ನಂದಿನಿ ಮೈಸೂರು
ಸಮಾಜಕ್ಕೆ ಬೇಕಾದ ಪ್ರಬಲವಾದ ಸಂದೇಶಗಳನ್ನು ಹೊಂದಿರುವ ಕನ್ನಡ ಭಗೀರಥ ಚಲನಚಿತ್ರವನ್ನು, ಸಿನಿಮಾ ಮಂದಿರಗಳಲ್ಲಿ ಎಲ್ಲರೂ ನೋಡುವುದರ ಮೂಲಕ ಈ ಚಿತ್ರವನ್ನು ಜನರು ಗೆಲ್ಲಿಸಬೇಕೆಂದು ಮೈಸೂರಿನ ವಕೀಲರ ಸಂಘದ ಕಾರ್ಯದರ್ಶಿ ಚರಣ್ ರಾಜ್ ಕರೆ ನೀಡಿದರು.
ಮೈಸೂರಿನ ಹುಟ್ಟು ಹೋರಾಟಗಾರರು, ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಡೇರಿಂಗ್ ಸ್ಟಾರ್ ಎಸ್ ಜೈಪ್ರಕಾಶ್ ರವರು ನಾಯಕ ನಟರಾಗಿ ನಟಿಸಿರುವ ಭಗೀರಥ ಚಲನಚಿತ್ರ ತಂಡವು ಮೈಸೂರಿನ ವಕೀಲರ ಸಂಘಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೈಸೂರು ವಕೀಲರ ಸಂಘದ ಉಪಾಧ್ಯಕ್ಷ, ಮಾಜಿ ಅಧ್ಯಕ್ಷರಾದ ಮಹದೇವ ಸ್ವಾಮಿ, ಮಾಜಿ ಕಾರ್ಯದರ್ಶಿ ಉಮೇಶ್ ಶೋಭಾ ಸುನೀತ ಸೇರಿದಂತೆ ಹಲವಾರು ವಕೀಲರ ಪದಾಧಿಕಾರಿಗಳು ಜೆಪಿರವರಿಗೆ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ನಾಗರಾಜು, ನೇಹಾ, ಪ್ರೀತಿ ಸಿಂಗ್ ಉಪಸ್ಥಿತರಿದ್ದರು.