ರಾಜ್ಯದ ದೂರಶಿಕ್ಷಣದ ಏಕಮಾತ್ರ ವಿಶ್ವವಿದ್ಯಾನಿಲಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ

ರಾಜ್ಯದ ದೂರಶಿಕ್ಷಣದ ಏಕಮಾತ್ರ ವಿಶ್ವವಿದ್ಯಾನಿಲಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ನ್ಯಾಕ್ ಎ+ ಗ್ರೇಡ್ ನೊಂದಿಗೆ ಮೈಸೂರು ನಗರದ ಮಾನಸಗಂಗೋತ್ರಿ ಆವರಣದ ಸನಿಹದಲ್ಲಿರುವ ಒಂದು ದೂರಶಿಕ್ಷಣ ವಿಶ್ವವಿದ್ಯಾನಿಲಯ. ಮೈಸೂರು ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾಗಿದ್ದ ಹಿಂದಿನ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯನ್ನು (1969-96) ಉನ್ನತೀಕರಿಸಿ ಸ್ಥಾಪಿಸಲಾಗಿದೆ. ಆರಂಭದಲ್ಲಿ ಅಂಚೆ ಬೋಧನೆ ಮೂಲಕ ಬಿ.ಎ., ಬಿ.ಕಾಂ., ಎಂ.ಎ., ಎಂ.ಕಾಂ., ಮತ್ತು ಇತರ ಶಿಕ್ಷಣಗಳನ್ನು ನೀಡಲಾಗುತ್ತಿತ್ತು. ನವದೆಹಲಿಯಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಸ್ಥಾಪಿತವಾದ (1985) ಮೇಲೆ ದೂರಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾದುವು. ಇದರ ಫಲವಾಗಿ ಅಂಚೆ ಬೋಧನೆ ವಿಧಾನದಿಂದ ದೂರ ಶಿಕ್ಷಣ ವಿಧಾನಕ್ಕೆ ಬೋಧನೆಯನ್ನು ಬದಲಾಯಿಸಿಕೊಳ್ಳಲಾಯಿತು. ಕರ್ನಾಟಕದ ಶೈಕ್ಷಣಿಕ ಅಗತ್ಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು 1996 ಜೂನ್ 1ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ವಿಶ್ವವಿದ್ಯಾನಿಲಯವು ಸ್ಥಾಪಿತವಾಯಿತು.

ಮೈಸೂರಿನ ಮತ್ತೊಂದು ಅರ್ಥಪೂರ್ಣ ಮೆರಗು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮರಗಿಡಗಳೊಂದಿಗೆ ವಿಸ್ತಾರವಾದ ಹಸಿರು ಆವರಣದ ಪ್ರಶಾಂತ ವಾತಾವರಣದಲ್ಲಿ ಕರಾಮುವಿ ಕಾರ್ಯೋನ್ಮುಖವಾಗಿದೆ.
ಇದೊಂದು ಶೈಕ್ಷಣಿಕ ಉತ್ಕೃಷ್ಟತೆಯ ಮಹೋನ್ನತ ಸಂಸ್ಥೆಯಾಗಿದೆ.
ಕಲಿಯುವವರ ವೈಯಕ್ತಿಕ ಮತ್ತು ವೃತ್ತಿಪರ ಯಶಸ್ಸನ್ನು ಉತ್ತೇಜನಗೊಳಿಸಲಾಗುತ್ತದೆ.
ವಯಸ್ಸು,ಜಾತಿ,ಲಿಂಗ, ಸಾಮಾಜಿಕ-ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಬಯಸುವ ಎಲ್ಲರಿಗೂ ಪ್ರವೇಶವನ್ನು ಒದಗಿಸುತ್ತಿದೆ.
ಕರ್ನಾಟಕದಲ್ಲಿ ದೂರ ಶಿಕ್ಷಣವನ್ನು ಉತ್ತೇಜಿಸುವುದರೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ.
ಕಲಿಯುವವರಿಗೆ ವೇಗದಲ್ಲಿ ಅಧ್ಯಯನ ಮಾಡಲು ತಯಾರಿಗೊಳಿಸಲಾಗುತ್ತಿದೆ.
ದೇಶದ ಸಶಕ್ತತೆಗೆ ಪ್ರಯತ್ನಿಸಲಾಗುತ್ತಿದೆ.

ಮುಕ್ತ ವಿಶ್ವವಿದ್ಯಾನಿಲಯದ ಪ್ರಮುಖ ಧ್ಯೇಯಗಳಿವು:
ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬ ಧ್ಯೇಯ ವಾಕ್ಯದೊಂದಿಗೆ ಇಡೀ ರಾಜ್ಯದಲ್ಲಿ
ವಿದ್ಯಾರ್ಥಿಗಳಿಗೆ ಅವರ ಕಲಿಕಾ ವೇಗಕ್ಕೆ ಅನುಗುಣವಾಗಿ ಮನೆ ಬಾಗಿಲಿಗೆ ಉನ್ನತ ಶಿಕ್ಷಣವನ್ನು ನೀಡುವುದು, ವಯೋಮಾನದ ತಾರತಮ್ಯವಿಲ್ಲದೆ/ಮಿತಿಯಿಲ್ಲದೆ ಪ್ರತಿಯೊಬ್ಬರಿಗೂ ಉನ್ನತ ಶಿಕ್ಷಣವನ್ನು ನೀಡುವುದು. ವೃತ್ತಿಪರತೆ ಮತ್ತು ವೃತ್ತಿ ನೈಪುಣ್ಯತೆ ತಂದು ಕೊಡುವ ರೀತಿಯಲ್ಲಿ ಅಗತ್ಯವಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವುದು.
ಪಠ್ಯಗಳನ್ನು ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳ ಮೂಲಕ ನಡೆಸಿಕೊಡಲಾಗುತ್ತದೆ

ಸರಳ ಪ್ರವೇಶ ನಿಬಂಧನೆಗಳು, ವಿದ್ಯಾರ್ಥಿ ಆಸಕ್ತಿ ಹಾಗೂ ಅನುಕೂಲಕ್ಕೆ ಅನುಗುಣವಾಗಿ ಅಧ್ಯಯನ ಮಾಡುವ ಅವಕಾಶ ಒದಗಿಸುವುದು, ಪೂರ್ಣಕಾಲಿಕ ವಿದ್ಯಾರ್ಥಿಗಳಂತೆ ಅಧ್ಯಯನ ಮುಂದುವರಿಸಲು ಸಾಧ್ಯವಾಗದ ಉದ್ಯೋಗಸ್ಥರಿಗೆ, ಗ್ರಾಮಾಂತರ ಪ್ರದೇಶದ ಜನರಿಗೆ ಶಿಕ್ಷಣನೀಡುವುದು, ಪುರುಷರಿಗೆ ಹಾಗೂ ಮಹಿಳೆಯರಿಗೆ, ತೃತೀಯ ತೃತೀಯ ಲಿಂಗಿಗಳಿಗೆ ಮತ್ತು ಎಲ್ಲರಿಗೂ ಶಿಕ್ಷಣ ನೀಡುವುದು, ಆಧುನಿಕ ಮಾಹಿತಿ ತಂತ್ರಜ್ಞಾನದ ಬೆಳೆವಣಿಗೆಗಳನ್ನು ಅನುಸರಿಸಿ ಹೊಸ ಶಿಕ್ಷಣಗಳನ್ನು ತೆರೆಯುವುದು.

ಕೆಎಸ್‌ಒಯು ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿದ್ದು, ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC)ಮಾನ್ಯತೆ ಪಡೆದಿದೆ ಹಾಗೂ ಎ+ ಗ್ರೇಡ್ ಹೊಂದಿದೆ. ಯುಜಿಸಿ ನಿಯಮಾವಳಿ ಪ್ರಕಾರ ಪೂರ್ಣಾವಧಿಯಲ್ಲಿ ಭೌತಿಕ, ಒಂದು ಕೋರ್ಸ್ ಮತ್ತು ದೂರ ಶಿಕ್ಷಣದಲ್ಲಿ ಇನ್ನೂಂದು ಕೋರ್ಸ್‌ಗಳನ್ನು ಏಕಕಾಲದಲ್ಲೇ (ಒಂದೇ ವರ್ಷದಲ್ಲಿ) ಅಧ್ಯಯನ ಮಾಡಲು ಅವಕಾಶ ಇರುತ್ತದೆ.

ಮನೆಯಲ್ಲಿದ್ದುಕೊಂಡು, ಉದ್ಯೋಗ ಮಾಡಿಕೊಂಡು,ಬೇರೆಡೆ ಪೂರ್ಣಕಾಲಿಕವಾಗಿ ಓದಿಕೊಂಡು,ಪದವಿ ವ್ಯಾಸಂಗ ಮೊಟಕುಗೊಳಿಸಿದ್ದವರು,
ಸರ್ವರಿಗೂ ಕರಾಮುವಿ ಶಿಕ್ಷಣವನ್ನು ಒದಗಿಸಲು ಮುಕ್ತವಾಗಿ ಅವಕಾಶ ಕಲ್ಪಿಸಿದೆ.

ಒಂದು ವಿವಿ ಹಲವು ಕಾರ್ಯಕ್ರಮಗಳು ;
ಪದವಿ , ಸ್ನಾತಕೋತ್ತರ ಪದವಿ, ಡಿಪ್ಲೊಮಾ ಕೋರ್ಸ್, ಸರ್ಟಿಫಿಕೇಟ್ ಕೋರ್ಸ್ ಹೀಗೆ 69 ಕ್ಕೂ ಹೆಚ್ಚು ಕೋರ್ಸ್ ಗಳೊಂದಿಗೆ ಪಿ ಹೆಚ್ ಡಿ ಅಧ್ಯಯನಕ್ಕೂ ಕರಾಮುವಿ ತೆರೆದುಕೊಂಡು ಅವಕಾಶ ಕಲ್ಪಿಸಿದೆ.

ಓಡಿಎಲ್ ವ್ಯವಸ್ಥೆಗೆ ಕರಾಮುವಿಯ ಕೊಡುಗೆ ಅಮೂಲ್ಯ. ಇಡೀ ರಾಜ್ಯ ವ್ಯಾಪ್ತಿಯನ್ನು ಹೊಂದಿರುವುದರಿಂದ, ರಾಜ್ಯಾದ್ಯಂತ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಿದೆ, ಜೊತೆಗೆ ರಾಜ್ಯಾದ್ಯಂತ ಉತ್ತಮ ಸಂಖ್ಯೆಯ ಅಂಗಸಂಸ್ಥೆ ಕಾಲೇಜುಗಳನ್ನು ಅಧ್ಯಯನ ಕೇಂದ್ರಗಳಾಗಿ ಗುರುತಿಸಿಕೊಂಡಿದೆ. ರಾಜ್ಯದ ಉನ್ನತ ಶಿಕ್ಷಣ ಹೆಚ್ಚಿಸುವಲ್ಲಿ ಕರಾಮುವಿ ಪಾತ್ರ ಗಮನಾರ್ಹವಾಗಿದೆ. ಗುಣಮಟ್ಟದ ಶಿಕ್ಷಣವನ್ನು ಒದಗಿಸುವಲ್ಲಿ ಪಾತ್ರ ಶ್ಲಾಘನೀಯ. ಕೋರ್ಸ್‌ಗಳು, ಪಠ್ಯಕ್ರಮ, ಅಧ್ಯಯನ ಸಾಮಗ್ರಿಗಳು, ಸಂಪರ್ಕ ತರಗತಿಗಳು, ಪರೀಕ್ಷಾ ವಿಧಾನ, ಪರೀಕ್ಷೆಯಲ್ಲಿ ಪಾರದರ್ಶಕತೆ, ಮೌಲ್ಯಮಾಪನ ಮತ್ತು ಫಲಿತಾಂಶಗಳ ಪ್ರಕಟಣೆ ಎಲ್ಲಾ ಆಯಾಮಗಳಲ್ಲಿಯೂ ಅಭ್ಯುದಯಕ್ಕೆ ಪೂರಕವಾಗಿದೆ.

ಆನ್‌ಲೈನ್ ಪ್ರವೇಶಾತಿ, ಎಲ್ಲಾ ರೀತಿಯ ಶುಲ್ಕ ಪಾವತಿಯು ಡಿಜಿಟಲ್ ಪಾವತಿಗಳು ಕರಾಮುವಿ ಇತ್ತೀಚೆಗೆ ಆರಂಭಿಸಿರುವ ಕೆಲವು ವಿದ್ಯಾರ್ಥಿ ಪರ ಯೋಜನೆಗಳಾಗಿವೆ.

ತರಬೇತಿ ತರಗತಿಗಳು, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಸಂಪರ್ಕ ತರಗತಿಗಳಿಗೆ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ವಸತಿ ಸೌಲಭ್ಯಗಳು ಸ್ವಚ್ಛ-ಹಸಿರು ವಾತಾವರಣದಲ್ಲಿ ಮತ್ತೊಂದು ವಿದ್ಯಾರ್ಥಿ ಬೆಂಬಲ ಸೇವೆಯಾಗಿದೆ. ಶೈಕ್ಷಣಿಕ ಮೂಲಸೌಕರ್ಯ; ಆನ್‌ಲೈನ್ ಮತ್ತು ಆಫ್‌ಲೈನ್ ವಿದ್ಯಾರ್ಥಿ ತರಗತಿಗಳು, ಮುಕ್ತ ವಿವಿಯಲ್ಲಿ ಉನ್ನತ ಶಿಕ್ಷಣ ಮಾಡುವವರಿಗೆ ಕನಸಿನ ಸಂಸ್ಥೆಯಾಗಿದೆ.

ಇದರೊಂದಿಗೆ ವಿಶೇಷವಾಗಿ ಗ್ರಾಮೀಣ ಪ್ರದೇಶದ ಹಾಗೂ ಆಸಕ್ತ ಸ್ಪರ್ಧಾರ್ಥಿಗಳಿಗೆ ಉಪಯುಕ್ತವಾಗಲೆಂದು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ತೆರೆಯಲಾಗಿದೆ ಇದರಿಂದ ಐಎಎಸ್ ,ಕೆಎಎಸ್,ಎಫ್ ಡಿ ಎ, ಎಸ್ ಡಿ ಎ, ಬ್ಯಾಂಕಿಂಗ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಶಿಬಿರಗಳನ್ನು ಆಯೋಜಿಸಿ ಅನೇಕರ
ಯಶಸ್ಸಿನ ಬೆನ್ನೆಲುಬಾಗಿ ಕರಾಮುವಿ ನಿಂತಿದೆ.

ಕರಾಮುವಿಯಲ್ಲಿನ ಸೌಲಭ್ಯಗಳು :
*ಗ್ರಂಥಾಲಯ – ಅಂತರ್ಜಾಲ ವ್ಯವಸ್ಥಿತ ಈ ಗ್ರಂಥಾಲಯ,ಈ ಬುಕ್ಸ್ ಗಳು ಮತ್ತಷ್ಟು ಹೊಸತು ನೀಡಿದೆ.
*ಪ್ರಸಾರಾಂಗ
*ಗಾಂಧಿ ಉದ್ಯಾನವನ
*ಘಟಿಕೋತ್ಸವ ಭವನ (ಮೈಸೂರಿನ ಬೃಹತ್ ಸುಸಜ್ಜಿತ ವೈಭವೋಪೇತ ಸಭಾಂಗಣ-2000ಕ್ಕೂ ಹೆಚ್ಚು ಆಸನಗಳಿವೆ)

*ಅತಿಥಿಗೃಹ
*ಪುರುಷ ಹಾಗೂ ಮಹಿಳೆಯರ ಪ್ರತ್ಯೇಕ ವಿದ್ಯಾರ್ಥಿ ನಿಲಯಗಳು.
*ದೃಶ್ಯ ಹಾಗೂ ಶ್ರವ್ಯ ಸ್ಟುಡಿಯೋಗಳು
*ಬಾನುಲಿ ಕೇಂದ್ರ
*ಬ್ಯಾಂಕು *ಅಂಚೆ ಕಛೇರಿ
*ವ್ಯಾಯಮ ಶಾಲೆ
*ಆರೋಗ್ಯ ಕೇಂದ್ರ
*ಪ್ರಯೋಗಾಲಯ
*ಆವರಣದಲ್ಲಿ ಉಚಿತ ವೈಫೈ ಅಂತರ್ಜಾಲ ಸೌಲಭ್ಯ
*ಕ್ಯಾಂಟೀನ್
*ವಿಶಾಲವಾದ ಕ್ರೀಡಾಂಗಣ
*ಕಾವೇರಿ,ಗಂಗಾ,ನಳ ಸಭಾಂಗಣಗಳು.

*ಮಾನಸ ಕಟ್ಟಡ,ಹಂಸ ಕಟ್ಟಡ, ವಿಜ್ಞಾನ ಭವನಗಳಲ್ಲಿ ಸದಾ ಲಭ್ಯವಿದ್ದು ಉತ್ಕೃಷ್ಟತೆಯ ಅತ್ಯುತ್ಛ ಭೋದನೆ ನೀಡುವ ಪ್ರಾಧ್ಯಾಪಕರುಗಳು.
ಎಲ್ಲಾ ವಿಧವಾದ ಸಹಕಾರ ನೀಡುವ ಬೋಧಕೇತರ ಸಿಬ್ಬಂದಿಗಳು ಹಾಗೂ ಆಯಾ ಜಿಲ್ಲಾವಾರು ಕರಾಮುವಿ ಪ್ರಾದೇಶಿಕ ಕೇಂದ್ರಗಳಲ್ಲಿಯೂ ದಾಖಲಾತಿ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಮತ್ತು ಅಲ್ಲಿನ ಕೇಂದ್ರಗಳಲ್ಲಿಯೇ ಪರೀಕ್ಷೆಗಳನ್ನು ಸಹ ಬರೆಯಬಹುದಾಗಿದೆ.

 

ಅಧ್ಯಯನದ ಅವಕಾಶಗಳು:
ಪದವಿ
ಬಿಎ,ಬಿ ಲಿಬ್, ಬಿಕಾಂ,ಬಿ ಎಸ್ ಸಿ,ಬಿಬಿಎ,ಬಿಸಿಎ, ಬಿ ಎಸ್ ಡಬ್ಲ್ಯು.

ಸ್ನಾತಕೋತ್ತರ ಪದವಿ
ಎಂಎ
ಕನ್ನಡ, ಇಂಗ್ಲಿಷ್,ಹಿಂದಿ, ಸಂಸ್ಕೃತ,ತೆಲುಗು,ಉರ್ದು, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಶಿಕ್ಷಣ,
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ, ಸಾರ್ವಜನಿಕ ಆಡಳಿತ.

ಎಂ ಎಸ್ ಸಿ
ರಸಾಯನಶಾಸ್ತ್ರ
ಜೀವರಸಾಯನಶಾಸ್ತ್ರ
ಜೈವಿಕ ತಂತ್ರಜ್ಞಾನ
ಆಹಾರ ಮತ್ತು ಪೋಷಣೆ
ಸಸ್ಯಶಾಸ್ತ್ರ
ಭೂಗೋಳಶಾಸ್ತ್ರ
ಮಾಹಿತಿ ತಂತ್ರಜ್ಞಾನ
ಗಣಕ ಯಂತ್ರ ವಿಜ್ಞಾನ
ಪರಿಸರ ವಿಜ್ಞಾನ
ವೈದ್ಯಕೀಯ ಪೋಷಣೆ ಮತ್ತು ಆಹಾರ ಪದ್ಧತಿ
ಗಣಿತಶಾಸ್ತ್ರ
ಸೂಕ್ಷ್ಮ ಜೀವವಿಜ್ಞಾನ
ಭೌತಶಾಸ್ತ್ರ
ಮನೋವಿಜ್ಞಾನ
ಪ್ರಾಣಿಶಾಸ್ತ್ರ

ಎಂಎ,ಎಂ ಎಸ್ ಸಿ ,ಎಂಕಾಂ,ಎಂಬಿಎ,ಎಂಸಿಎ,ಎಂಲಿಬ್,ಎಂ ಎಸ್ ಡಬ್ಲ್ಯು ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡಬಹುದಾಗಿದೆ.

ಡಿಪ್ಲೊಮಾ ಕೋರ್ಸ್‌ಗಳು
ಪಿ.ಜಿ ಡಿಪ್ಲೊಮಾ ಕೋರ್ಸ್‌ಗಳು : ಕಮ್ಯೂನಿಕೇಟಿವ್ ಇಂಗ್ಲಿಷ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಇಂಗ್ಲಿಷ್, ಕುವೆಂಪು ಸಾಹಿತ್ಯ, ವ್ಯವಹಾರಿಕ ಕಾನೂನು, ವ್ಯವಹಾರಿಕ ನಿರ್ವಹಣೆ, ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು ನಿರ್ವಹಣೆ, ಅಂಬೇಡ್ಕರ್ ಅಧ್ಯಯನ, ಮಾರುಕಟ್ಟೆ ನಿರ್ವಹಣೆ, ಅಂಬೇಡ್ಕರ್ ಅಧ್ಯಯನ, ಮಾರುಕಟ್ಟೆ ನಿರ್ವಹಣಾಶಾಸ್ತ್ರ, ನ್ಯೂಟ್ರಿಷನ್ ಅಂಡ್ ಡಯಟೆಟಿಕ್ಸ್‌ , ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಶನ್.

ಡಿಪ್ಲೊಮಾ ಕೋರ್ಸ್‌ಗಳು (10+2 ಆಧಾರಿತ) – ಡಿಪ್ಲೊಮಾ -ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ ಅಂಡ್ ಹೆಲ್ತ್ ಎಜುಕೇಷನ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಷನ್. ಅರ್ಲಿ ಚೈಲ್ಡ್‌ಹುಡ್‌ ಕೇರ್ ಅಂಡ್ ಎಜುಕೇಷನ್.

ಯುಜಿ ಸರ್ಟಿಫಿಕೇಟ್ ಕೋರ್ಸ್‌ಗಳು (10+2 ಆಧಾರಿತ)- ಪಂಚಾಯತ್ ರಾಜ್, ಮಾಹಿತಿ ಸಂವಹನ ತಂತ್ರಜ್ಞಾನ, ನ್ಯೂಟ್ರಿಷನ್ ಅಂಡ್ ಫುಡ್, ಇಂಗ್ಲಿಷ್‌, ಎಂಪ್ಲಾಯ್‌ಮೆಂಟ್‌ ಮತ್ತು ಎಮಟರ್‌ಪ್ರೆನ್ಯುರ್‌ಷಿಪ್.

ಡಿಪ್ಲೊಮಾ ಕೋರ್ಸ್ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳನ್ನು ಮಾಡಲು ಸಹ ಅವಕಾಶವಿದೆ.

ಕೆ ಎಸ್ ಒ ಯು ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೆ ದೇಶ ಮತ್ತು ವಿದೇಶಗಳಲ್ಲಿರುವ ವಿದ್ಯಾರ್ಥಿಗಳನ್ನು ತಲುಪುವ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.

ಪ್ರಸ್ತುತ ಕುಲಪತಿಗಳಾದ ಪ್ರೊ ಶರಣಪ್ಪ ವಿ ಹಲಸೆ ಹಾಗೂ ಕುಲಸಚಿವರಾದ ಪ್ರೊ ಕೆ ಬಿ ಪ್ರವೀಣ ಮತ್ತು ಪರಿಕ್ಷಾಂಗ ಕುಲಸಚಿವರಾದ ಡಾ.ವಿಶ್ವನಾಥ್.ಹೆಚ್
ಇವರ ಉತ್ತಮ ಆಡಳಿತದೊಂದಿಗೆ ಮತ್ತಷ್ಟು ಹೊಸತುಗಳೊಂದಿಗೆ ವಿದ್ಯಾರ್ಥಿಗಳ ಕಲಿಕೆಗೆ ವಿವಿ ಮುಂದಾಗಿದೆ

ಜನವರಿ ಆವೃತ್ತಿ ಹಾಗೂ ಜುಲೈ ಆವೃತ್ತಿಯ ವಾರ್ಷಿಕ ಎರಡು ಬಾರಿ ಪ್ರವೇಶಾತಿಯ ಅವಕಾಶವಿದೆ .ಇದೇ ಫೆಬ್ರವರಿಯಿಂದ ಪ್ರವೇಶಾತಿ ಪ್ರಾರಂಭವಾಗಿದ್ದು ಆಸಕ್ತರು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

ಪೂರ್ಣ ಶುಲ್ಕ ವಿನಾಯಿತಿ:
ಕೊರೊನಾದಲ್ಲಿ ಮೃತಪಟ್ಟ ಪೋಷಕರ ಮಕ್ಕಳಿಗೆ ಹಾಗೂ ತೃತೀಯ ಲಿಂಗಿಗಳಿಗೆ ಉಚಿತ ಪ್ರವೇಶಾತಿ ಲಭ್ಯವಿದೆ.

ಬೋಧನಾ ಶುಲ್ಕದಲ್ಲಿ ರಿಯಾಯಿತಿ:
ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಮತ್ತು ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ ಶೇ15% ಶುಲ್ಕ ವಿನಾಯಿತಿ ಇದೆ.

ಆಟೋ ,ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ ಹಾಗೂ
ಕೆಎಸ್ಸಾರ್ಟಿಸಿ, ಬಿಎಂಟಿಸಿ,ಕೆಕೆಆರ್ ಟಿಸಿ ನೌಕರರುಗಳಿಗೆ ಶೇ25% ಶುಲ್ಕ ವಿನಾಯಿತಿ ಇದೆ.

ಹಾಗೆಯೇ ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಪ್ರವೇಶಾತಿಯ ನಂತರದಲ್ಲಿ ಸರ್ಕಾರದಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿಕೊಂಡು ಶುಲ್ಕ ಮರುಭರಿಕೆ ಮಾಡಿಕೊಳ್ಳಬಹುದಾಗಿದೆ.
ಇಷ್ಟೆಲ್ಲಾ ಸದವಕಾಶಗಳೊಂದಿಗೆ ಉನ್ನತ ಶಿಕ್ಷಣವನ್ನು ಎಲ್ಲರಿಗೂ ಎಲ್ಲೆಡೆ ಕರಾಮುವಿ ವಿಸ್ತರಿಸುತ್ತಿದೆ.

ಡಾ.ಬೀರಪ್ಪ ಹೆಚ್
ಸಹಾಯಕ ಪ್ರಾಧ್ಯಾಪಕ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನಾ ವಿಭಾಗ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ

Leave a Reply

Your email address will not be published. Required fields are marked *