ಕುವೆಂಪು ನಗರ ಬಡಾವಣೆಯ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಗುರುಭವನದ ಅಭಿವೃದ್ಧಿಯ ವಿಚಾರವಾಗಿ ಚರ್ಚಿಸಿದ MLC ಕೆ.ವಿವೇಕಾನಂದ

ನಂದಿನಿ ಮೈಸೂರು

ಇತ್ತೀಚೆಗೆ ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ,ಪದಾಧಿಕಾರಿಗಳೊಂದಿಗೆ ಮೈಸೂರಿನ ಕುವೆಂಪು ನಗರ ಬಡಾವಣೆಯ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಗುರುಭವನದ ಅಭಿವೃದ್ಧಿಯ ವಿಚಾರವಾಗಿ ಚರ್ಚಿಸಿದ್ದರು . 

ಇಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಕೆ ವಿವೇಕಾನಂದರವರು ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ (ಅಭಿವೃದ್ಧಿ ) ಸಿಂಧು ರವರೊಂದಿಗೆ ಭೇಟಿ ಮಾಡಿ ಗುರುಭವನದ ಅಭಿವೃದ್ಧಿ ವಿಚಾರವಾಗಿ ಹಾಜರಿದ್ದ ನಗರಪಾಲಿಕೆಯ ಅಭಿಯಂತರದೊಂದಿಗೆ ಚರ್ಚಿಸಿ ಸದರಿ ಗುರುಭವನದ ನವೀಕರಣಕ್ಕೆ ಸಂಬಂಧಿಸಿದಂತೆ ಅಂದಾಜು ಪಟ್ಟಿ ತಯಾರು ಮಾಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ವಲಯ ಆಯುಕ್ತರು ಹಾಗೂ ಅಭಿವೃದ್ಧಿ ಅಧಿಕಾರಿಗಳಾದ ಸತ್ಯಮೂರ್ತಿ, ಸಹಾಯಕ ಅಭಿಯಂತರಾದ ಮಣಿ ಹಾಗೂ ಇತರ ಅಭಿಯಂತರರು ಹಾಜರಿದ್ದರು.

Leave a Reply

Your email address will not be published. Required fields are marked *