ರೋಟರಿ ಮೈಸೂರು ಸೌತ್ ಈಸ್ಟ್ ಕ್ಲಬ್ ನಲ್ಲಿ *ವೈದ್ಯರ ದಿನಾಚರಣೆ* ಆಚರಣೆ.

ನಂದಿನಿ ಮನುಪ್ರಸಾದ್ ನಾಯಕ್

ರೋಟರಿ ಮೈಸೂರು ಸೌತ್ ಈಸ್ಟ್ ಕ್ಲಬ್ ನಲ್ಲಿ *ವೈದ್ಯರ ದಿನಾಚರಣೆ* ಆಚರಣೆ.

ವೈದ್ಯರ ದಿನಾಚರಣೆಯ ಪ್ರಯುಕ್ತ ರೋಟರಿ ಮೈಸೂರು ಸೌತ್ ಈಸ್ಟ್ ಸಂಸ್ಥೆಯ ವತಿಯಿಂದ, ಮೈಸೂರಿನ ಖ್ಯಾತ ಆಯುರ್ವೇದ ವೈದ್ಯರಾದ ಡಾ. ಗಜಾನನ ಹೆಗಡೆ, ನಿವೃತ್ತ ಪ್ರಾಂಶುಪಾಲರು, ಆಯುರ್ವೇದ ಮೆಡಿಕಲ್ ಕಾಲೇಜು, ಮೈಸೂರು ಹಾಗೂ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿ ಈಗ ಆಹಾರ. ಸಂಸ್ಕರಣೆ ಮತ್ತು ಔಷಧ ಆಡಳಿತ, ಮೈಸೂರು ಇದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ.ರವೀಂದ್ರ
ಅವರನ್ನು ಸನ್ಮಾನಿಸಲಾಯಿತು.
ಕ್ಲಬ್ ನ ಸದಸ್ಯರಾದ ರೋ. ಡಾ. ಸಂತೋಷ್ ಹಾಗೂ ರೋ. ಡಾ ದೀಪಕ್ ಗೌಡ ಅವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕ್ಲಬ್ ನ ಅಧ್ಯಕ್ಷರಾದ ರೋ.ಮುರಳೀಧರ್ ವೈ. ವಿ, ಇವರು ಕಾರ್ಯಕ್ರಮದ ಕುರಿತು ಮಾತನಾಡಿ , ಸಮಾಜಕ್ಕೆ ವೈದ್ಯರ ಕೊಡುಗೆ ಹಾಗೂ ಅವರ ಮಹತ್ವ ಇವೆರಡೂ ಡಾ.ಬಿ.ಸಿ ರಾಯ್ ಅವರ ಸ್ಮರಣಾರ್ಥ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮವಾಗಿದ್ದು , ಸನ್ಮಾನಿತರೇಲ್ಲರಿಗೂ ಅವರ ಸಾಧನೆಯನ್ನು ಗುರುತಿಸಿ ಅಭಿನಂದಿಸುತ್ತಿರುವುದು ಸಂತಸ ತಂದಿದೆ ಎಂದರು. ವೇದಿಕೆಯಲ್ಲಿ ಕಾರ್ಯದರ್ಶಿ ರೋ ಸುರೇಶ್, ರೋ. ಡಾ.ಈ.ಸಿ. ನಿಂಗರಾಜ್ ಗೌಡ ಹಾಗೂ ರೋ. ವೆಂಕಟೇಶ್ ಬಿ. ಆರ್ ಇವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ
ಡಾ.ಈ.ಸಿ ನಿಂಗರಾಜ್ ಗೌಡ ಇವರು ಮಾತನಾಡಿ ವೈದ್ಯರ ದಿನಾಚರಣೆ (Doctors’ Day) ಅನ್ನು ಪ್ರತಿ ವರ್ಷ ಜುಲೈ 1 ರಂದು ಭಾರತದಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ಭಾರತದ ಪ್ರಸಿದ್ಧ ವೈದ್ಯರು ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಡಾ. ಬಿದ್ಹಾನ್ ಚಂದ್ರ ರಾಯ್ (Dr. Bidhan Chandra Roy) ಅವರ ಜನ್ಮದಿನ ( 1 ಜುಲೈ 1882) ಮತ್ತು ಪುಣ್ಯತಿಥಿಯಾಗಿ ( 1 ಜುಲೈ 1962) ದಂದು ಆಚರಿಸಲಾಗುತ್ತೀದೆ. ಡಾ. ಬಿ. ಸಿ ರಾಯ್ ರವರಿಗೆ 1961 ರಲ್ಲಿ ಭಾರತದ ಅತ್ಯುನ್ನತ ಗೌರವವಾದ “ಭಾರತ ರತ್ನ” ಪ್ರಶಸ್ತಿಯನ್ನು ನೀಡಲಾಯಿತು. ಡಾ.ಬಿ.ಸಿ. ರಾಯ್ ರವರು ಜನರು ಆರೋಗ್ಯವಂತರಾಗಿ ಮತ್ತು ಮನಸ್ಸು ಹಾಗೂ ದೇಹದಲ್ಲಿ ಬಲಶಾಲಿಗಳಾಗಿರುವ ಹೊರತು ಸ್ವರಾಜ್ ಕನಸಾಗಿ ಉಳಿಯುತ್ತದೆ ಎಂದು ನಂಬಿದ್ದರು.
ವೈದ್ಯಕೀಯ ಕ್ಷೇತ್ರದ ಸಂಘಟನೆಗೆ ಅವರು ಕೊಡುಗೆಗಳನ್ನು ನೀಡಿದ್ದರು. 1926 ರಲ್ಲಿ ಮಹಿಳೆಯರು ಮತ್ತು ಮಕ್ಳಳಿಗಾಗಿ ಕಲ್ಕತ್ತಾದಲ್ಲಿ ಚಿತ್ತರಂಜನ್ ಸೇವಾ ಸದನ ಆಸ್ಪತ್ರೆಯನ್ನು ಪ್ರಾರಂಭಿಸಿದರು. ಕಮಲಾ ನೆಹರು ಆಸ್ಪತ್ರೆ, ವಿಕ್ಟೋರಿಯಾ ಮೆಡಿಕಲ್ ಕಾಲೇಜು ಸ್ಥಾಪನೆಗಳಲ್ಲಿ ಇವರು ಪ್ರಮುಖ ವಹಿಸಿದ್ದಾರೆ.

ಡಾ.ಬಿ.ಸಿ ರಾಯ್ ರವರು ಮಹಾತ್ಮ ಗಾಂಧಿ ಹಾಗೂ ಜವಹರಲಾಲ್ ನೆಹರು ರವರ ವೈಯಕ್ತಿಕ ವೈದ್ಯರು ಮತ್ತು ಸ್ನೇಹಿತರಾಗಿದ್ದರು.

ಆದುದರಿಂದ ನಾವೇಲ್ಲರೂ ವೈದ್ಯರಿಗೆ ಕೃತಜ್ಞತೆ ಸಲ್ಲಿಸಲು ಮತ್ತು ಅವರ ಸೇವೆಯನ್ನು ಸ್ಮರಿಸಲು ವೈದ್ಯರ ದಿನಾಚರಣೆಯನ್ನು ಆಚರಿಸುತ್ತೀದ್ದೇವೆ. ವೈದ್ಯರು ಸಮಾಜದ ಆರೋಗ್ಯ ಕಾಪಾಡುವ ಮಹತ್ತರ ಭೂಮಿಕೆಯನ್ನು ನಿಭಾಯಿಸುತ್ತಾರೆ. ಅವರ ಸೇವೆಯನ್ನು ಗೌರವಿಸಲು ಈ ದಿನ ಆಚರಿಸಲಾಗುತ್ತದೆ. ಡಾ. ಬಿ.ಸಿ. ರಾಯ್ ಅವರು ಅತ್ಯುತ್ತಮ ವೈದ್ಯ ಮತ್ತು ರಾಜಕಾರಣಿಯಾಗಿದ್ದು, ಭಾರತೀಯ ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ ಬಹುಮೂಲ್ಯ ಕೊಡುಗೆ ನೀಡಿದ್ದಾರೆ. ಈ ದಿನದ ಮೂಲಕ ಆರೋಗ್ಯದ ಮಹತ್ವ, ತಡೆಯಬಹುದಾದ ಕಾಯಿಲೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದು ಡಾ.ಈ.ಸಿ. ನಿಂಗರಾಜ್ ಗೌಡರವರು ತಿಳಿಸಿದರು.

ವೈದ್ಯರ ದಿನವನ್ನೂ ವಿಶ್ವದ ಹಲವೂ ದೇಶಗಳು ಆಚರಿಸುತ್ತವೆ. 28 ಮಾರ್ಚ್ 1933 ರಲ್ಲಿ ಅಮೇರಿಕಾದ ಜಾರ್ಜಿಯಾದಲ್ಲಿ ಪ್ರಾರಂಭಿಸಲಾಯಿತು. ಈಗ ಬ್ರೇಜಿಲ್ ಮತ್ತು ಕ್ಯೂಬಾ ದೇಶಗಳು ವೈದ್ಯರ ದಿನದಂದು ರಜಾದಿನವಾಗಿ ಆಚರಿಸುತ್ತಾರೆ. ಅದೇ ರೀತಿ ನೇಪಾಳ, ಇಂಡೋನೇಷಿಯಾ, ಮಲೇಷಿಯಾ, ಕೆನಡಾ, ಆಸ್ಟ್ರೇಲಿಯಾ, ಕುವೈತ್, ಇರಾನ್, ಟರ್ಕಿ, ವಿಯಾಟ್ನಂ, ವೆನಿಜುವಲಾ, ಈಕ್ವೇಡಾರ್ ಮೊದಲಾದ ದೇಶಗಳು ವೈದ್ಯರ ದಿನಾಚರಣೆಯನ್ನು ಆಚರಿಸುತ್ತವೆ ಎಂದು ಡಾ.ಈ.ಸಿ. ನಿಂಗರಾಜ್ ಗೌಡ ರವರು ಸವಿಸ್ತಾರವಾಗಿ ತಿಳಿಸಿದರು.

ಸನ್ಮಾನಿತರಾದ ಡಾ. ಗಜಾನನ ಹೆಗಡೆಯವರು ಮಾತನಾಡಿ ಇಂದಿನ ಆಹಾರ ಪದ್ಧತಿಯಿಂದ ಸಮಾಜದ ಸ್ವಾಸ್ತ್ಯ ಕೆಡುತ್ತಿದೆ, ದೈಹಿಕ ಚಟುವಟಿಕೆಯ ಜೊತೆಗೇ ಉತ್ತಮ ಆಹಾರ ಕ್ರಮವನ್ನು ಬೆಳೆಸಿಕೊಂಡು, ಉತ್ತಮ ಸಮಾಜ ನಿರ್ಮಾಣಗೊಂಡಾಗ, ದೇಶ ಸ್ವಸ್ಥ, ಆರೋಗ್ಯ ಹಾಗೂ ಸುದೃಢ ದೇಶವಾಗಿ ಬೆಳೆಯಲು ಸಾಧ್ಯ ಎಂದರು.

ಡಾ. ರವೀಂದ್ರ ಅವರು ಆರೋಗ್ಯದ ಮಹತ್ವ, ಮತ್ತು ದೈನಂದಿನ ಜೀವನದಲ್ಲಿ ಉತ್ತಮ ಆಹಾರದ ಸೇವನೆಯ ಬಗ್ಗೆ ಸಭೆಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎಂ.ಮೋಹನ್, ಗೋವರ್ಧನ್ ಯಾದವ್, ರವೀಂದ್ರ, ಮುರಳಿ, ವಾಸುದೇವನ್, ರಾಘವೇಂದ್ರ, ಮಂಜುನಾಥ್, ರಮೇಶ್ ಬಾಬು, ಶಶಿಕಾಂತ್, ಶ್ರೀಮತಿ ಶುಭಾ ಮುರಳಿಧರ್, ಡಾ.ಸಿಂಧು, ಗಿರೀಶ್, ನಾಗರಾಜು, ಜಯಪ್ರಕಾಶ್ , ಆನಂದ್, ನವೀನ್ ಹಾಗೂ
ಕ್ಲಬ್ ನ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *