ನಂದಿನಿ ಮನುಪ್ರಸಾದ್ ನಾಯಕ್
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಿ ವೈ ವಿಜಯೇಂದ್ರ ಯಡಿಯೂರಪ್ಪನವರು,ಪಕ್ಷದ ಮತ್ತು ವಿವಿಧ ಕಾರ್ಯಕ್ರಮಗಳ ನಿಮಿತ್ತ ಮೈಸೂರಿಗೆ ಭೇಟಿ ನೀಡಿದಾಗ ಅವರನ್ನು ಬಿಜೆಪಿ ಪಕ್ಷದ ಕಚೇರಿಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಗುರುಪಾದ ಸ್ವಾಮಿ ಸ್ವಾಗತಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನಗರ ಬಿಜೆಪಿ ರೈತಮೋಚ ಪ್ರಧಾನ ಕಾರ್ಯದರ್ಶಿಯಾದ ಜಿ ಎಂ ಪಂಚಾಕ್ಷರಿ, ವರುಣ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾದ ಬೀದರಗೂಡು ಕುಮಾರ್, ಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ಅಹಲ್ಯ ನಾಗರಾಜು, ಬಿದರಗೂಡು ಮಹಾದೇವಸ್ವಾಮಿ ಮತ್ತು ಮಂಜು, ನಂಜನಗೂಡಿನ ಯುವ ಬಿಜೆಪಿ ಮುಖಂಡರಾದ ಅಜಿತ್ ಶೈವ ಮುಂತಾದವರು ಹಾಜರಿದ್ದರು