ನಂದಿನಿ ಮೈಸೂರು
ಶಿವರಾತ್ರಿ ಹಬ್ಬ ಹಿನ್ನಲೆ ಮೈಸೂರು ಕೊಡಗು ಸಂಸದರಾದ ಯದುವೀರ್ ಒಡೆಯರ್ ರವರು
ಕುಟುಂಬ ಸಮೇತ
ತ್ರಿನೇಶ್ವರ ಸ್ವಾಮಿ ದರ್ಶನ ಪಡೆದರು.
ಅರಮನೆ ಆವರಣದಲ್ಲಿರುವ ಶ್ರೀ ತ್ರಿನೇಶ್ವರಸ್ವಾಮಿ ದೇವಸ್ಥಾನಕ್ಕೆ
ಪತ್ನಿ ತ್ರಿಷಿಕಾ ಕುಮಾರಿ,ಮೊದಲ ಪುತ್ರ ಆದ್ಯವೀರ್, ಎರಡನೇ ಪುತ್ರ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಜೊತೆ ಯದುವೀರ್ ಒಡೆಯರ್ ರವರು
ಪ್ರತಿ ವರ್ಷದಂತೆ ಈ ವರ್ಷ ತ್ರಿನೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.
ದರ್ಶನ ಪಡೆದ ಬಳಿಕ ದೇವಸ್ಥಾನದ ಆವರಣದಲ್ಲಿ ಕುಳಿತು ಪ್ರಸಾದ ಸೇವಿಸಿದರು.ತದನಂತರ
ದೇವಾಲಯದ ಆಡಳಿತ ಮಂಡಳಿ ಪರವಾಗಿ ಯದುವೀರ್ ಕುಟುಂಬಕ್ಕೆ ಶಾಲೂ ಹಾಕಿ ಗೌರವ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಯದುವೀರ್ ರವರು
ಸಮಸ್ತ ನಾಡಿನ ಜನತೆಗೆ ಶಿವರಾತ್ರಿ ಹಬ್ಬದ ಶುಭಾಶಯಗಳನ್ನ ತಿಳಿಸಿದರು.
ತ್ರಿನೇಶ್ವರಸ್ವಾಮಿಯ ದರ್ಶನ ಪಡೆದಿದ್ದೇನೆ.ಅರಮನೆಯಲ್ಲೂ ಶಿವನ ಪೂಜೆ ನಡುತ್ತದೆ.
ಎಲ್ಲರಿಗೂ ಒಳ್ಳೆದಾಗಲಿ ಎಂದು ಶುಭ ಕೋರಿದರು.
ತಾಯಿ ಚಾಮುಂಡೇಶ್ವರಿ ಆಶೀರ್ವಾದ
ಜನರ ಪ್ರೀತಿ ಎರಡನೇ ಮಗುವಿಗೆ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಿದ್ದೇವೆ.
ನಿಮ್ಮೆಲ್ಲರ ಪ್ರೀತಿ ಹಾರೈಕೆ ಇರಲಿ ಎಂದರು.