ಪಾರ್ಕ್ ನ‌ ಅಭಿವೃದ್ಧಿ ಪಡಿಸಿ ಇಲ್ಲಿಗೆ ಬರುವ ಪುಂಡರ ಹಾವಳಿ ತಪ್ಪಿಸಿ… ಅಧಿಕಾರಿಗಳಿಗೆ ಸೂಚನೆ ಶಾಸಕ ಟಿ.ಎಸ್.ಶ್ರೀ ವತ್ಸ

ನಂದಿನಿ ಮೈಸೂರು

ಪಾರ್ಕ್ ನ‌ ಅಭಿವೃದ್ಧಿ ಪಡಿಸಿ ಇಲ್ಲಿಗೆ ಬರುವ ಪುಂಡರ ಹಾವಳಿ ತಪ್ಪಿಸಿ…
ಅಧಿಕಾರಿಗಳಿಗೆ ಸೂಚನೆ ಶಾಸಕ ಟಿ.ಎಸ್.ಶ್ರೀ ವತ್ಸ

ವಾರ್ಡ್ ನಂಬರ್ 61ರ ಸುತ್ತಮುತ್ತ ವಿದ್ಯಾರಣ್ಯಪುರಂನ ಭಾಗಗಳಲ್ಲಿ ಇಂದು ಬೆಳ್ಳಗೆ ಯಿಂದ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ. ಎಸ್. ಶ್ರೀವತ್ಸ ರವರು ಅಧಿಕಾರಿಗಳೊಂದಿಗೆ ಪಾದಯಾತ್ರೆಯನ್ನು ಮಾಡಿ ಸ್ಥಳೀಯ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಕೆಲಸ ಮಾಡಲಾಯಿತು.

ಸ್ಥಳೀಯ ಸಮಸ್ಯೆಗಳಾದ ಪಾರ್ಕಿನ ಸುತ್ತ ಗಿಡಗಳನ್ನು ಹಾಕಿಸಿಕೊಡುವುದು ಮತ್ತು ಬೆಳಗಿನ ಸಮಯದಲ್ಲಿ ಮಕ್ಕಳು ಕ್ರಿಕೆಟ್ ಆಡುವುದರ ಮೂಲಕ ಅಕ್ಕಪಕ್ಕದ ಮನೆಗಳಿಗೆ ತೊಂದರೆಯಾಗುತ್ತಿದೆ ಹಾಗೂ ರಾತ್ರಿಯ ಸಮಯದಲ್ಲಿ ಪುಂಡ ಹುಡುಗರುಗಳು ಮಧ್ಯಪಾನ ಮಾಡುತ್ತಿದ್ದಾರೆ ಎಂದು ಶಾಸಕರಿಗೆ ಸ್ಥಳೀಯ ನಿವಾಸಿಯಾದ ರಂಗರಾಜುರವರು ತಿಳಿಸಿದರು.

ಸ್ಥಳೀಯ ನಿವಾಸಿಯಾದ ಪದ್ಮಮ್ಮನವರು ನಗರಪಾಲಿಕೆಯ ವತಿಯಿಂದ ಇರತಕ್ಕಂತಹ ಮಳಿಗೆಗಳು ಶಿಥಿಲವಾಗಿದ್ದು ಹಾಗೂ ಆ ಮಳಿಗೆಗಳು ಯಾವುದೇ ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿರುವುದು ಈ ಜಾಗಗಳಲ್ಲಿ ಪುಂಡ ಯುವಕರಗಳು ಅಸಭ್ಯ ವರ್ತನೆಯನ್ನು ಮಾಡುವುದು ಈ ಕೂಡಲೇ ಇದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಕಾರ್ಯರೂಪಕ್ಕೆ ತರಬೇಕೆಂದು ಮನವಿ ಮಾಡಿದರು..

ಪಾದಯಾತ್ರೆ ಸಂಧರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ರೆಡ್ಡಿ,ಇಂಜಿನಿಯರ್ ಚೇತನ್,ಅರೋಗ್ಯಾಧಿಕಾರಿ ಶಿವಪ್ರಸಾದ್,ಶಾಸಕರ ಅಪ್ತ ಸಹಾಯಕ ಆದಿತ್ಯ, ವಾರ್ಡ ಉಸ್ತುವಾರಿ ಜೋಗಿಮಂಜು, ಮಾಜಿ ನಗರಪಾಲಿಕೆ ಸದಸ್ಯ ಜಗದೀಶ್, ವಾರ್ಡ್ ಅಧ್ಯಕ್ಷ ಶಿವಪ್ರಸಾದ್,ಶಿವಲಿಂಗ ಸ್ವಾಮಿ,ಕಿಶೋರ್ ,ವಾಸು,ಶ್ರೀಧರ್ ಭಟ್,ಮಹದೇವ್,ಮಂಗಳ,ಮಹದೇವಣ್ಣ,ಕಿಶೋರ್, ಪ್ರದೀಪ್,ಮುಂತಾದವರು ಇದ್ದರು…

Leave a Reply

Your email address will not be published. Required fields are marked *