ಸಾವಿತ್ರಿ ಬಾಪುಲೆ ಜಯಂತಿ ಆಚರಣೆ,2025ನೇ ಸಾಲಿನ ಸಾವಿತ್ರಿ ಬಾಪುಲೆ ಸಂಘದ ಕ್ಯಾಲೆಂಡರ್ ಬಿಡುಗಡೆ

ನಂದಿನಿ ಮೈಸೂರು

ಸಾವಿತ್ರಿ ಬಾಪುಲೆ ಜಯಂತಿ ಆಚರಣೆ. 2020 25ನೇ ಸಾಲಿನ ಸಾವಿತ್ರಿ ಬಾಪುಲೆ ಸಂಘದ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.

ಸಂಘವನ್ನು ಕುರಿತು ಮೈಸೂರು ಗ್ರಾಮಾಂತರ ವಲಯ ಶೈಕ್ಷಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಪ್ರಕಾಶ್ ರವರು ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ತಂದು ಕೊಡುವುದರ ಜೊತೆಗೆ ಶಿಕ್ಷಕಿಯರ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಬೇಡಿಕೆಗಳನ್ನು ಈಡೇರಿಸಲು ಹೋರಾಟಕ್ಕಾಗಿ ರಾಜ್ಯದಲ್ಲಿ ಸಾವಿತ್ರಿ ಬಾಪುಲೆ ಸಂಘ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು. ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಪುಲೆ ಜಯಂತಿ , ಆಚರಣೆಯನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು ಮೈಸೂರು ತಾಲೂಕಿನ ಸಾವಿತ್ರಿಬಾಯಿ ಪುಲೆ ತಾಲೂಕು ಘಟಕದ ಕಾರ್ಯಕ್ರಮವು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಡಿ ಚೌಕ ನಂಜುಮಳಿಗೆ ಇಲ್ಲಿರುವ ಹೊಸ ಕಟ್ಟಡದಲ್ಲಿ ಸಾವಿತ್ರಿಬಾಪುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ ನವದೆಹಲಿ. ಕರ್ನಾಟಕ ಸಾವಿತ್ರಿ ಬಾಪುಲೆ ಶಿಕ್ಷಕಿಯರ ರಾಜ್ಯ ಘಟಕ ಧಾರವಾಡ ಹಾಗೂ ಜಿಲ್ಲಾ ಘಟಕ ಮೈಸೂರು , ತಾಲೂಕು ಘಟಕ ಮೈಸೂರು ಇಲ್ಲಿ ಗುರುವಾರ 23 ಒಂದು .2025 ರಂದು ಆಯೋಜಿಸಿದ್ದ ತಾಲೂಕು ಮಟ್ಟದ ಸಾವಿತ್ರಿ ಬಾಪುಲೆ ಜಯಂತಿ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು ಈ ಕಾರ್ಯಕ್ರಮಕ್ಕೆ ಮೈಸೂರು ಗ್ರಾಮಾಂತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಕಾಶ್ ಸರ್ ಮೈಸೂರು ಉತ್ತರ ವಲಯದ ಶ್ರೀ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ರೇವಣ್ಣ ಸರ್ ರವರು ಹಾಗೂ ಮೈಸೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜ್ಯ ಸರ್ ರವರು ಹಾಜರಾಗಿದ್ದರು . ರಾಜ್ಯೋತ್ಸವ ಅವರು ಮಾತನಾಡಿ ಮಹಿಳೆಯರಿಗಾಗಿ ಪ್ರಥಮವಾಗಿ ಶಾಲೆಗಳು ಅಬಲಾಶ್ರಮ ಸ್ಥಾಪನೆ ಮಾಡಿದ ಕೀರ್ತಿ ಸಾವಿತ್ರಿ ಬಾಪುಲೆ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ನಂತರ ರೇವಣ್ಣ ಸರ್ ಮಾತನಾಡಿ ಬಡ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಿ ಬದುಕು ಸಾರ್ಥಕ ಗೊಳಿಸಿದ್ದು ಮಾತೆ ಸಾವಿತ್ರಿ ಬಾಪುಲೆ ಎಂಬುದನ್ನು ತಿಳಿಸಿದರು ಶ್ರೀಮತಿ ಸಂಕಲ್ಪ ರಾಜ್ ರವರು ಸಾವಿತ್ರಿ ಬಾಪುಲೆ ಅವರ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಹೇಳಿದರು ಶ್ರೀಮತಿ ಪುಷ್ಪಲತಾ ಅವರು ಸಾವಿತ್ರಿ ಬಾಪುಲೆ ಬಗ್ಗೆ ತಾವೇ ರಚಿಸಿದ ಲಾವಣಿಯನ್ನು ರಾಗವಾಗಿ ಹಾಡಿದರು ಶ್ರೀಮತಿ ಇಂದಿರಾ ರವರು ಪುಲೆಯವರ ಬಗ್ಗೆ ತಾವೇ ರಚಿಸಿದ ಕವನವನ್ನು ವಾಚಿಸಿದರು.
ತಾಲೂಕು ಘಟಕ ಮೈಸೂರು ಇವರು ಸಾವಿತ್ರಿ ಬಾಪುಲೆ ಸಂಘದಿಂದ 14 ಜನ ಸಾಧಕರಿಗೆ ಅಕ್ಷರದವ್ವ ಸಾವಿತ್ರಿ ಬಾಪುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು ಶ್ರೀಮತಿ ಮಮತಾ ಎಸ್ ಎಸ್ ದಡದಕಲ್ಲಳ್ಳಿ ಶಾಲೆ. ಮಹಾಲಕ್ಷ್ಮಿ ಪಿ ಕಡಕೋಳ ತೆರೆಸ ಆರ್ ಬೆಲ ವತ್ತ. ಸುಮಾ ಟಿ ಇ ಬಿ ಐ ಈ ಆರ್ ಟಿ ಬಿ ಆರ್ ಸಿ ಕೇಂದ್ರ ಮೈಸೂರು ಜ್ಯೋತಿ ಎಚ್ ಕೆ ಕಾಳಸಿದ್ದನಹುಂಡಿ ಸರಳಾದೇವಿ ದೊಡ್ಡಹುಂಡಿ ತಸ್ಲೀಮಾ ಫಿರ್ದೋಸ್ ಸಿಂಧುವಳ್ಳಿ ಆಶಾ ಪಿ ಜಿ ಲಲಿತಾದ್ರಿಪುರ ಪದ್ಮಿನಿ ಪ್ರಸಾದ್ ಭಕ್ತರಹಳ್ಳಿ ಸರ್ವ ಮಂಗಳ ಪಿ ಉತ್ತನಹಳ್ಳಿ ಪೂವಮ್ಮ ಎಂ ಕೆ ದೇವಯ್ಯನಹುಂಡಿ ಈ ಎಲ್ಲಾ ಶಿಕ್ಷಕಿಯರಿಗೂ ಅಕ್ಷರದ ಪ್ರಶಸ್ತಿಯನ್ನು ನೀಡಲಾಯಿತು ಶ್ರೀಮತಿ ಅನುಕಲ ರವರು ಹಾಗೂ ಶ್ರೀಮತಿ ಅನುಸೂಯರವರು ಕಾರ್ಯಕ್ರಮವನ್ನು ನಿರೂಪಿಸಿದರು ತಾಲೂಕು ಸಂಘದ ಅಧ್ಯಕ್ಷರಾದ ಶ್ರೀಮತಿ ಲಲಿತಾ ಮೇಡಂ ರವರು ಎಲ್ಲರಿಗೂ ಸ್ವಾಗತಿಸಿದರು ಶ್ರೀಮತಿ ರತ್ನಮ್ಮ ಎಸ್ ಜೆ ರವರು ಕಾರ್ಯಕ್ರಮದ ವಂದನಾರ್ಪಣೆಯನ್ನು ಮಾಡಿದರು ಹಾಗೂ ತಾಲೂಕು ಇತರೆ ಸಂಘಗಳ ಎಲ್ಲಾ ಅಧ್ಯಕ್ಷರುಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.. ಈ ಕಾರ್ಯಕ್ರಮವು ಅಂದುಕೊಂಡಂತೆ ಯಶಸ್ವಿಯಾಗಿ ನಡೆಯಿತು.

Leave a Reply

Your email address will not be published. Required fields are marked *