ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ರ ಪ್ರಕರಣ 28 (1) (ಜಿ) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಅದೇ ನಿಯಮದ ಪ್ರಕರಣ 38(1), 39(1) ರ ಉಪಬಂಧಕ್ಕೊಳಪಟ್ಟು, ಅಧಿಸೂಚನೆ ಸಂಖ್ಯೆ: ಇಡಿ/425/ಯುಆರ್ ಸಿ/2024 ದಿನಾಂಕ:27/08/2024ರಲ್ಲಿ ಕೆಳಕಂಡ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಪ್ರಾಧಿಕಾರಗಳಿಗೆ 03 ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದಿಂದ ನಾಮನಿರ್ದೇಶನಗಳನ್ನು ಮಾಡಲಾಗಿದೆ.
ಪ್ರಸ್ತುತ, ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಮಾಡಲಾಗಿದ್ದ ಡಾ: ಬೀರಪ್ಪ ಹೆಚ್. ಬಿನ್ ಹುಚ್ಚೇಗೌಡ, ಇವರ ನಾಮನಿರ್ದೇಶನವನ್ನು ಹಾಗೂ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಾಡಲಾಗಿದ್ದ ಶ್ರೀ ದೇವೇಂದ್ರಪ್ಪ ದ್ಯಾಮಪ್ಪಾ ಮಾಳಗಿ, ಹುಬ್ಬಳ್ಳಿ, ಇವರ ನಾಮನಿರ್ದೇಶನವನ್ನು ಸದರಿ ಅಧಿನಿಯಮ ಪ್ರಕರಣ 39(1) ರಡಿಯಲ್ಲಿ ಪ್ರದತ್ತವಾದ ಅಧಿಕಾರದನ್ವಯ ಹಾಗೂ ಕೆಳಕಂಡ ಪ್ರಕರಣಗಳಲ್ಲಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಮತ್ತು ಮಾನ್ಯ ಸವೋಚ್ಚ ನ್ಯಾಯಾಲಯವು ಪ್ರತಿವಾದಿಸಿರುವ ನ್ಯಾಯಿಕ ಅನುಪಾತ ಹಾಗೂ ತತ್ಪಾಂಶಗಳನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.
ತತ್ಪರಿಣಾಮವಾಗಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ರ ಅನ್ವಯಿಕ ಹೊಂದಿರುವ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯ ರಾಜ್ಯ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಪ್ರಾಧಿಕಾರಗಳಿಗೆ ಅದೇ ಅಧಿನಿಯಮದ ಪ್ರಕರಣ 28(1)(ಜಿ)ರನ್ವಯ ಪ್ರಕರಣ 39(1)ರ ಉಪಬಂಧಕ್ಕೊಳಪಟ್ಟು ಈ ಕೂಡಲೇ ಜಾರಿಗೆ ಬರುವಂತೆ ಸರ್ಕಾರದಿಂದ ಈ ಕೆಳಕಂಡಂತೆ ನಾಮನಿರ್ದೇಶಗಳನ್ನು ಮಾಡಲಾಗಿದೆ.
-1
ಬೆಂಗಳೂರು ನಗರ ವಿಶ್ವವಿದ್ಯಾಲಯ, ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು.
ಶ್ರೀಮತಿ ಶಿಲ್ಪಶ್ರೀ ವಿ.ಎನ್.
ಡಾ: ಬಸವರಾಜ ಗೊರವರ, ಬು. ಕೊಪ್ಪ ಪೋಸ್ಟ್, ತರ್ಲಘಟ ಕುಂದಗೋಳ ತಾಲ್ಲೂಕು, ಧಾರವಾಡ
ಸಿಂಡಿಕೇಟ್ ಪ್ರಾಧಿಕಾರಗಳ ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿ ಉಳಿದ ಸದಸ್ಯರ ಪದಾವಧಿಯನ್ನು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ, 2000ರ ಪ್ರಕರಣ 38(1)ರಲ್ಲಿ 03 ವರ್ಷಗಳಿಗೆ ಗೊತ್ತುಪಡಿಸಲಾಗಿದ್ದರೂ, ಸಹ ಪ್ರಕರಣ 39(1) ರಲ್ಲಿ ನಿಯಮಿಸಿರುವಂತೆ ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರಕ್ಕೆ ನಾಮನಿರ್ದೇಶಿತನಾದ ಯಾವೊಬ್ಬ ಸದಸ್ಯನು ನಾಮನಿರ್ದೇಶಿತ ಪ್ರಾಧಿಕಾರ ಇಷ್ಟಪರ್ಯಂತ ಸದಸ್ಯತ್ವದ ಪದಧಾರಣೆ ಮಾಡಬೇಕಾಗುತ್ತದೆ. ಇದೇ ನ್ಯಾಯಿಕ ಅನುಪಾತವನ್ನು ರಿಟ್ ಅರ್ಜಿ ಸಂಖ್ಯೆ: 25964-967/2013 (enders) c/w D : 25612/2013 2 26170- 26171/2013 ರ ಪ್ರಕರಣಗಳಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ನೀಡಿದ ತೀರ್ಪಿನಲ್ಲಿ ಪ್ರತಿಪಾದಿಸಲಾಗಿದೆ.
, OM Narain Agarwal and Others V/s Nagara Palike, Shahahjahanpur and others (AIR 1993 SC 1440) ನ್ಯಾಯಾಲಯವು ಪ್ರತಿಪಾದಿಸಿರುವಂತೆ, ಚುನಾಯಿತ ಅಥವಾ ನೇಮಕಾತಿ ಹೊಂದಿದ ಸದಸ್ಯರಿಗೆ ಭಿನ್ನವಾದ ಗುಂಪಿಗೆ ಸೇರುವ ನಾಮನಿರ್ದೇಶಿತ ಸದಸ್ಯರು, ಚುನಾಯಿತ ಅಥವಾ ನೇಮಕಾತಿ ಹೊಂದಿದ ಸದಸ್ಯರ ಸಮಾನತೆಗೆ ಅಥವಾ ಸಾದೃಶ್ಯ ಸ್ಥಾನಮಾನಕ್ಕೆ ಹಕ್ಕೋತ್ತಾಯ ಸಲ್ಲಿಸಲು ಅರ್ಹರಾಗದೇ, ನಾಮನಿರ್ದೇಶನ ಪ್ರಾಧಿಕಾರದ ಇಷ್ಮಪರ್ಯಂತಕ್ಕೆ ಒಳಪಡುತ್ತಾರೆ. ಆದುದರಿಂದ, ಮೇಲಿನ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಪ್ರಾಧಿಕಾರಗಳಿಗೆ ಮೇಲಿನ ಕೋಷ್ಠಕದಲ್ಲಿ ನಮೂದು ಮಾಡಲಾಗಿರುವ ನಾಮನಿರ್ದೇಶನಗಳು ಸರ್ಕಾರದ ಇಷ್ಟಪರ್ಯಂತಕ್ಕೆ ಒಳಪಟ್ಟಿರುತ್ತವೆ.
(1) ನಾಮನಿರ್ದೇಶಿಕ ಸದಸ್ಯರು ಸಾಮಾಜಿಕ ಮೀಸಲಾತಿಯ ಬಗ್ಗೆ ಒಂದು ತಿಂಗಳ ಒಳಗಾಗಿ ಸಕ್ಷಮ ಪ್ರಾಧಿಕಾರದಿಂದ ದೃಢೀಕರಿಸಿ/ಪ್ರಮಾಣೀಕರಿಸಿ ಪೂರಕ ದಾಖಲೆಗಳನ್ನು ನಾಮನಿರ್ದೇಶನಗೊಂಡ ವಿಶ್ವವಿದ್ಯಾಲಯಗಳಿಗೆ ಸಲ್ಲಿಸತಕ್ಕದ್ದು.
(2) ನಾಮನಿರ್ದೇಶಿತ ಸದಸ್ಯರು ಪಡೆದಿರುವ ಸ್ನಾತಕ/ಸ್ನಾತಕೋತ್ತರ ಪದವಿಗಳ ನೈಜತೆ/ಋಜುತ್ವದ ಬಗ್ಗೆ ಪದವಿ ಪಡೆದ ವಿಶ್ವವಿದ್ಯಾಲಯಗಳಿಂದ ದೃಢೀಕರಿಸಿದ ಕುರಿತು ಪ್ರಮಾಣಪತ್ರಗಳನ್ನು ಒಂದು ತಿಂಗಳ ಒಳಗಾಗಿ ನಾಮನಿರ್ದೇಶನಗೊಂಡ ವಿಶ್ವವಿದ್ಯಾಲಯಗಳಿಗೆ ಸಲ್ಲಿಸತಕ್ಕದ್ದು.
(3) ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ, 2000 ಪ್ರಕರಣ 28(1)(ಜಿ)ರ ಪತರಂತುಕದಲ್ಲಿ ಗೊತ್ತುಪಡಿಸಿರುವಂತೆ, ನಾಮನಿರ್ದೇಶನ ಸದಸ್ಯರು, ನಾಮನಿರ್ದೇಶನಗೊಂಡ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜಿನಲ್ಲಿ ಅಥವಾ ವಿಶ್ವವಿದ್ಯಾಲಯದ ಯಾವುದೇ ಸ್ಥಾನಮಾನದಲ್ಲಿ ನಿಯೋಜನೆ ಹೊಂದಿರದ ಬಗ್ಗೆ ವಿಶ್ವವಿದ್ಯಾಲಯವು ದೃಢೀಕರಿಸಿಕೊಳ್ಳತಕ್ಕದ್ದು.