ನಂದಿನಿ ಮೈಸೂರು
ಅರ್ಕಧಾಮದಲ್ಲಿ ಅರ್ಕ ದಾಸೋಹ ಭವನದ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಮೈಸೂರಿನ ಬೋಗಾದಿ ಗದ್ದಿಗೆ ರಸ್ತೆ ಕನಿಯನಹುಂಡಿ ಅರ್ಕಧಾಮ ದಲ್ಲಿ ಅರ್ಕಧಾಮದ ಶ್ರೀ ನಿವಾಸ್ ಗುರೂಜೀ ಶಾಲಾ ಮಕ್ಕಳ ಹಾಗೂ ಶಿಕ್ಷಕರು,ಸಿಬ್ಬಂದಿಗಳ ಜೊತೆಗೆ ಶುಭ ಘಳಿಗೆಯಲ್ಲಿ ದೇವರಿಗೆ ಪ್ರಾರ್ಥಿಸಿ ಭೂಮಿ ಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ್ ಗುರೂಜಿ
ಅರ್ಕ ಮಹಾ ವಿದ್ಯಾಲಯ,ಆಯುರ್ವೆಂದ ಕೇಂದ್ರ,ಅರ್ಕಧಾಮ ವೇದ ಗುರುಕುಲಮ್,
ಯೋಗ ಶಾಲೆ,ಧ್ಯಾನ ಕೇಂದ್ರ,ಸಂಸ್ಕೃತ ಪಾಠ ಶಾಲೆ,ಅರ್ಕ ಗೋ ಶಾಲೆ
ವಸತಿ ವ್ಯವಸ್ಥೆ ಇದ್ದು,ಹಲವು ರೀತಿ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತದೆ.ಈ
ಅರ್ಕಧಾಮ
ಮೈಸೂರಿನ ಬೋಗಾದಿ ಗದ್ದಿಗೆ ರಸ್ತೆ ಕನಿಯನಹುಂಡಿಯಲ್ಲಿ ಇದೆ. ಈ ಅರ್ಕಧಾಮದಲ್ಲಿ ಭಾರತ ದೇಶದ ಸಂಸ್ಕೃತಿಯನ್ನು ಹೊರದೇಶಗಳಿಗೆ ಪಸರಿಸುತ್ತಿದೆ,ಆಚಾರ ವಿಚಾರಗಳನ್ನ ಹೇಳಿಕೊಡಲಾಗುತ್ತದೆ. ಹಾಗೂ ಯೋಗ ಧ್ಯಾನಗಳಾದಂತ ಇತ್ಯಾದಿ ಸೇವಾ ಕಾರ್ಯಗಳು ಇಲ್ಲಿ ನಡೆಯುತ್ತಾ ಬಂದಿದೆ.ಕರ್ನಾಟಕ ರಾಜ್ಯ ಅಲ್ಲದೇ ದೇಶ ವಿದೇಶದಿಂದಲೂ ಸಾವಿರಾರು ಜನರು ಈ ಅರ್ಕ ಧಾಮಕ್ಕೆ ಭೇಟಿ ನೀಡಿದ್ದಾರೆ.ಇಲ್ಲಿಗೆ ಬಂದಂತಹ ಭಕ್ತರಿಗೆ ಪ್ರಸಾದ ನೀಡುವ ಉದ್ದೇಶವನ್ನ ಇದೀಗ ಕೈಗೆತ್ತಿಕೊಂಡಿದ್ದು ಇಂದು ಅರ್ಕ ದಾಸೋಹ ಭವನ ನಿಮಾರ್ಣಕ್ಕೆ ಭೂಮಿ ಪೂಜೆ ಮಾಡಿದ್ದೇವೆ.ಆದಷ್ಟು ಬೇಗ ಭಕ್ತರಿಗೆ ದಾಸೋಹ ವ್ಯವಸ್ಥೆ ಕಲ್ಲಿಸಲಾಗುವುದು.ಬೆಳಗ್ಗೆ 10 ರಿಂದ ಸಂಜೆ 4:30 ವರಗೆ ಭಕ್ತರು ಅರ್ಕ ಧಾಮಕ್ಕೆ ಆಗಮಿಸಿ ನಮ್ಮ ಧಾಮದ ವಿಶೇಷತೆಗಳನ್ನು ತಿಳಿದುಕೊಳ್ಳಬಹುದಾಗಿದೆ ಎಂದರು.