ನಂದಿನಿ ಮೈಸೂರು
ಸಿಗ್ಮಾ ಆಸ್ಪತ್ರೆಯಲ್ಲಿ 500 ಕ್ಕೂ ಹೆಚ್ಚ ಜನರಿಗೆ ಉಚಿತ ಕಿಡ್ನಿ ಆರೋಗ್ಯ ತಪಾಸಣೆ
ಹಾಗೂ ಕಿಡ್ನಿ ದಾನಿಗಳಿಗೆ ಮತ್ತು ಪಡೆದವರಿಗೆ ರಾಜಮತೆಯಿಂದ ಸನ್ಮಾನ
ಚಿತ್ರದಲ್ಲಿ ರಾಜಮಾತೆ ಡಾ. ಪ್ರಮೋದದೇವಿ ಒಡೆಯರ್ ಜ್ಯೋತಿ ಬೆಳಗುತ್ತಿರುವುದು, ಎಂ ಎಲ್ ಎ ಕೆ ಹರೀಶ್ ಗೌಡ, ಡಾ. ಮೂರ್ತಿ ವಿ ಎಸ್ ಎಸ್ ಅಧ್ಯಕ್ಷರು, ಮತ್ತು ಆಸ್ಪತ್ರೆ ನಿರ್ದೇಶಕರು ಕಿಡ್ನಿ ಕಸಿ ತಜ್ಞರು ಡಾ. ಕೆ ಎಂ ಮಾದಪ್ಪ, ನಿರ್ದೇಶಕರಾದ ಡಾ. ರಾಜೇಶ್ವರಿ, ನೆಫ್ರೋಲಜಿಸ್ಟ್ ಡಾ. ಅನಿಕೇತ್ ಪ್ರಭಾಕರ್, ಕಿಡ್ನಿ ಕಸಿ ತಜ್ಞರಾದ ಡಾ. ಸೋಮಣ್ಣ, ನಿರ್ದೇಶಕರಾದ ಶೈಲಶಂಕರ್, ವ್ಯವಸ್ಥಾಪಕ ನಿರ್ದೇಶಕರಾದ ಎಸ್ ಜ್ಞಾನಶಂಕರ್, ಇದ್ದರು.
ರಾಮನವಮಿ ಯಂದು ರಾಜಮಾತೆ ಡಾ. ಪ್ರಮೋದದೇವಿ ರವರು ಉದ್ಘಾಟಿಸಿ ನಮ್ಮ ರಾಜವಂಶ ಪರಂಪರೆಯವರು ಮೊದಲಿನಿಂದಲೂ ಅರೋಗ್ಯದ ದೃಷ್ಟಿಯಲ್ಲಿ ಸೇವೆ ಮಾಡಿಕೊಂಡು ಬರುತ್ತಾ ಇದ್ದಾರೆ, ಈ ಆಸ್ಪತ್ರೆಯು ಕಿಡ್ನಿ ರೋಗ ಮುಂದಾಳತ್ವ ಇರುವುದನ್ನು ಸಭೆಯಲ್ಲಿ ಪ್ರಸಂಶಿಸಿದರು, ಡಾ. ಕೆ ಎಂ ಮಾದಪ್ಪನವರು ಆಸ್ಪತ್ರೆಯ ಕಿಡ್ನಿಯ ಸಂಬಂದ ತಿಂಗಳಿಗೆ 500ಕ್ಕೂ ಹೆಚ್ಚು ಶಸ್ತ ಚಿಕಿತ್ಸೆ ಮಾಡುತ್ತಿದ್ದು ಅದರಂತೆ ದಿನಕ್ಕೆ 15 ರಿಂದ 20 ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದು 72 ಕಿಡ್ನಿ ಕಸಿ ಮಾಡಿರುವುದನ್ನು ವೈದ್ಯ ಮತ್ತು ವೈದ್ಯೇತರ ತಂಡಕ್ಕೆ ಶ್ಲಾಗಿಸಿದರು.
ಡಾ. ಅನಿಕೇತ್ ಪ್ರಭಾಕರ್ ಅವರು 2024-2025ರ ಸಾಲಿನ ಕಿಡ್ನಿ ದಾನಿಗಳಿಗೆ ಮತ್ತು ಪಡೆದವರಿಗೆ ಅಭಿನಂದಿಸಿ ರಾಜಮಾತೆ ಡಾ.ಪ್ರಮೋದದೇವಿ ಯವರಿಂದ ಸನ್ಮಾನ ಮಾಡಿಸಿದರು.
ಕೆ ಹರೀಶ್ ಗೌಡ ಎಂಎಲ್ಎ ರವರು ಮಾತನಾಡಿ ಸಿಗ್ಮಾ ಆಸ್ಪತ್ರೆ ಕಿಡ್ನಿ ಸಂಬಂದ ಚಿಕಿತ್ಸೆಗೆ ಮತ್ತು ಕಿಡ್ನಿಯಲ್ಲಿನ ಕಲ್ಲುಗಳಿಗೆ ಚಿಕಿತ್ಸೆ ನೀಡುವಲ್ಲಿ ಉನ್ನತ ಆಸ್ಪತ್ರೆ ಆಗಿದೆ ಹಾಗಾಗಿ ನಾನು ಎಲ್ಲಿ ಹೋದರು ಕಿಡ್ನಿಯಲ್ಲಿನ ಕಲ್ಲು ಅಂದರೆ ಯಾವಾಗಲೂ ಸಿಗ್ಮಾ ಆಸ್ಪತ್ರೆಗೆ ಹೋಗಿ ಎನ್ನುತ್ತೇನೆ ಎಂದು ಬಣ್ಣಿಸಿ ಸಿಗ್ಮಾ ಆಸ್ಪತ್ರೆಯ ಸೇವೆಯನ್ನು ಕೊಂಡಾಡಿ ಇದು ಆಯುಷ್ಮಾನ್ ಭಾರತ್ ಯೋಜನೆ ಮುಕಾಂತರ ಕಿಡ್ನಿ ರೋಗಗಳಿಗೆ ಉತ್ತಮ ಸೇವೆ ಮಾಡುತ್ತಾ ಬಂದಿದೆ ಎಂದು ಹೇಳಿದರು.
ವ್ಯವಸ್ಥಾಪಕ ನಿರ್ದೇಶಕರಾದ ಎಸ್ ಜ್ಞಾನಶಂಕರ್ ರವರು ಎಲ್ಲರನ್ನೂ ಸ್ವಾಗತಿಸಿ ರಾಜಮನೆತನದಲ್ಲಿ ಡಾ. ಪ್ರಮೋದ ದೇವಿಯವರ ಶಿಕ್ಷಣ,ಆರೋಗ್ಯ ಮತ್ತು ಸಮಾಜ ಸೇವೆಯ ಕಾಳಜಿಯನ್ನು ವಿವರಿಸಿ ಸ್ಲಾಗಿಸಿದರು. ಮತ್ತು ಹರೀಶ್ ಗೌಡರವರ ಕನ್ನೆಗೌಡರ ಕೊಪ್ಪಲಿನ ಕನ್ನೆಗೌಡರ ಸೇವೆ ಹಾಗೇಹೆ ಚಾಮರಾಜ ಕ್ಷೇತ್ರದ ಎಂಎಲ್ಎ ರವರು ಸಹ ಸಮಾಜ ಸೇವೆ ಅದರಲ್ಲೂ ಆರ್ಥಿಕವಾಗಿ ಹಿಂದುಳಿದವರಿಗೆ ಸೇವೆ ಮಾಡಿ ಎಂಎಲ್ಎ ಆಗಿದ್ದಾರೆ ಎಂದು ಹೇಳುತ್ತಾ ವಿಶೇಷವಾಗಿ ಸ್ವಾಗತಿಸಿದರು, ಮತ್ತು ವಿಶ್ವ ಶಾಂತಿ ಅಧ್ಯಕ್ಷರಾದ ಡಾ ಮೂರ್ತಿ, ಮೋಹನ್ ಮತ್ತು ಮಹಾಲಿಂಗಪ್ಪ ರವರು ಮತ್ತು ಪದಾಧಿಕಾರಿಗಳನ್ನು ಸ್ವಾಗತಿಸಿದರು. ನಿರ್ದೇಶಕರಾದ ಡಾ. ರಾಜೇಶ್ವರಿ ಮಾದಪ್ಪನವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.
ಡಾ. ಡಿ ಎನ್ ಸೋಮಣ್ಣ ರವರು ವಂದನಾರ್ಪಣೆ ಮಾಡಿದರು. ಶಿಬಿರದಲ್ಲಿ ಸುಮಾರು 500ಕ್ಕೂ ಎಷ್ಟು ಜನ ಕಿಡ್ನಿ ಸಂಬಂದ, ರಕ್ತ ಮತ್ತು ಮೂತ್ರ ಪರೀಕ್ಷೆಗಳು ಹಾಗೂ ಕಿಡ್ನಿ ಸ್ಕ್ಯಾನ್ ಪರೀಕ್ಷೆಗಳನ್ನು ಉಚಿತವಾಗಿ ಮಾಡಿಸಿಕೊಂಡು ತಜ್ಞರ ಸಲಹೆಗಳನ್ನು ಪಡೆದರು.