ದಸರಾ ಗೊಂಬೆಗಳನ್ನು ಮನೆಗಳಲ್ಲಿ ಕೂರಿಸುವುದು ಇತಿಹಾಸವನ್ನು ಪ್ರತಿಬಿಂಬಿಸುತ್ತದೆ: ಸುಮಾಕೃಷ್ಣ

ನಂದಿನಿ ಮೈಸೂರು

ಮೈಸೂರಿನಲ್ಲಿ ದಸರಾ ಗೊಂಬೆಗಳನ್ನು ಮನೆ ಮನೆಗಳಲ್ಲಿ ಕೂರಿಸುವುದು ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ಎಂದು ಸುಮಾಕೃಷ್ಣರವರು ತಿಳಿಸಿದರು.

ಮೈಸೂರಿನ ಕುವೆಂಪುನಗರ ಪಂಚ ಮಂತ್ರ ರಸ್ತೆಯಲ್ಲಿರುವ
ರಂಗ ಸನ್ಸ್ ಅವರ ಸುಮಾ ಕೃಷ್ಣ ಅವರ ಮನೆಯಲ್ಲಿ 37ನೇ ವರ್ಷದ ಇತಿಹಾಸ ಪ್ರಸಿದ್ಧ ಗೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.


ಗೊಂಬೆಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ
ಕಲಾವಿದರದ ಸುಮಾ ಕೃಷ್ಣ ಅವರು ನವರಾತ್ರಿ ಹಬ್ಬದ ಪ್ರಮುಖ ಆಕರ್ಷಣೆ ದಸರಾ
ದಕ್ಷಿಣ ಭಾರತದಲ್ಲಿ ಕರ್ನಾಟಕ ಆಂಧ್ರ ಪ್ರದೇಶ ತೆಲಂಗಾಣ ತಮಿಳುನಾಡುಗಳಲ್ಲಿ ಜನಪ್ರಿಯವಾಗಿದೆ.
ಕರ್ನಾಟಕದಲ್ಲಿ ಇದನ್ನು ಗೊಂಬೆ ಹಬ್ಬ ಎಂದು ಕರೆಯುತ್ತಾರೆ.


ಪ್ರತಿ ಮನೆಯಲ್ಲಿ ವಿವಿಧ ಗೊಂಬೆಗಳನ್ನು ಕೂರಿಸಿ ಮಹಿಳೆಯರು ಆರತಿ ಬೆಳಗುತ್ತಾರೆ.
ಈ ಬೊಂಬೆಗಳು ಮನೆಗೂ ಮನಸ್ಸಿಗೂ ಮುದ ನೀಡುವುದಲ್ಲದೆ
ದಸರಾ ಹಬ್ಬದ ಸಂಭ್ರಮ ತಮ್ಮ ಮಹತ್ವವನ್ನು ನೀಡುತ್ತದೆ.
ಪ್ರಸ್ತುತ ಸಂದರ್ಭದಲ್ಲಿ ಮೊಬೈಲ್ ಟಿವಿ ಇಂಟರ್ನೆಟ್ ಹಾವಳಿಯಿಂದ ಇಂತಹ ಅಭೂತಪೂರ್ವ ಇತಿಹಾಸ ವೈಭವವನ್ನು ಮರೆತಿರುವುದು ಬೇಸರದ ಸಂಗತಿ ಎಂದರಲ್ಲದೆ
ಮನೆಯಲ್ಲಿ ಹಿರಿಯರು ಮಕ್ಕಳಿಗೆ ಮೊಮ್ಮಕ್ಕಳಿಗೆ ಇದರ ಬಗ್ಗೆ ಆಸಕ್ತಿ ಮೂಡಿಸುವಂತೆ ಗೊಂಬೆಗಳ ಮಹತ್ವವನ್ನು ಪರಿಚಯಿಸಬೇಕಿದೆ ಎಂದರು.


ಮೈಸೂರಿನಲ್ಲಿ ಆಡಳಿತ ನಡೆಸಿದ ಮಹಾರಾಜರು ತಮ್ಮ ಆರಾಧನೆಯಲ್ಲಿ ಗೊಂಬೆಗೂ ಒಂದು ಮಹತ್ವದ ಸ್ಥಾನವನ್ನು ನೀಡಿರುವುದನ್ನು ಮರೆಯಬಾರದು ಎಂದರು
ಆಚರಿಸಿಕೊಂಡು ಬರುತ್ತಿದ್ದೇವೆ
ಇದು ನಮಗೆ ಸಂತೋಷ ತಂದಿದೆ.
ಇಲ್ಲಿಯ ಗೊಂಬೆಗಳ ಪ್ರದರ್ಶನದಲ್ಲಿ ರಾಜರು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಭಾಗವಹಿಸುವ ವಿವಿಧ ಕಲಾತಂಡಗಳೊಂದಿಗೆ ಭಾಗವಹಿಸಿ ಕೊನೆಗೆ ಬನ್ನಿಮಂಟಪದಲ್ಲಿ ಸಮಾಪ್ತಿಯಾಗುವುದನ್ನು ಗೊಂಬೆಗಳ ಮೂಲಕ ಪರಿಚಯಿಸುತ್ತಿರುವುದು ನನಗೆ ಸಂತಸ ತಂದಿದೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ರಂಗಸನ್ಸ್ ನ ಕೃಷ್ಣ ರವರು ಅವರ ಮಕ್ಕಳದ ಅಭಿಷೇಕ್ ಪ್ರಜ್ಞ. ಹರಿ ಮತ್ತು ಮಹಿಳಾ ಇನ್ನರ್ ವೀಲ್ ಕ್ಲಬ್ ನ ಸದಸ್ಯರು ಹಿತೈಷಿಗಳು ದಸರಾ ಗೊಂಬೆ ಪ್ರಿಯರು ಭಾಗವಹಿಸಿ ಸಂಭ್ರಮಿಸಿದರು.

Leave a Reply

Your email address will not be published. Required fields are marked *