ನಂದಿನಿ ಮೈಸೂರು
ಮಡಿವಾಳಸಂಘದಿಂದ ಅಂಬಾರಿ ಆನೆಗೆ ಪೂಜೆ ಮಾಡುವ ಪ್ರಹ್ಲಾದ್ ರಾವ್ ರವರಿಗೆ ಸನ್ಮಾನ

ಮೈಸೂರು:- ವಿಶ್ವ ವಿಖ್ಯಾತ ಮೈಸೂರು ದಸರ ಮಹೋತ್ಸವದಲ್ಲಿ ಪ್ರಮುಖ ಬಿಂದುವಾದ ಅಂಬಾರಿ ಹೊರುವ ಆನೆ ಹಾಗೂ ದಸರ ಆನೆಗಳಿಗೆ 27 ವರ್ಷಗಳಿಂದ ಸಾಂಸ್ಕೃತಿಕ ಪೂಜೆ ಮಾಡುತ್ತ ಬಂದಿರುವ ಪ್ರಹ್ಲಾದ್ ರಾವ್ ರವರಿಗೆ ಸನ್ಮಾನಿಸುತ್ತಿರುವುದು ಮೈಸೂರು ಪರಪರೆಯ ಸಂಸ್ಕೃತಿಯಾಗಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ರವರು ತಿಳಿಸಿದರು.
ಅವರು ಜಲದರ್ಶಿನಿ ಅಥಿತಿ ಗೃಹದಲ್ಲಿ ಆಯೋಜಿಸಿದ ಮೈಸೂರು ಜಿಲ್ಲಾ ಮಡಿವಾಳರ ಸಂಘದ ವತಿಯಿಂದ ಅರಮನೆ ಪುರೋಹಿತರಾದ ಪ್ರಹ್ಲಾದ್ ರಾವ್ ರವರಿಗೆ ಸನ್ಮಾನಿಸಿದ ಸಂದರ್ಭದಲ್ಲಿ ತಿಳಿಸಿದರು.ಮೈಸೂರು ಜಿಲ್ಲಾ ಮಡಿವಾಳ ಸಂಘ ಇಂದು ಉತ್ತಮ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ಸಮಾಜಕ್ಕೆ ಸಂದೇಶಸಾರುವಂತಹದು, ಸಮಾಜದ ಕೊಳೆಗಳನ್ನು ತೊಳೆಯುತ್ತ ತಮ್ಮ ವೃತ್ತಿಯನ್ನು ಕಾಯುತ್ತ ಬಂದು ಶ್ರೇಷ್ಠ ಕೆಲಸ ಮಾಡುತ್ತಿರುವ ಮಡಿವಾಳದ ಸಮಾಜಕ್ಕೆ ಕೃತಜ್ಞತೆ ಸಲ್ಲಿಸಿದರು.ಭಾರತದ ಸಂಸ್ಕೃತಿ ಶ್ರೇಷ್ಠವಾದುದ್ದು. ಈ ಸಮಾಜ ಮುಖ್ಯ ವೇದಿಕೆಗೆ ಬರ ಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮೈಸೂರು ಜಿಲ್ಲಾ ಮಡಿವಾಳ ಸಂಘದ ಉಪಾಧ್ಯಕ್ಷರಾದ ಬಿ ಜಿ ಕೇಶವರವರು ಮಾತನಾಡಿ ವಿಶ್ವ ವಿಖ್ಯಾತ ದಸರ ಸಂದರ್ಭದಲ್ಲಿ ಪ್ರಹ್ಲಾದ್ ರಾವ್ ರವರು ಜಂಬೂಸವಾರಿ ಹೊರುವ ಆನೆ ಸೇರಿದಂತೆ ದಸರ ಆನೆಗಳಿಗೆ ಪೂಜೆ ಸಲ್ಲಿಸುತ್ತಿರುವ ಪ್ರಹ್ಲಾದ್ ರಾವ್ ರವರ ಸೇವೆ ಮೈಸೂರು ಪಾರಂಪರಿಕ ಸಂಸ್ಕೃತಿಯನ್ನು ಸಾರುತ್ತದೆ. ದಸರ ಆರಂಭವಾಯುತ್ತೆಂದರೆ ಮೊಟ್ಟ ಮೊದಲಕಾರ್ಯಕ್ರಮವೆಂದರೆ ಆನೆಗಳ ಪೂಜೆ. ಇದನ್ನು 27 ವರ್ಷಗಳಿಂದ ಮಾಡುತ್ತಿದ್ದಾರೆ,ಈ ಸೇವೆಯನ್ನು ಗುರುತಿಸಿ ನಮ್ಮ ಮಡಿವಾಳ ಸಮಾಜದಿಂದ ಅವರಿಗೆ ಸನ್ಮಾನ ಮಾಡಿ ಗೌರವಿಸಿದೆ ಎಂದು ತಿಳಿಸಿದರು.
ಈ ವೇಳೆ ಸನ್ಮಾನಿತರಾದ ಪ್ರಹ್ಲಾದ್ ರಾವ್ ರವರು ಮಾತನಾಡಿ ಹಲವಾರು ವರ್ಷಗಳಿಂದಅಂಬಾರಿ ಹೊತ್ತ ಆರ್ಜುನ ಆನೆಯು ಮೃತ ಪಟ್ಟಿದೆ ಇದರ ಸ್ಮಾರಕವಾಗ ಬೇಕೆಂದು ತಮ್ಮ ಅಭಿಪ್ರಾಯವನ್ನು ಸರಕಾರಕ್ಕೆ ಮನವಿ ಮಾಡುವ ಮೂಲಕ ತಿಳಿಸಿದರು.
ಮಡಿವಾಳ ಸಂಘದ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡರಾದ ಕೇಶವ್ ರವರು ಮಾತನಾಡಿ ಪ್ರಹ್ಲಾದ್ ರಾವ್ ರವರು ಕಳೆದ 27 ವರ್ಷಗಳಿಂದ ದಸರಾ ಆನೆಗಳಿಗೆ ಹಾಗೂ ಚಿನ್ನದ ಅಂಬಾರಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಅವರನ್ನ ನಮ್ಮ ವಿಶ್ವಕರ್ಮ ಸಮುದಾಯದ
ಇದೇ ಸಂದರ್ಭದಲ್ಲಿ ಅಥಿತಿಗಳಾದ ಮಾಜಿ ಮೇಯರ್ ಗಳಾದ ಪುರುಷೋತ್ತಮ್,ಆನಂತು ಮತ್ತು ಮೈಸೂರು ನಗರ ಹಿಂದೂಳಿದ ವರ್ಗದ ಅಧ್ಯಕ್ಷರಾದ ನಾಗೇಶ್ ಸೇರಿದಂತೆ ಇತರರಿಗೆ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮೂಡಾ ಅಧ್ಯಕ್ಷರಾದ ಹೆಚ್ ವಿ ರಾಜೀವ್,ನಾಗರಜ್,ಜಗದೀಶ್ ಕುಮಾರ್,ಹೆಬ್ಬಾಳ್ ಶ್ರೀನಿವಾಸ್,ರೇವಣ್ಣ,ರವಿ,ಸುರೇಶ್,ಶ್ರೀರಾಮು, ವೆಂಕಟೇಶ್,ಕೊಣನೂರು ಸುರೇಶ್, ರಾಜೇಶ್,ರಾಘವೇಂದ್ರ ಸೇರಿದಂತೆ ಇತರೆ ಸಮಾಜದವರು ಉಪಸ್ಥಿತರಿದ್ದರು.