ಸ್ವಚ್ಛತಾ ಕಾರ್ಮಿಕರನ್ನು ಸರ್ಕಾರ, ನೇರ ಪಾವತಿ ಮಾಡುವುದಾಗಿ ವಚನ ನೀಡಿ ಆಯವ್ಯಯದಲ್ಲಿ ಈ ಕೆಳವರ್ಗದ ಸ್ವಚ್ಛತಾ ನೌಕರರನ್ನು ಉದಾಸೀನ ಮಾಡಿದೆ:ರಾಜು

ನಂದಿನಿ ಮೈಸೂರು

ಮನೆ ಮನೆ ಕಸ ಸಂಗ್ರಹಣೆ ಮಾಡುವ ಸ್ವಚ್ಛತಾ ವಾಹನ ಚಾಲಕರು ಮತ್ತು ಲೋಡರ್‌ಗಳು ಹಾಗೂ ಒಳಚರಂಡಿ ವಿಭಾಗದ ಸ್ವಚ್ಛತಾ ಕಾರ್ಮಿಕರನ್ನು ಸರ್ಕಾರ, ನೇರ ಪಾವತಿ ಮಾಡುವುದಾಗಿ ವಚನ ನೀಡಿ ಆಯವ್ಯಯದಲ್ಲಿ ಈ ಕೆಳವರ್ಗದ ಸ್ವಚ್ಛತಾ ನೌಕರರನ್ನು ಉದಾಸೀನ ಮಾಡಿ ವಿಳಂಬ ನೀತಿ ಅನುಸರಿಸುತ್ತಿರುವ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಹೊಸ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದ ಅವರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಸಂಘ ರಾಜ್ಯಾಧ್ಯಕ್ಷ ಡಿ.ಆರ್.ರಾಜು ರವರು ಮಾತನಾಡಿ
ಮೈಸೂರು ಜಿಲ್ಲೆಯ ಸುಮಾರು 13 ಯು.ಎಲ್.ಬಿ. ಗಳು ಅಂದರೆ ಸ್ಥಳೀಯ ಸಂಸ್ಥೆಗಳಾದ ಮೈಸೂರು ಮಹಾನಗರ ಪಾಲಿಕೆ, ಹೂಟಗಳ್ಳಿ ನಗರಸಭೆ, ಹುಣಸೂರು ನಗರಸಭೆ, ನಂಜನಗೂಡು ನಗರ ಸಭೆ, ಕೆ.ಆರ್ ನಗರ ಪುರಸಭೆ, ತಿ.ನರಸೀಪುರ / ಬನ್ನೂರು ಪುರಸಭೆ, ಪಿರಿಯಾಪಟ್ಟಣ ಪಟ್ಟಣ ಪಂಚಾಯಿತಿ, ಹೆಚ್.ಡಿ ಕೋಟಿ ಪಟ್ಟಣ ಪಂಚಾಯಿತಿ ಸರಗೂರು ಪಟ್ಟಣ ಪಂಚಾಯಿತಿ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ, ಮೋಗಾದಿ ಪಟ್ಟಣ ಪಂಚಾಯಿತಿ, ಶ್ರೀರಾಂಪುರ ಪಟ್ಟಣ ಪಂಚಾಯಿತಿಗಳಲ್ಲಿ
ಮನೆ ಮನೆ ಕಸ ಸಂಗ್ರಹಣೆ ಮಾಡುವ ಸ್ವಚ್ಛತಾ ವಾಹನ ಚಾಲಕರು ಮತ್ತು ಲೋಡರ್‌ಗಳು ಹಾಗೂ ಒಳಚರಂಡಿ ವಿಭಾಗದ ಸ್ವಚ್ಛತಾ ಕಾರ್ಮಿಕರನ್ನು ಸರ್ಕಾರ, ನೇರ ಪಾತವತಿ ಮಾಡುವುದಾಗಿ ವಚನ ನೀಡಿ ಆಯವ್ಯಯದಲ್ಲಿ ಈ ಕೆಳವರ್ಗದ ಸ್ವಚ್ಛತಾ ನೌಕರರನ್ನು ಉದಾಸೀನ ಮಾಡಿದ್ದಾರೆ.ಸ್ವಚ್ಚತಾ ಕೆಲಸ ಕಾರ್ಯಗಳನ್ನು ತಮ್ಮ ಆರೋಗ್ಯ ವನ್ನು ಕೆಡಿಸಿಕೊಂಡು ಉದ್ಯೋಗ ಭದ್ರತೆ ಇಲ್ಲದೆ ಉಚಿತ ಚಿಕಿತ್ಸೆ ಪಾಲಿಸಿ ಅಥವಾ ಸರ್ಕಾರ ಕಾರ್ಮಿಕ ಇಲಾಖೆ ನಿಗದಿ ಮಾಡಿರುವ ಕನಿಷ್ಠ ವೇತನ ವಂಚನೆಗೊಳಗಾಗುವುದಲ್ಲದೇ ಹತ್ತಾರು ವರ್ಷ ಸೇವೆ ಮಾಡಿ ಸೇವೆಯಲ್ಲಿ ಮೃತಪಟ್ಟ ಕುಟುಂಬ ವರ್ಗಗಳಿಗೆ ಅನುಕಂಪದ ಕೆಲಸವನ್ನು ನೀಡದೇ ಇರುವುದರಿಂದ ತಕ್ಷಣ ಮೇಲ್ಕಂಡ ನೌಕರರ ವರ್ಗದವರನ್ನು ನೇರ ಪಾವತಿಗೊಳಿಸಬೇಕು.ಮೈಸೂರು ನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 158 ಖಾಯಂ ಪೌರ ಕಾರ್ಮಿಕರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಕಸಬಾ ಹೋಬಳಿ,ಮಳಲವಾಡಿ ಗ್ರಾಮಕ್ಕೆ ಸೇರಿದ 1 ಎಕರೆ 20 ಗುಂಟೆ ಜಾಗದಲ್ಲು G-3 ಮಾದರಿಯ ಮನೆಗಳನ್ನು ನಿರ್ಮಿಸಲು 2017-18 ಸಾಲಿನಲ್ಲಿ ಕ್ರಿಯಾ ಯೋಜನೆಯನ್ನು ಮಾಡಲಾಗಿತ್ತು.ಪರಿಶಿಷ್ಟ ಜಾತಿಗೆ ಸೇರಿದ ಪೌರ ಕಾರ್ಮಿಕರು ಎಂದು ಒಂದೇ ಕಾರಣಕ್ಕೆ ನಗರ ಮಧ್ಯದಲ್ಲಿ ವಾಸಿಸಲು ಅವಕಾಶ ನೀಡದೆ. ಮೈಸೂರು ನಗರ ಹೆಸರ ಗ್ರಾಮದ ಸರ್ವೆ ನಂ. 199, 500, 501 ಗಳಿಗೆ ಸೇರಿದ ಸರ್ವೆ ನಂಬರ್‌ಗಳಲ್ಲಿ ಈ ಮನೆಗಳನ್ನು ನಿರ್ಮಿಸಿ ಪಾಲಿಕೆಯು ಅನುಮತಿ ನೀಡಲಾಗಿದೆ, ಕನ್‌ಸ್ಟ್ರಕ್ಷನ್ ಆವಧಿಯು 18 ತಿಂಗಳ ಕಾಲಾವಕಾಶವು ಮುಗಿದು ಹೋಗಿದ್ದು, ಇದವರೆವಿಗೂ ಆಯ್ಕೆಯಾದ ಫಲಾನಾಭಗಳಿಗೆ ಮನೆಗಳನ್ನ ನೀಡಿರುವುದಿಲ್ಲ. ಮನೆಯ ಅಳತೆ ಕೇವಲ 21.0 x 2215 ಅಡಿಗಳಾಗಿದ್ದು, ಈ ಮನೆಯ ಮೊತ್ತ ರೂ.14,27,000/- ಗಳಾಗಿರುತ್ತದೆ. ಪಾಲಿಕೆ ಅನುದಾನ ರೂ.1,50,000/– ರಾಜ್ಯ ಸರ್ಕಾರದ ಅನುದಾನ ರೂ.6.00,000/-. ಶೇ.24.10 ಅನುದಾನದಲ್ಲಿ ರೂ3.00,000/-ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ರೂ.1.50,000/- ಮತ್ತು ಫಲಾನುಭವಿ ವಂತಿಕೆ ಹಣ ರೂ.2,50,000/- ಈ ಹಿಂದೆಯೇ ತೀರ್ಮಾನವಾಗಿರುತ್ತದೆ. ಈ ಒಡಂಬಡಿಕೆಯಂತೆ ನಿಗದಿತ ಸಮಯದಲ್ಲಿ ಮನೆಗಳನ್ನು ನೀಡದೆ ವಿಳಂಬ ಮಾಡಿರುವುದು ನಗರ ಪಾಲಿಕೆ, ಇದುವರೆಗೂ ಖರ್ಚು ಮಾಡಿರುವುದು ರೂ.12,53,000/- ಗಳು ಎಂದು ತಿಳಿದು ಬಂದಿರುತ್ತದೆ, ಆದರೆ ನಿಗದಿತ ಸಮಯಕ್ಕೆ ಮನೆಗಳನ್ನು ನೀಡದೆ ಹೆಚ್ಚುವರಿ ಖರ್ಚು, ವೆಚ್ಚಗಳನ್ನು ಪೌರ ಕಾರ್ಮಿಕರ ಮೇಲೆ ಹೊರೆ ಹೊರಿಸಿ ಪ್ರತಿ ಪೌರ ಕಾರ್ಮಿಕರು ರೂ.3.00,000/- ಗಳ ವಂತಿಕೆ ಹಣ ಕಟ್ಟಲು ಸೂಚಿಸಿರುವುದು ಯಾವ ನ್ಯಾಯ? ಈ ಹಣವನ್ನು ಪೌರ ಕಾರ್ಮಿಕರಿಂದ ಕಟ್ಟಲು ಕಷ್ಟ ಸಾಧ್ಯಾಗಿರುತ್ತದೆ. ಆದ್ದರಿಂದ ಸದರಿ 158 ಪೌರ ಕಾರ್ಮಿಕರ ಫಲಾನುಭವಿಗಳ ಪರವಾಗಿ ಪಾಲಿಕೆಯು ಭರಿಸಬೇಕು ಮತ್ತು ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ನೇರ ಪಾವತಿ ಹೆಚ್ಚುವರಿ, ಮನೆ ಮನೆ ಕಸ ಸಂಗ್ರಹಣೆ ಮಾಡುವ ವಾಹನ ಚಾಲಕರು, ಲೋಡರ್ ಒಳಚರಂಡಿ ವಿಭಾಗದ ಸ್ವಚ್ಛತಾ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜನರಲ್ ಗ್ರೂಫ್ ಇನ್ಸೂರೆನ್ಸ್ ಪಾಲಿಸಿ ಅಂದರೆ ಹಣ ರಹಿತ ಸುಮಾರು ರೂ.5-00 ಲಕ್ಷದವರೆಗೂ ತುರ್ತು ಚಿಕಿತ್ಸೆ ಪಡೆಯುವ ಸೌಲಭ್ಯವನ್ನು ಪ್ರತಿಯೊಬ್ಬರೆಗೆ ನೀಡಬೇಕೆಂದು ಮುಂದಿನ ಬಜೆಟ್‌ನಲ್ಲಿ ಹಣ ನಿಗದಿ ಪಡಿಸಲು ಜಿಲ್ಲಾಧಿಕಾರಿಗಳು, ಆಯುಕ್ತರು, ಮೈಸೂರು ಮಹಾನಗರ ಪಾಲಿಕೆಗೆ ಕೋರಲಾಗಿದೆ ಎಂದರು

ಪ್ರತಿಭಟನೆಯಲ್ಲಿ ಹಿರಿಯ ಸಲಹೆಗಾರರು ನಂಜಪ್ಪ ಬಸವನಗುಡಿ ಮತ್ತು ಅಧ್ಯಕ್ಷರು ಕುಮಾರಸ್ವಾಮಿ ಹಾಗೂ ಕಾರ್ಯಧ್ಯಕ್ಷರು ಮಂಚಯ್ಯ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್ ಮತ್ತು ಜಾಗೃತಿ ಸಮಿತಿಯ ಸದಸ್ಯರುಗಳಾದ ಪವಿತ್ರ, ವಸಂತಕುಮಾರಿ, ಹಾಗೂ ಜಾಗೃತಿ ಸಮಿತಿಯ ಕಾರ್ಯದರ್ಶಿ ಅಂಜಲಿ,ಮಂಜು ಸೇರಿದಂತೆ ನೂರಕ್ಕೂ ಹೆಚ್ಚು ಪೌರಕಾರ್ಮಿಕರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *