ನಂದಿನಿ ಮೈಸೂರು
ಮೈಸೂರು : ಬಡವರ ಬಂಧು ಅಭಿಮಾನಿಗಳ ಸಂಘದ ವತಿಯಿಂದ 76ನೇ ಗಣರಾಜ್ಯೋತ್ಸವದ ಪ್ರಯುಕ್ತ ಶಾಸಕರಾದ ಹರೀಶ್ ಗೌಡರವರ ಕಚೇರಿಯಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಂಘದಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಎಂ ಕುಸುಮ ರವರಿಗೆ ಹರೀಶ್ ಗೌಡರ ಧರ್ಮಪತ್ನಿ ಗೌರಿ ಹರೀಶ್ ಗೌಡರ ಅವರಿಂದ ಸನ್ಮಾನಿಸಲಾಯಿತು.
ಹಲವು ವೃದ್ಧರಿಗೆ ವೃದ್ಧಾಪ್ಯ ವೇತನದ ಆದೇಶದ ಪ್ರತಿ, ಮತ್ತು ವಿಧವಾ ವೇತನದ ಮಂಜೂರಾತಿ ಆದೇಶದ ಪ್ರತಿಯನ್ನು ನೀಡಿ ಹೆಣ್ಣುಮಕ್ಕಳು ಎಲ್ಲಾ ರಂಗದಲ್ಲಿಯೂ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಹೆಣ್ಣು ಮಕ್ಕಳು ಯಾವುದಾದರೊಂದು ಕ್ಷೇತ್ರದಲ್ಲಿ ಮುಂದೆ ಬರಲು ಆಸಕ್ತಿ ತೋರಬೇಕು ಇದಕ್ಕೆ ನಮ್ಮ ಸಹಾಯ ಎಂದಿಗೂ ಅವರಿಗೆ ಸಿಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಡವರ ಬಂಧು ಅಧ್ಯಕ್ಷರಾದ ಪಡುವಾರಳ್ಳಿ ಪಾಪಣ್ಣ, ಸುಣ್ಣದಕೇರಿ ರಮೇಶ್, ಕೃಷ್ಣ, ಕೇಶವ್, ಪ್ರದೀಪ್,ದೇವೇಗೌಡ, ಗುರುಸ್ವಾಮಿ, ಮಹದೇವ್, ರಾಜು, ಉಪಸ್ಥಿತರಿದ್ದರು.