ನಂದಿನಿ ಮನುಪ್ರಸಾದ್ ನಾಯಕ್
ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತಿ ಬರುವ ಭಕ್ತರು ಸುಮ್ಮನೆ ಹತ್ತಿ ಬರೋದಿಲ್ಲ.ಮೊದಲು ಶ್ರೀ ಚಾಮುಂಡೇಶ್ವರಿ ತಾಯಿ ಬಳಿ ಹರಕೆ ಕಟ್ಟಿರುತ್ತಾರೆ.ಆ ಹರಕೆ ಈಡೇರುತ್ತಿದ್ದಂತೆ ಮೆಟ್ಟಿಲಿಗೆ ಅರಿಶಿನ ಕುಂಕುಮ ಹಚ್ಚುವುದು,ಮಂಡಿಗಾಲಲ್ಲಿ ಮೆಟ್ಟಿಲು ಹತ್ತುವುದು.ಇನ್ನೂ ಮುಂತಾದ ಸೇವೆಗಳನ್ನ ಮಾಡುವ ಮೂಲಕ ಹರಕೆ ತೀರಿಸುತ್ತಾರೆ.ಸಾವಿರ, ಲಕ್ಷ ಅಲ್ಲ ಕೋಟ್ಯಾಂತರ ಭಕ್ತರಿಗೆ ಶ್ರೀ ಚಾಮುಂಡೇಶ್ವರಿ ತಾಯಿ ಆಶಿರ್ವಾದ ಮಾಡಿದ್ದಾಳೆ.ಅದಕ್ಕಾಗಿಯೇ ಮೈಸೂರಿನ ಸುತ್ತಾ ಮುತ್ತಲಿರುವ ಭಕ್ತರಿಗಿಂತ ವಿವಿಧ ಜಿಲ್ಲೆ,ರಾಜ್ಯ,ವಿದೇಶದಿಂದಲೂ ಬಂದು ತಾಯಿಯ ದರ್ಶನ ಪಡೆಯುತ್ತಾರೆ.
ಹೌದು
ಗರ್ಭ ಗುಡಿಯೊಳಗೆ ಶ್ರೀ ಚಾಮುಂಡೇಶ್ವರಿ ತಾಯಿ ನಾಗಲಕ್ಷ್ಮೀ ಅಲಕಾರದಲ್ಲಿದ್ದರೇ ಇತ್ತ ಉತ್ಸವ ಮೂರ್ತಿಯ ಚಾಮುಂಡೇಶ್ವರಿಗೆ ಗಜಲಕ್ಷ್ಮೀ ಅಲಂಕಾರ ಮಾಡಲಾಗಿತ್ತು.ನಾಡ ಅಧಿದೇವತೆ ನೋಡಲು ಎರಡು ಕಣ್ಣು ಸಾಲದಂತಾಗಿತ್ತು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ 3 ನೇ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ತಾಯಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷೀತ್ ಹಾಗೂ ಪುರೋಹಿತರು ಮುಂಜಾನೆ ಪಂಚಾಮೃತ ಅಭಿಷೇಕ,ಕುಂಕುಮಾರ್ಚನೆ,ಮಹಾಮಂಗಳಾರತಿ ನೆರವೇರಿಸಿದರು.ದೇವಸ್ಥಾನದ ಹೊರಾಂಗಣ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.ಎಂದಿನಂತೆಯೇ ಬೆಟ್ಟ ಹತ್ತಿ ಬರುವ ಭಕ್ತರಿಗೆ ಪ್ರತ್ಯೇಕ ವ್ಯವಸ್ಥೆ,2000,300 ರೂ ಹಾಗೂ ಧರ್ಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಸರತಿ ಸಾಲಿನಲ್ಲಿ ನಿಂತ ಭಕ್ತರು ಚಾಮುಂಡೇಶ್ವರಿ ತಾಯಿಯ ಅಲಂಕಾರ ಕಣ್ತುಂಬಿಕೊಂಡು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.
ದೇವರ ದರ್ಶನ ಪಡೆದು ಬಂದ ಮುತೈದೆಯರಿಗೆ ಮಡಿಲಕ್ಕಿ ನೀಡಿದರೇ
ಪುರುಷ ಭಕ್ತರಿಗೆ ದೇವಿಯ ಕುಂಕುಮ ಪ್ಯಾಕೇಟ್ ವಿತರಿಸಿದರು.ಯಾವುದೇ ಅಹಿತಕರ ಘಟನೆ ನಡೆಯದಂತೆ ಮೈಸೂರಿನ ಎಲ್ಲಾ ಪೋಲಿಸ್ ಠಾಣೆಯಿಂದ ಪೋಲೀಸರನ್ನ ನಿಯೋಜನೆ ಮಾಡಲಾಗಿತ್ತು. ಮಹಿಳೆಯರ ಸುರಕ್ಷತಾ ದೃಷ್ಠಿಯಿಂದ ಮಹಿಳಾ ಪೋಲಿಸರನ್ನ ನೇಮಿಸಲಾಗಿತ್ತು.ಪ್ರತಿ ವರ್ಷದಂತೆ ಈ ಬಾರಿಯೂ ಖಾಸಗಿ ವಾಹನಗಳಿಗೆ ನಿರ್ಬಂಧ ಏರಲಾಗಿದ್ದು ಲಲಿತ ಮಹಲ್ ಮೈದಾನದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.
ವಸ್ತ್ರ ಸಂಹಿತೆ: ರಾಜ್ಯದಲ್ಲಿ ಕೆಲವೊಂದು ದೇವಸ್ಥಾನದಲ್ಲಿ ಭಕ್ತರು ಸಾಂಪ್ರದಾಯಿಕ ಉಡುಪು ಧರಿಸಿಯೇ ಬರಬೇಕೆಂದು ದೇವಸ್ಥಾನ ಮಂಡಳಿ ನಾಮಫಲಕ ಹಾಕಿರುತ್ತಾರೆ.ಭಕ್ತರು ಕೂಡ ಅದರಂತೆ ಬಟ್ಟೆ ಧರಿಸಿ ಹೋಗುತ್ತಾರೆ.ಆದರೇ ಅಂತಹ ವಸ್ತ್ರ ಸಂಹಿತೆ ಶ್ರೀ ಚಾಮುಂಡೇಶ್ವರಿ ತಾಯಿ ಸನ್ನಿಧಿಯಲ್ಲಿ ಇನ್ನೂ ಜಾರಿಯಾಗಿಲ್ಲ.ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಕೆಲ ಸಂಘಟನೆಗಳು,ಸಂಘ ಸಂಸ್ಥೆಗಳು ಹೋರಾಟ ಮಾಡಿ ಸರ್ಕಾರಕ್ಕೆ ಆಡಳಿತ ಮಂಡಳಿಗೆ ಮನವಿ ಮಾಡಿದರೂ ಕೂಡ ವಸ್ತ್ರಸಂಹಿತೆ ಜಾರಿಗೆ ಇನ್ನೂ ಉತ್ತರ ಸಿಕ್ಕಿಲ್ಲ.ಮುಂದಿನ ದಿನಗಳಲ್ಲಾದರೂ ಮಹಿಳೆಯರು ಸೀರೆ ಪುರುಷರು ಪಂಚೆ ಶರ್ಟ್ ಧರಿಸಿ ಬರುವ ಆದೇಶ ಹೊರಬಿಳುವುದೇ ಇಲ್ಲವೋ ಕಾದಷ್ಟೇ ನೋಡಬೇಕಿದೆ.