ನಂದಿನಿ ಮೈಸೂರು
ಮೊದಲನೇ ಆಷಾಡ ಶುಕ್ರವಾರ ಹಾಗೂ ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಸುನೀಲ್ ನಾರಾಯಣ್ರವರ ಹುಟ್ಟುಹಬ್ಬದ ಅಂಗವಾಗಿ
ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ವತಿಯಿಂದ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ಲಾಸ್ಟಿಕ್ ನಿಂದ ಆಗುವ ಪರಿಸರ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಿದರು.
ಕೆಪಿಸಿಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬಟ್ಟೆ ಬ್ಯಾಗ್ ಮೇಲೆ ಶ್ರೀಪಾಲ್ ಅವರ ಭಾವಚಿತ್ರ ಹಾಕಿ ಪ್ಲಾಸ್ಟಿಕ್ ತ್ಯಜಿಸಿ ಪರಿಸರವನ್ನು ಉಳಿಸಿ ಎಂಬ ಸಂದೇಶದ ಬರಹದೊಂದಿಗೆ
ಚಾಮುಂಡಿ ಬೆಟ್ಟದ ಪಾದದ ಬಳಿ ಕೆಪಿಸಿಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು,ಶ್ರೀಪಾಲ್ ಬಳಗದ ಸ್ನೇಹಿತರು
ಬೆಟ್ಟಕ್ಕೆ ಬರುವ ಭಕ್ತರಿಗೆ ಬಟ್ಟೆ ಬ್ಯಾಗ್ ವಿತರಿಸಿದರು.ಭಕ್ತರಿಗೆ ಪ್ಲಾಸ್ಟಿಕ್ ನಿಂದ ಆಗುವ ಪರಿಸರ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಿದರು.
ಇದೇ ಸಂದರ್ಭದಲ್ಲಿ ಸುನೀಲ್ ನಾರಾಯಣ್ ರವರ ಹುಟ್ಟುಹಬ್ಬ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು,ಸ್ನೇಹಿತರು ಸನ್ಮಾನಿಸಿ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ
ರಾಜ್ಯ ಕಾರ್ಯದರ್ಶಿಗಳಾದ ಆರ್. ಶ್ರೀಪಾಲ್,ರವಿ ಎಸ್.ನಾಯಕ್, ವಿಕಾಸ್ ಸಿಂಹ,ಶ್ರೀನಿವಾಸ್, ಕೃಷ್ಣಪ್ಪ,ಬಸವಣ್ಣರವರು ಸೇರಿದಂತೆ ಮತ್ತಿತರರು ಉಪಸ್ಥಿತರಿದರು.