ಶ್ರೀಯೋಗಾನರಸಿಂಹಸ್ವಾಮಿ ಸನ್ನಿಧಾನದಲ್ಲಿ `ಪವಿತ್ರೋತ್ಸವ’ ಸಂಭ್ರಮ

ನಂದಿನಿ ಮೈಸೂರು

ಶ್ರೀಯೋಗಾನರಸಿಂಹಸ್ವಾಮಿ
ಸನ್ನಿಧಾನದಲ್ಲಿ `ಪವಿತ್ರೋತ್ಸವ’ ಸಂಭ್ರಮ

ಮೈಸೂರು: ಇಲ್ಲಿನ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಸಂಭ್ರಮ ಹಾಗೂ ವಿಜೃಂಭಣೆಯ ಪವಿತ್ರೋತ್ಸವ ವಿಶೇಷ ಪೂಜಾ ಮಹೋತ್ಸವವ ನಡೆಯುತ್ತಿದೆ.


ಪ್ರಸ್ತುತ ಬಾದ್ರಪದ, ಶುಕ್ಲ ಏಕಾದಶಿಯಿಂದ ಆರಂಬಿಸಿ, ಕೃಷ್ಣ ದ್ವಿತೀಯೇವರೆಗೂ ಪವಿತ್ರೋತ್ಸವ ಸ್ವಾಮಿಯ ಸನ್ನಿಧಾನದಲ್ಲಿ ಜರುಗಿತ್ತಿದೆ. ಪವಿತ್ರ ಎಂದರೇ ಶುದ್ದವಾಗಿರುವುದು, ಉತ್ಸವ ಎಂದರೇ ಹಬ್ಬ, ಜಾತ್ರೆಯೆಂದೇ ಅರ್ಥವಾಗಿದೆ. ಹೆಸರಲ್ಲೇ ತಿಳಿಸಿರುವಂತೆ ಲೋಕದಲ್ಲಿ ಇರುವಂತಹ ದುಷ್ಟಶಕ್ತಿಗಳು ಯಾವುದಾದರೂ ಪಾತಕಾದಿಗಳು ಜರುಗಿದ್ದಲ್ಲಿ ಈ ಉತ್ಸವ ಆಚರಣೆಯಿಂದಾಗಿ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ ಎನ್ನುತ್ತಾರೆ ದೇವಾಲಯದ ಆಡಳಿತಾಧಿಕಾರಿ ಶ್ರೀ ಎನ್.ಶ್ರೀನಿವಾಸನ್ ಅವರು.

ಮುಂದುವರೆದು ಈ ಉತ್ಸವದ ಬಗ್ಗೆ ಮಾಹಿತಿ ನೀಡಿದ ಶ್ರೀನಿವಾಸನ್ ಅವರು, ಈ ಉತ್ಸವ ಉಲ್ಲೇಖ ನಮಗೆ ಅಗ್ನಿಪುರಾಣ ಹಾಗೂ ಗರುಡ ಪುರಾಣಗಳಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ. ಪಂಚಾರಾತ್ರಗಮದಲ್ಲಿ ಪ್ರಸಿದ್ಧ ಸಂಹಿತೆಯಾದ ಜಯಕ್ಯ ಸಂಹಿತೆಯಲ್ಲಿ ಸರ್ವದೋಶ ನಿವಾರಣೆ ಈ ಉತ್ಸವದದಲ್ಲಿ ಪ್ರಮುಖ ಅಂಶವಾಗಿದೆ ಎಂದು ವಿವರಿಸಿದರು.

ಎಲ್ಲರಿಗೂ ಶಾಂತಿ, ಸಂತೋಷ, ಕಲ್ಯಾಣ ಎಲ್ಲವೂ ಲಭಿಸಲಿ ಎಂಬ ಉದ್ದೇಶದಿಂದ ಸುದರ್ಶನ ನಾರಸಿಂಹ ಕ್ಷೇತ್ರಗಳಲ್ಲಿ ಅಂಕನಾರ್ಪಣದಿಂದ ತೊಡಗಿ ಯಾಗಶಾಲ ಮಂಡಲರಾಧನೆಯೊಂದಿಗೆ ಭಗವಂತನಿಗೆ (ಯೋಗಾನರಸಿಂಹ ಸ್ವಾಮಿಯವರಿಗೆ) ಶುದ್ಧವಾದ ರೇಷ್ಮೇಯಿಂದ ಮಾಡಲ್ಪಟ್ಟ ಮಾಲೆಗಳನ್ನು ಪವಿತ್ರೀಕರಿಸಿ (ಶುದ್ದೀಕರಿಸಿ) ಧರಿಸಲಾಗುವುದು ಎಂದ ಅವರು, ಇದರಿಂದಾಗಿ ಜಗತ್ತಿಗೆ ಕ್ಷೇಮ ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಸರ್ವದೋಷ ನಿವಾರಣೆ, ಸರ್ವಯಜ್ಞ ಫಲಪ್ರದ, ಸರ್ವದೋಷ ಉಪಶಮನ, ಸರ್ವ ಸುಷ್ಠಿಕರ, ಸರ್ವ ಕಾಮಪ್ರದ ಮತ್ತು ಸರ್ವ ಲೋಕಶಾಂತಿ ಈ ಪವಿತ್ರೋತ್ಸವದಿಂದ ಲಭಿಸಲಿದ್ದು, ಭಕ್ತಾದಿಗಳು ಆಗಮಿಸಿ, ಈ ಉತ್ಸವದಲ್ಲಿ ಪಾಲ್ಗೊಂಡು ಯೋಗಾನರಸಿಂಹ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದರು.
ಈ ಸಂದರ್ಭದಲ್ಲಿ ದೇವಾಲಯದ ಸಂಸ್ಥಾಪರಾದ ಶ್ರೀ ಪ್ರೊ.ಡಾ.ಭಾಷ್ಯಂ ಸ್ವಾಮೀಜಿ ಅವರ ನೇತೃತ್ವದಲ್ಲಿ ಪವಿತ್ರೋತ್ಸವದ ಪೂಜಾ ಕೈಂಕರ್ಯಗಳು ನಡೆದು, ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

Leave a Reply

Your email address will not be published. Required fields are marked *