರ್‌ಹುಡ್ ಹಾಸ್ಪಿಟಲ್ಸ್‌ನ ನವಜಾತ ಶಿಶು ಶಾಸ್ತ್ರ ಸಲಹಾತಜ್ಞರು ಮತ್ತು ಮಕ್ಕಳ ರೋಗ ತಜ್ಞರಾದ ಡಾ. ಚೇತನ್ ಬಿ. ವಿವರಿಸಿದರಲ್ಲದೆ, “ಗರ್ಭಾಶಯದಲ್ಲಿನ ವಾತಾವರಣದ ಪ್ರತಿರೂಪವನ್ನು ನಿಖರವಾಗಿ ಆಸ್ಪತ್ರೆಯಲ್ಲಿ ಪುನರ್ ಸ್ಥಾಪಿಸುವುದು ನಮ್ಮ ಕೆಲಸವಾಗಿತ್ತು. ನಾನ್‌ಇನ್‌ವೇಸಿವ್ ವೆಂಟಿಲೇಷನ್, ಟೋಟಲ್ ಪೇರೆಂಟರಲ್ ನ್ಯೂಟ್ರಿಷಿನ್(ಪೋಷಕಾಂಶಗಳನ್ನು ದ್ರವರೂಪದಲ್ಲಿ ರಕ್ತನಾಳಗಳಿಗೆ ಪೂರೈಸುವುದು), ಕಟ್ಟುನಿಟ್ಟಿನ ಸೋಂಕು ನಿಯಂತ್ರಣ ಮುಂತಾದ ಕ್ರಮಗಳನ್ನು ನಾವು ಬಳಸಿದ್ದೆವು. ಅಲ್ಲದೆ, ಇದರೊಂದಿಗೆ ಶಿಶುವಿನ ಮೆದುಳು ಮತ್ತು ಅಂಗಗಳು ಪ್ರಬುದ್ಧವಾಗುವಾಗ ಅವುಗಳನ್ನು ರಕ್ಷಿಸಲು ಉನ್ನತಮಟ್ಟದ ನರಸಂಬಂಧಿತ ಮೇಲ್ವಿಚಾರಣೆ ಶಿಷ್ಟಾಚಾರಗಳನ್ನು ನಾವು ಪಾಲಿಸಿದ್ದೆವು. ಮಗು ಉಳಿದುಕೊಂಡಿದ್ದು ಮಾತ್ರವಲ್ಲದೆ, ಈಗ ೩.೫ ಕಿಲೋಗ್ರಾಮ್‌ಗಳಿಗೂ ಹೆಚ್ಚಿನ ತೂಕ ಹೊಂದಿದ್ದು, ಸಾಮಾನ್ಯ ಬೆಳವಣಿಗೆ ಹೊಂದಿರುತ್ತದೆ. ಆಧುನಿಕ ನವಜಾತ ಶಿಶು ವೈದ್ಯಕೀಯದಲ್ಲಿ ಇದು ಪವಾಡಕ್ಕಿಂತಲೂ ಕಡಿಮೆಯೇನಲ್ಲ ಎಂದರು.
ಎರಡನೇ ಪ್ರಕರಣದಲ್ಲಿ ಮೈಸೂರಿನ ಶ್ರೀಮತಿ ಪ್ರವೀಕ್ಷ ಮತ್ತು ಶ್ರೀ ಪ್ರವೀಣ್‌ಕುಮಾರ್ ಅವರ ಗಂಡು ಮಗು ಗರ್ಭಾವಸ್ಥೆಯ ೨೪ ವಾರಗಳಲ್ಲಿ ಅಂದರೆ ಅಚ್ಚರಿ ಮೂಡಿಸುವಂತೆ ಪ್ರಸವದ ಅವಧಿಗೆ ೧೫ರಿಂದ ೧೬ ವಾರಗಳ ಮುನ್ನ ಜನಿಸಿತ್ತು. ಶಿಶು ಕೇವಲ ೭೫೦ ಗ್ರಾಮ್‌ಗಳಷ್ಟು ಅಂದರೆ ಒಂದು ಪೈನಾಪಲ್‌ನಷ್ಟು ತೂಕ ಹೊಂದಿತ್ತು. ಜನಿಸಿದ ಕೇವಲ ಮೂರು ಗಂಟೆಗಳ ಒಳಗೆ ಮದರ್‌ಹುಡ್‌ನ ನವಜಾತ ಶಿಶು ತೀವ್ರ ನಿಗಾ ಘಟಕದ ಪೆರಿಫೆರಲ್ ಸೆಂಟರ್ಗೆ ಶಿಶುವನ್ನು ಸಾಗಿಸಲಾಗಿತ್ತು. ೨೩ ವಾರಗಳ ಒಳಗೆ ಜನಿಸಿದ ಮಕ್ಕಳಲ್ಲಿ ಅವು ಬದುಕಿ ಉಳಿದುಕೊಳ್ಳುವ ಸಾಧ್ಯತೆ ಬಹಳ ಕಡಿಮೆಯಿರುತ್ತದೆ. ತೀವ್ರ ನಿಗಾ ಚಿಕಿತ್ಸೆಯೊಂದಿಗೆ ಇದು ಶೇ. ೧೧ ರಷ್ಟಿರುತ್ತದೆ. ಹೀಗಾಗಿ ಈ ಪ್ರಕರಣದಲ್ಲಿ ಮಗುವನ್ನು ಉಳಿಸಿಕೊಂಡಿರುವುದು ಅಸಾಧಾರಣ ವೈದ್ಯಕೀಯ ಸಾಧನೆಯಾಗಿತ್ತು. ಗೋಲ್ಡನ್ ಅವರ್‌ನಲ್ಲಿ ಗಂಭೀರವಾದ ಹಾಗೂ ಮಗುವಿನ ಸ್ಥಿತಿಯನ್ನು ಸ್ಥಿರಗೊಳಿಸುವ ಚಿಕಿತ್ಸೆಯ ಕೊರತೆಯಿಂದ ಈ ಶಿಶುವಿಗೆ ಮಿದುಳಲ್ಲಿ ಗಮನಾರ್ಹ ರಕ್ತಸ್ರಾವವಾಗಿತ್ತು. ಶಿಶುವನ್ನು ೮೪ ದಿನಗಳಕಾಲ ಎನ್‌ಐಸಿಯು ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು. ಕಟ್ಟುನಿಟ್ಟಿನ ಮೇಲ್ವಿಚಾರಣೆಯ ಆರೈಕೆಯಲ್ಲಿ ಶಿಶುವಿನ ಮಿದುಳಿನಲ್ಲಿ ಏರಿಳಿತಗಳನ್ನು ಕಡಿಮೆ ಮಾಡಲಾಯಿತಲ್ಲದೇ ನರ ಸಂಬಂಧಿತ ಕಾರ್ಯವನ್ನು ಸಂರಕ್ಷಿಸಲಾಯಿತು.
ಪ್ರಸವದ ಅವಧಿಗೆ ಬಹಳ ಮುಂಚಿತವಾಗಿ ಜನಿಸಿದ ಮಕ್ಕಳನ್ನು ಉಳಿಸಿಕೊಳ್ಳುವುದು ಸಮಯ ಮತ್ತು ಸೋಂಕುಗಳ ವಿರುದ್ಧ ದಿನಾಲೂ ಹೋರಾಟ ನಡೆಸುವುದಾಗಿರುತ್ತದೆ. ಜೊತೆಗೆ ಶಿಶುವಿನ ಶಾರೀರಿಕ ಅಸ್ಥಿರತೆ ವಿರುದ್ಧವೂ ಹೋರಾಟ ನಡೆಸಬೇಕಾಗುತ್ತದೆ ಎಂದು ಈ ಪ್ರಕರಣವನ್ನು ನಿರ್ವಹಿಸಿದ ಮೈಸೂರಿನ ಮದರ್‌ಹುಡ್ ಹಾಸ್ಪಿಟಲ್‌ನ ನವಜಾತ ಶಿಶುಶಾಸ್ತ್ರ ಸಲಹಾ ತಜ್ಞರು ಮತ್ತು ಮಕ್ಕಳ ರೋಗ ತಜ್ಞರಾದ ಡಾ. ಸುಹೇಮ್ ಅಫ್ಸರ್ ಅವರು ಹೇಳಿದರಲ್ಲದೆ, “ಕ್ಷಿಪ್ರಗತಿಯ ಸಾರಿಗೆ ಮತ್ತು ಶೀಘ್ರವಾಗಿ ನವಜಾತ ಶಿಶು ತೀವ್ರನಿಗಾ ಘಟಕ(ಎನ್‌ಐಸಿಯು)ದಲ್ಲಿನ ಹಸ್ತಕ್ಷೇಪ ಏಕೆ ಬೇಕು? ಎಂಬುದಕ್ಕೆ ಈ ಶಿಶುವಿನ ಪ್ರಯಾಣ ಒಂದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಮೊದಲ ದಿನದಿಂದಲೇ ಮೆದುಳಿನ ಕಡೆಗೆ ಗಮನಹರಿಸಿದ ಆರೈಕೆಯನ್ನು ಪೂರೈಸುವ ನಮ್ಮ ಸಾಮರ್ಥ್ಯ ಮಗುವಿನ ಆರೋಗ್ಯದಲ್ಲಿ ಎಲ್ಲಾ ರೀತಿಯ ವ್ಯತ್ಯಾಸ ಉಂಟು ಮಾಡಿತ್ತು. ಇಂದು ಅವನು ನಾಲ್ಕು ಕಿಲೋ ಗ್ರಾಮ್ ತೂಕ ಹೊಂದಿರುವುದಲ್ಲದೆ, ಅವನ ನರರೋಗ ವ್ಯವಸ್ಥೆ ಉತ್ತಮ ರೀತಿಯಲ್ಲಿದೆ. ಇದಕ್ಕಾಗಿಯೇ ನಾವು ಮಾಡಬೇಕಾದುದ್ದೆಲ್ಲವನ್ನು ಮಾಡುತ್ತೇವೆ ಎಂದರು.
ಈ ಗಮನಾರ್ಹ ಫಲಿತಾಂಶಗಳಲ್ಲದೆ, ಆಸ್ಪತ್ರೆಯ ಸಂಚಾರಿ ಎನ್‌ಐಸಿಯು ಘಟಕ ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಗುವಿನ ಸಾರಿಗೆಯ ಸಮಯದಲ್ಲಿಯೇ ಚಿಕಿತ್ಸೆ ನೀಡಲಾಗಿದ್ದು, ಇಲ್ಲಿ ಮುಖ್ಯವಾಗಿತ್ತು. ಕಳೆದ ಎರಡು ವರ್ಷಗಳಲ್ಲಿ ನವಜಾತ ಶಿಶು ತೀವ್ರ ನಿಗಾ ಘಟಕಕ್ಕೆ ಪ್ರವೇಶ ಪಡೆದ ಸಾವಿರಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಶೇ.೭೦ಕ್ಕೂ ಹೆಚ್ಚಿನ ಶಿಶುಗಳನ್ನು ಮಂಡ್ಯ, ಹಾಸನ, ಚಾಮರಾಜನಗರ ಮತ್ತು ಕೊಡಗು ಮುಂತಾದ ಹೊರಭಾಗದ ಜಿಲ್ಲೆಗಳಿಂದ ಕರೆತರಲಾಗಿತ್ತು. ಈ ಘಟಕದ ಸೇವೆಯಲ್ಲಿ ಲೆವಲ್ ೩ ರೆಡಿ ಆಂಬುಲೆನ್ಸ್, ಆನ್‌ಬೋರ್ಡ್ ಇನ್‌ಕ್ಯೂಬೇಟರ್, ಎನ್‌ಐಸಿಯು ನರ್ಸ್ ಮತ್ತು ಮಕ್ಕಳ ರೋಗ ತಜ್ಞರ ಸೇವೆ ಸೇರಿರುತ್ತವೆ.
ಮೈಸೂರಿನ ಮದರ್‌ಹುಡ್ ಹಾಸ್ಪಿಟಲ್‌ನ ಸೌಲಭ್ಯ ನಿರ್ದೇಶಕರಾದ ಬಿ.ಜೆ. ಸಂದೀಪ್ ಪಟೇಲ್ ಅವರು ಮಾತನಾಡಿ, “ನಾವು ಇಲ್ಲಿ ಕೇವಲ ಆಸ್ಪತ್ರೆಯಲ್ಲಿನ ಆರೈಕೆಯನ್ನು ಮಾತ್ರ ಕೈಗೊಳ್ಳುತ್ತಿಲ್ಲ. ಪ್ರಾದೇಶಿಕವಾಗಿ ನವಜಾತ ಶಿಶು ಚಿಕಿತ್ಸೆಯನ್ನು ಎಲ್ಲರಿಗೂ ತಲುಪಿಸುತ್ತಿದ್ದೇವೆ. ಇವುಗಳ ಪೈಕಿ ಬಹಳಷ್ಟು ಪ್ರದೇಶಗಳು ಉನ್ನತ ಮಟ್ಟದ ಎನ್‌ಐಸಿಯುಗಳಿಗೆ ಸಂಪರ್ಕ ಹೊಂದಿಲ್ಲ. ನಮ್ಮ ಸಂಚಾರಿ ಎನ್‌ಐಸಿಯು ಘಟಕ ಕೇವಲ ಸಾರಿಗೆ ಮಾತ್ರವಲ್ಲದೆ, `ಸಂಚಾರಿ ಗರ್ಭಾಶಯವಾಗಿರುತ್ತದೆ. ಗಂಭೀರ ಸ್ಥಿತಿಯಲ್ಲಿರುವ ಶಿಶುಗಳ ಆರೋಗ್ಯವನ್ನು ಸುವರ್ಣಾವಧಿಯ ಒಳಗೆ ನಾವು ಸ್ಥಿರವಾಗಿರುವಂತೆ ಮಾಡುತ್ತೇವೆ. ಇದರಿಂದ ದೇಹದಲ್ಲಿ ಸರಿಪಡಿಸಲಾಗದ ಹಾನಿ ಉಂಟಾಗುವ ಮುನ್ನ ಶಿಶುಗಳು ಬದುಕಿ ಉಳಿಯುವ ಹೋರಾಟ ನಡೆಸಲು ಅವಕಾಶ ಲಭಿಸುತ್ತದೆ. ಮನೆ ಬಾಗಿಲಿನಿಂದ ಆಸ್ಪತ್ರೆಯಿಂದ ಬಿಡುಗಡೆಯವರೆಗಿನ ಈ ಸತತ ಆರೈಕೆಯಿಂದಾಗಿ ನಾವು ಪ್ರತ್ಯೇಕವಾಗಿ ಉಳಿಯುತ್ತೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಈ ಎರಡೂ ಶಿಶುಗಳ ಪೋಷಕರು ಭಾಗವಹಿಸಿದ್ದರು. ಭಯದಿಂದ ಭರವಸೆಯವರೆಗಿನ ಅವರ ಭಾವನಾತ್ಮಕ ಪ್ರಯಾಣಗಳು ಮತ್ತು ಅವರ ಕೃತಜ್ಞತೆಯನ್ನು ಈ ಸಂದರ್ಭದಲ್ಲಿ ಪೋಷಕರು ನೆರೆದವರೊಂದಿಗೆ ಹಂಚಿಕೊಂಡರು. ಅನಿಶ್ಚಿತತೆ ಮತ್ತು ಧೈರ್ಯಗಳಿಂದ ತುಂಬಿದ್ದ ಅವರ ಕಥೆಗಳು ನೆರೆದ ಪ್ರೇಕ್ಷಕರು ರೋಮಾಂಚನಗೊಳ್ಳುವಂತೆ ಮಾಡಿದವಲ್ಲದೇ ಮಾನವರ ಮೇಲೆ ಉನ್ನತ ಗುಣಮಟ್ಟದ ನವಜಾತ ಶಿಶು ಆರೈಕೆಯ ಪ್ರಭಾವವನ್ನು ಪುನರ್‌ದೃಢೀಕರಿಸಿದವು.
ಶಿಶುಗಳ ಜೀವನಾವಧಿಯನ್ನು ವಿಸ್ತರಿಸುವುವುದು ಮಾತ್ರವಲ್ಲದೇ ಗರ್ಭಾಶಯದ ಹೊರಗೆ ಒಂದೊಂದಾಗಿ ಶಿಶುಗಳ ಜೀವದ ಆರಂಭವನ್ನು ಪುನರ್‌ಸೃಷ್ಟಿಸುವ ಸಂದೇಶವನ್ನು ಪತ್ರಿಕಾಗೋಷ್ಠಿ ಒತ್ತಿ ಹೇಳಿತ್ತು.

Leave a Reply

Your email address will not be published. Required fields are marked *