ಪ್ರತಿಭಾ ಪುರಸ್ಕಾರದಿಂದ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ – ಡಾ.ಈ.ಸಿ.ನಿಂಗರಾಜ್ ಗೌಡ.

ನಂದಿನಿ ಮೈಸೂರು

ಪ್ರತಿಭಾ ಪುರಸ್ಕಾರದಿಂದ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ – ಡಾ.ಈ.ಸಿ.ನಿಂಗರಾಜ್ ಗೌಡ.

ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್ ವತಿಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ದಾನಿಗಳಿಗೆ ಅಭಿನಂದನಾ ಸನ್ಮಾನ ಕಾರ್ಯಕ್ರಮವೂ ಯಶ್ವಸಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಡಾ.ಈ.ಸಿ.ನಿಂಗರಾಜ್ ಗೌಡ ರವರು ಈ ರೀತಿಯ ಪ್ರತಿಭಾ ಪುರಸ್ಕಾರದಿಂದಾಗಿ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡಲೂ ಪ್ರೇರಣೆ ಸಿಗುತ್ತದೆ ಎಂದರು. ಶೈಕ್ಷಣಿಕವಾಗಿ ಮಾತ್ರವಲ್ಲದೇ ಕ್ರೀಡಾ ಕ್ಷೇತ್ರ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ, ಅವರೆಲ್ಲರ ಶಿಕ್ಷಕರು ಮತ್ತು ಪೋಷಕರಿಗೂ ಮಕ್ಕಳು ಸಾಧನೆ ಮಾಡಲೂ ನೆರವಾಗಿದ್ದಕ್ಕೆ ಧನ್ಯವಾದಗಳನ್ನೂ ಟ್ರಸ್ಟ್ ನ ಪರವಾಗಿ ಸಲ್ಲಿಸಿದರು. ಪ್ಯಾರೀಸ್ ನಲ್ಲಿ ನಡೆಯುತ್ತೀರುವ ಪ್ಯಾರಒಲಿಂಪಿಕ್ಸ್ ನಲ್ಲಿ 6 ಚಿನ್ನ ಸೇರಿದಂತೆ 26 ಪದಕಗಳನ್ನೂ ಪಡೆದು ಭಾರತ ದೇಶಕ್ಕೆ ಕೀರ್ತಿ ತಂದಿರುವ ಎಲ್ಲಾ ಕ್ರೀಡಾಪಟುಗಳಿಗೂ ಅಭಿನಂದನೆಯನ್ನೂ ಸಲ್ಲಿಸಿದ್ದರು. ಇದೇ ರೀತಿ ಎಲ್ಲಾ ವಿದ್ಯಾರ್ಥಿಗಳು ಶೈಕ್ಷಣಿಕ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ, ವೈದ್ಯಕೀಯ, ಯೋಗ, ಆದ್ಯಾತ್ಮೀಕ, ಸಾಂಸ್ಕೃತಿಕ, ಕೃಷಿ, ತೋಟಗಾರಿಕೆ ಹಾಗೂ ಇನ್ನಿತರ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ ಭಾರತವೂ ಜಗತ್ತೀನಲ್ಲಿಯೇ ವಿಶ್ವಗುರು ಆಗಲೂ ಶ್ರಮಿಸಬೇಕೇಂದು ಕರೆ ನೀಡಿದರು.

ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್ ವತಿಯಿಂದ ವರ್ಷಪೂರ್ತಿ ಕಾರ್ಯಕ್ರಮಗಳನ್ನೂ ಮಾಡಿಕೊಂಡು ಬರುತ್ತೀದ್ದೇವೆ. ಮಕ್ಕಳಲ್ಲಿ ಮತ್ತು ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಿಲಿಕಾನ್ ಸಿಟಿ ಪಾರ್ಕ್ ಆವರಣದಲ್ಲಿರುವ 4 ಎಕರೆ ಜಾಗದಲ್ಲಿ ಸಾಲುಮರದ ತಿಮ್ಮಕ್ಕರವರನ್ನೂ ಕರೆಸಿ, ಅವರ ಹೆಸರಿನಲ್ಲಿಯೇ ಪರಿಸರಕ್ಕೆ ಪೂರಕವಾದ ಮನುಷ್ಯರಿಗೆ ಉತ್ತಮವಾದ ಗಾಳಿ, ಪಕ್ಷಿಗಳಿಗೆ ಹಣ್ಣು ಸಿಗುವ ಹಲವಾರು ಗಿಡಗಳನ್ನೂ ನೆಟ್ಟು ಬೆಳೆಸುವುದರ ಮೂಲಕ ಉದ್ಯಾನವನವನ್ನು ನಿರ್ವಹಿಸುತ್ತೀದ್ದೇವೆ ಎಂದರು.
ಜೊತೆಗೆ ವಿಶೇಷ ಚೇತನರಿಗೆ ಅಗತ್ಯವಿರುವ ಕೃತಕ ಕಾಲು, ಗಾಲಿ ಖುರ್ಚಿಗಳನ್ನೂ ನೀಡಿದ್ದೇವೆ. ಮಹಿಳೆಯರು ಸ್ವಾವಲಂಬಿ ಆಗಬೇಕು ಎನ್ನುವ ಉದ್ದೇಶದಿಂದ ಉಚಿತವಾಗಿ ಹೊಲಿಗೆ ತರಬೇತಿ ಮತ್ತು ಹೊಲಿಗೆ ಯಂತ್ರಗಳನ್ನೂ ನೀಡಿದ್ದೇವೆ. ವಿನಾಯಕ ದೇವಸ್ಥಾನದ ಆವರಣದಲ್ಲಿ ವರ್ಷಪೂರ್ತಿ ಉಚಿತ ಯೋಗ, ಭಜನೆ, ಸತ್ಸಂಗ ತರಗತಿಗಳನ್ನೂ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಎಲ್. ರವಿರವರ ಮಾರ್ಗದರ್ಶನದಲ್ಲಿ ನಡೆಸಿಕೊಂಡು ಬರುತ್ತೀದ್ದೇವೆ ಎಂದು ತಿಳಿಸಿದರು.

ಮೈಸೂರಿನ BEML – ಕೆ.ಆರ್.ಎಸ್ ಮುಖ್ಯ ರಸ್ತೆಯಲ್ಲಿರುವ ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್ ವತಿಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ SSLC , PUC ಯಲ್ಲಿ ಅತಿಹೆಚ್ಚು ಅಂಕವನ್ನೂ ತೆಗೆದುಕೊಂಡ ಮೈಸೂರು ಮತ್ತು ಮಂಡ್ಯ ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಕ್ರೀಡಾ ಕ್ಷೇತ್ರದಲ್ಲಿ ಖೊಖೋ, ಕರಾಟೆ, ಯೋಗ, ಬಾಕ್ಸಿಂಗ್, ಕಬಡ್ಡಿ ಹಾಗೂ ಇತರೇ ಕ್ರೀಡೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ, ಭರತನಾಟ್ಯದಲ್ಲಿ ವಿಶೇಷ ಸಾಧನೆ ಮಾಡಿದ 18 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಿನಾಂಕ:07.09.2024 ರಂದು ಬೆಳಿಗ್ಗೆ 11.30 ಘಂಟೆಗೆ ವಿನಾಯಕ ದೇವಸ್ಥಾನದ ಆವರಣದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ದೇವಸ್ಥಾನದ ನಿರ್ಮಾಣಕ್ಕೆ ಉದಾರವಾಗಿ ದೇಣಿಗೆ ನೀಡಿದ ಮುರುಗೇಶ್, ಗೋಪಾಲ್, ಸುದೀರ್ ದೇವರಾಜು, ಕಿರಣ್, ಸುರೇಶ್ , ಮಹೇಶ್ ಮತ್ತು ಶಿವಣ್ಣರವರನ್ನೂ ಅಭಿನಂದಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೆ.ಬಿ.ಎಲ್ ಸಿಲಿಕಾನ್ ಸಿಟಿ ಓನರ್ಸ್ ವೆಲ್ ಫೇರ್ ಅಸೋಸಿಯನ್ ಅಧ್ಯಕ್ಷರಾದ ಕೆ.ಎನ್. ಸಂತೋಷ್, ಖಜಾಂಚಿ ಎಂ. ಮೋಹನ್, ಉಮಾಶಂಕರ್ ಆರಾಧ್ಯ, ಎನ್.ಕಿರಣ್, ಬಿ.ಎನ್. ಸುರೇಶ್, ಬಿ.ಬಿ.ಮಧುಕರ್, ನಿತೀನ್, ದೀಲಿಪ್ ಆರಾಧ್ಯ, ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಎಂ.ಆರ್. ಸತ್ಯನಾರಾಯಣ, ರವಿ, ರಾಜು, ವೆಂಕಟೇಶ್, ಪ್ರಶಾಂತ್, ಕೆ. ವಿವೇಕ್ ಗೌಡ, ವೈ.ಚ್. ಲೋಹಿತ್ ಕುಮಾರ್, ಡಿ.ಶ್ರೀಕಂಠೇಗೌಡ, ಹೆಚ್.ಡಿ.ರಮೇಶ್, ಸೂನಗಹಳ್ಳಿ ಮಹೇಶ್, ಪಿ.ಕೆ.ರಮೇಶ್, ಬೆಟ್ಟೇಗೌಡ, ಸುಭಾಷ್ ಗೌಡ, ವಿಜಯ್ ಅರಸ್, ಅರ್ಚಕರಾದ ರತ್ನಾಕರ ಭಾರದ್ವಾಜ್, ಡಾ.ಮಜ್ಜಿಗೆಪುರ ಕೆ. ಶಿವರಾಮು,
ಕಾರ್ತಿಕ್, ಶ್ರೀನಿವಾಸ್, ಡಾ.ಸ್ವಾಮಿ, ಈ.ಸಿ.ವಸಂತಕುಮಾರ್ ಮತ್ತೀತರರು ಹಾಜರಿದ್ದರು.

 

Leave a Reply

Your email address will not be published. Required fields are marked *