ಹಲ್ಲರೆ ಪಿಎಸಿಎಸ್ ಗೆ ಅದ್ಯಕ್ಷರಾಗಿ ಬಸವರಾಜ್ ಅವಿರೋಧವಾಗಿ ಆಯ್ಕೆ
ಮಲ್ಕುಂಡಿ:- ಸಮೀಪದ ಹಲ್ಲರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅದ್ಯಕ್ಷರಾಗಿ ಬಸವರಾಜ್ ಅವಿರೋಧವಾಗಿ ಆಯ್ಕೆಯಾದರು.
ಅದ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸಂಘದ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅದ್ಯಕ್ಷ ಸ್ಥಾನಕ್ಕೆ ಬಸವರಾಜ್ ಉಪಾಧ್ಯಕ್ಷ ಸ್ಥಾನಕ್ಕೆ ಪುಟ್ಟಮಾದಯ್ಯ ನಾಮಪತ್ರ ಸಲ್ಲಿಸಿದರು. ಇವರಿಬ್ಬರನ್ನು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು. ಇವರ ಆಯ್ಕೆಯನ್ನು ಚುನಾವಣೆ ಅಧಿಕಾರಿ ಅವಿನಾಶ್ ಘೋಷಣೆ ಮಾಡಿದರು.
ನೂತನ ಅದ್ಯಕ್ಷ ಬಸವರಾಜ್ ಮಾತನಾಡಿ ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸುವ ಕೆಲಸ ಮಾಡುತ್ತೆನೆ.ಎಲ್ಲಾ ಸದಸ್ಯರ ಸಹಕಾರದೊಂದಿಗೆ ಸಂಘದ ಬೆಳೆವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೆನೆ ಎಂದು ತಿಳಿಸಿದರು.
ಉಪಾಧ್ಯಕ್ಷ ಪುಟ್ಟಮಾದಯ್ಯ,ನಿರ್ದೇಶಕರುಗಳಾ ,ಗ್ರಾ ಪಂ ಮಾಜಿ ಅಧ್ಯಕ್ಷ ಹೆಚ್ ಸಿ ಮಹದೇವಸ್ವಾಮಿ,ಶಿವಮೂರ್ತಿ,ಶಿವಣ್ಣನಾಯಕ,ಬಸವಣ್ಣ,ರಾಜಪ್ಪ,ಸೈವುಲ್ಲಾ,ಭಾಗ್ಯ,ಚೆನ್ನಮ್ಮ, ಶಿವಣ್ಣ,ಸ್ವಾಮಿ,ಮುಖಂಡರುಗಳಾದ ಶಿವಬುದ್ದಿ,ನಾಗರಾಜು,ಸ್ವಾಮಿ,ನಂಜುಂಡಪ್ಪ,ಮುದ್ದಮಲ್ಲಪ್ಪ,ಪ್ರಕಾಶ್,ಸಿಇಓ ಹೆಚ್ ಡಿ ಶಿವಕುಮಾರ್, ಗುಮಾಸ್ತ ಮಹದೇವಸ್ವಾಮಿ,ಅಟೆಂಡರ್ ರಮೇಶ್, ಸೇರಿದಂತೆ ಪ್ರಮುಖರು ಹಾಜರಿದ್ದರು