ನಂದಿನಿ ಮೈಸೂರು
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವಾಹನ ಮಾಲೀಕರ ಸೌಹಾರ್ದ ಸಹಕಾರಿ ನಿಯಮಿತ 28ನೇ ವಾರ್ಷಿಕ ಮಹಾಸಭೆ ನಡೆಯಿತು.
ಮೈಸೂರಿನ ಖಾಸಗೀ ಹೊಟೇಲ್ ನಲ್ಲಿ ಆಯೋಜಿಸಿದ್ದ ಸಭೆಯನ್ನು ಅಧ್ಯಕ್ಷರಾದ ಚಂದ್ರಶೇಖರಯ್ಯ ಸೇರಿದಂತೆ ಪದಾಧಿಕಾರಿಗಳು ದೀಪಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.
ಸಂಘದಲ್ಲಿ ಸುಮಾರು220 ಜನ ಸದಸ್ಯರಿದ್ದಾರೆ.ಒಂದು ವರ್ಷದಲ್ಲಿ ನಡೆದ ಕಾರ್ಯಕ್ರಮ, ಸಭೆ,ಸಮಾರಂಭ ಸೇರಿದಂತೆ ಇತರೆ ಕಾರ್ಯಕ್ರಮದ ಖರ್ಚು ಹಾಗೂ ಆದಾಯದ ವರದಿ ಮಂಡಿಸಲಾಯಿತು.ಸಂಘದ ಸದಸ್ಯರು 100 ಪರ್ಸೆಂಟ್ ಡಿವಿಡೆಂಟ್ ಗೆ ಒತ್ತಾಯ ಮಾಡಿದ್ದೂ ಆಗ
ಅಧ್ಯಕ್ಷರಾದ ಚಂದ್ರಶೇಖರಯ್ಯ ರವರು ಒಪ್ಪಿಗೆ ನೀಡಿದರು.ನಂತರ 5 ಜನ ಸಂಘದ ಹಿರಿಯ ಮಾಲೀಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವಾರ್ಷಿಕ ಸಭೆಯಲ್ಲಿ ನಿರ್ದೇಶಕರಾದ
ಕೋದಂಡರಾಮು,ಸತೀಶ್, ಹೆಚ್.ಡಿ.ಗೀರೀಶ್,ಕೃಷ್ಣಮೂರ್ತಿ ,ಬಸವರಾಜು,ಜಯರಾಜ್,ರಾಮು.ಎನ್,ಶಶಿಲಾ ಕೆ.ಪಿ.,ಪಟ್ಟಾಭಿರಾಮನ್,ಆಶಾಕಿರಣ್,ಮೋದಿನ್ ಪಾಷಾ ಸೇರಿದಂತೆ ಸದಸ್ಯರು ಹಾಜರಿದ್ದರು.