ನಂದಿನಿ ಮೈಸೂರು
ಹಕ್ಕ ಬುಕ್ಕರು ಸ್ಥಾಪನೆ ಮಾಡಿರುವ ವಿಜಯನಗರ ಸಾಮ್ರಾಜ್ಯವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಶ್ರೀ ಕೃಷ್ಣದೇವರಾಯರಿಗೆ ಸಲ್ಲುತದೆ.ಕೃಷ್ಣದೇವರಾಯರು ಸಮಾಜ ಸುಧಾರಣೆಗೆ ನೀಡಿದ ಸಂದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಶ್ರೀ ಕೈವಾರ ತಾತಯ್ಯ ಬಲಿಜ ನಾಯ್ಡು ಒಕ್ಕೂಟದ ಪಧ್ರಾನ ಕಾರ್ಯದರ್ಶಿ ರಾಕೇಶ್ ನಾಯ್ಡು ಕರೆ ನೀಡಿದರು.
ನಗರದ ವಿಜಯನಗರದ 2ನೇ ಹಂತದಲ್ಲಿರುವ ಶ್ರೀ .ಕೃಷ್ಣದೇವರಾಯರ ವೃತ್ತದಲ್ಲಿ ಶ್ರೀ ಕೈವಾರ ತಾತಯ್ಯ ಬಲಿಜ ನಾಯ್ಡು ಒಕ್ಕೂಟದಿಂದ ಹಮ್ಮಿಕೊಂಡಿದ್ದ ಶ್ರೀ ಕೃಷ್ಣದೇವರಾಯರ 554ನೇ ಜಯಂತಿ ಆಚರಣೆಯಲ್ಲಿ ಸದಸ್ಯರೊಟ್ಟಿಗೆ ಶ್ರೀ ಕೃಷ್ಣದೇವರಾಯರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಮತ್ತು 100ಜನ ಸದಸ್ಯರಿಗೆ ಉಪಹಾರ ಮತ್ತು ಸಿಹಿ ವಿತರಣೆಮಾಡಿದರು ಅವರು ಮಾತನಾಡಿದರು.
ವಿಜಯನಗರ ಸಾಮ್ರಾಜ್ಯ ಕಾಲದ ಹಂಪಿ ವಿಶ್ವಮಟಕ್ಕೆ ಬೆಳೆಯಲು ಹಲವು ರಾಜರು ಶ್ರಮಿಸಿದ್ದು, ಅವರಲ್ಲಿ ಕೃಷ್ಣದೇವರಾಯರ ಸಾಧನೆ ಆಪಾರ. ಹಂಪಿಯಲ್ಲಿ ಬಂಗಾರ, ಮುತ್ತು, ರತ್ನ, ವಜ್ರಗಳ ಮಾರಾಟದ ಮಾರುಕಟ್ಟೆ ನೆಡೆಸಿ ವಿಜಯನಗರವನ್ನು ಶ್ರೀಮಂತ ಸಾಮ್ರಾಜ್ಯವಾಗಿ ಮಾಡಿದ್ದ ಕೀರ್ತಿ ಶ್ರೀ ಕೃಷ್ಣದೇವರಾರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಶ್ರೀ ಕೃಷ್ಣದೇವರಾಯರು ದೇವಾಲಯ ಮಂಟಪಗಳು ನಿರ್ಮಾಣ ಮಾಡುವ ಮೂಲಕ ವಾಸ್ತುಶಿಲ್ಪಕ್ಕೆ ಪ್ರಮುಖ ಆದ್ಯತೆ ನೀಡಿದ್ದರು. ಜೊತೆಗೆ ಕೃಷಿಗೆ ಕೆರೆ, ಕಾಲುವೆಗಳನ್ನು ನಿರ್ಮಿಸಿ ಜನರ ಬದುಕಿಗೆ ಕಾರಣಿಕರ್ತ ರಾಗಿದ್ದರು ಎಂದರು.
ವಿಜಯನಗರ ಸಾಮ್ರಾಜ್ಯದ ಶ್ರೀಮಂತ ದೊರೆ ಹಾಗು ಚಕ್ರವರ್ತಿ ಸಾಮ್ರಾಟರು ಆಗಿದ್ದ. ಶ್ರೀ ಕೃಷ್ಣದೇವರಾಯರು ಬಲಿಜ ಕುಲತಿಲಕ ಎಂದರಲ್ಲದೆ ಸರಕಾರದಿಂದ ಶ್ರೀ ಕೃಷ್ಣದೇವರಾಯರ ಜಯಂತಿ ಯನ್ನು ಆಚರಣೆ ಮಾಡಬೇಕು. ರಾಜ್ಯದ ಎಲ್ಲಾ ಸರಕಾರಿ ಕಚೇರಿ, ತಾಲ್ಲೂಕು ಆಡಳಿತದಿಂದ ಜಯಂತಿಯನ್ನು ಆಚರಣೆ ಮಾಡುವ ಕುರಿತು ಸರ್ಕಾರ ಘೋಷಣೆ ಮಾಡಬೇಕೆಂದು ಮನವಿ ಮಾಡಿದರು.
ಒಕ್ಕೂಟದ ಸದಸ್ಯರಾದ ಹರೀಶ್, ಮಂಜುನಾಥ್, ರಾಘವೇಂದ್ರ, ಬಾನುಪ್ರಕಶ್, ಕಾಮರಜ್, ಪ್ರಕಾಶ್, ಗಜೇಂದ್ರ ನಾಯ್ಡು, ದೇವೆಂದ್ರ ನಾಯ್ಡು, ಚಿನ್ನಸ್ವಾಮಿ, ವಿಜಯಕುಮಾರ, ಯೋಗೀಶ್ ಭರತ್ ಕುಮಾರ್, ಸಂತೋಷ ರವಿಕುಮಾರ್, ರೋಹಿತ್ ನಾಯ್ಡು, ಹರ್ಷ ಮತ್ತು ಸಂಘದ ಸದಸ್ಯರು ಮತ್ತು ಬಲಿಜ ನಾಯ್ಡು ಜನಾಂಗದ ಸದಸ್ಯರುಗಳು ಹಾಜರ್ ಇದ್ದರು.