ನಂದಿನಿ ಮನುಪ್ರಸಾದ್ ನಾಯಕ್
ಗಾಂಧಿಚೌಕದಲ್ಲಿರುವ
ದಿ ಮೈಸೂರು ಕೋ ಅಪರೇಟಿವ್ ಬ್ಯಾಂಕ್ ನ 119ನೇ ವಾರ್ಷಿಕೋತ್ಸವದ ಸಂಭ್ರಮ ಹಾಗೂ ವಾರ್ಷಿಕ ಸಭೆ ಏರ್ಪಡಿಸಲಾಗಿತ್ತು.
ಬ್ಯಾಂಕ್ ಅಧ್ಯಕ್ಷ ಜೆ.ಯೋಗೇಶ್ ಅವರ ಅಧ್ಯಕ್ಷತೆಯಲ್ಲಿ
ಕರ್ನಾಟಕ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಪಿ.ಕಾಳಿಂಗರಾವ್ ಸಭಾ ಭವನದಲ್ಲಿ ವಾರ್ಷಿಕ ಸಭೆಯನ್ನು ವೇದಿಕೆ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಸಭೆಯ ಬಳಿಕ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾಧಕ ಮಕ್ಕಳನ್ನು ಸನ್ಮಾನಿಸಲಾಯಿತು. ಜತೆಗೆ ಬ್ಯಾಂಕಿನ ಷೇರು ಹೊಂದಿದ ಹಿರಿಯ 119 ಮಂದಿ ಸದಸ್ಯರನ್ನು ಅಭಿನಂದಿಸಲಾಯಿತು.
ಬ್ಯಾಂಕ್‌ನಿಂದ 10968.89 ಲಕ್ಷ ರೂ. ಸಾಲ ನೀಡಿದ್ದು, ಷೇರುದಾರರಿಗೆ ಶೇ.10 ಡಿವಿಡೆಂಡ್ ಘೋಷಿಸಿದೆ. ಇದೇ ವೇಳೆ ಬ್ಯಾಂಕಿನ ಸರ್ವ ಸದಸ್ಯರ ಸಭೆಯಲ್ಲಿ ಡಿವಿಡೆಂಡ್ ಹೆಚ್ಚಳ, ಯುಪಿಎ ಬಳಕೆ, ಸಿಹಿ ವಿತರಣೆ ಹಾಗೂ ಮರಣ ನಿಧಿಯ ಬಗ್ಗೆ ಸದಸ್ಯರು ಸಲಹೆ ನೀಡಿದರು.
ಬ್ಯಾಂಕ್ ಅಧ್ಯಕ್ಷ ಜೆ. ಯೋಗೇಶ್, 1 ಕೋಟಿ 40 ಲಕ್ಷ ರೂ. ಲಾಭದಲ್ಲಿ ಬ್ಯಾಂಕ್ ನಡೆಯುತ್ತಿದೆ. ನನ್ನ ಅವಧಿಯಲ್ಲಿ
ಶೇ.32ರಷ್ಟಿದ್ದ ಎಂಪಿಯನ್ನು 40 ದಿನಗಳಲ್ಲಿ ಶೇ.5.46ಕ್ಕೆ ತಂದು ನಿಲ್ಲಿಸಿದ್ದೇನೆ. ಆಡಳಿತ ಮಂಡಳಿ ಸಹಕಾರದಿಂದ ಇದನ್ನು ಕಾರ್ಯಗತ ಮಾಡಿದ್ದೇವೆ. ಸದಸ್ಯರು ಎಸ್‌ಬಿ ಖಾತೆ ತೆರೆದು ಯುಪಿಎ ಆನ್ ಲೈನ್ ಮೂಲಕವೂ ಹಣಕಾಸಿನ ವ್ಯವಹಾರ ಮಾಡಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ “ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್”ನ ಬ್ಯಾಂಕ್‌ನ ಮಾಜಿ ಉಪಾಧ್ಯಕ್ಷ ಪಡುವಾರಹಳ್ಳಿ ರಾಮಕೃಷ್ಣ,
ನಿರ್ದೇಶಕರಾದ ಎಸ್.ಬಿ.ಎಂ.ಮಂಜು, ಎನ್. ಯೋಗಾನಂದ, ಜಿ.ನಿರಂಜನ್, ಎಚ್.ಹರೀಶ್ ಕುಮಾರ್, ಆರ್.ರವಿಕುಮಾರ್(ರಾಜಕೀಯ), ಆರ್.ಸೋಮಣ್ಣ, ಕೆ.ಗಿರೀಶ್, ಸಿ.ಚಂದ್ರಶೇಖರ್, ಪಿ.ರಾಜೇಶ್ವರಿ, ಎಂ.ಪ್ರಮೀಳ, ವೃತ್ತಿಪರ ನಿರ್ದೇಶಕರಾದ ಎಂ.ವೈ.ರಮೇಶ್ ಗೌಡ, ಸಿ.ಎಸ್. ರಾಮಕೃಷ್ಣಯ್ಯ, ಕಾನೂನು ಸಲಹೆಗಾರರಾದ ಕೆ. ಆರ್.ಶಿವಶಂಕರ್, ಎಂ.ಬಿ.ಬಾಲಾಜಿಸಿಂಗ್, ಸಿ. ಎನ್.ಸುಂದರೇಶ್, ಆರ್.ಎಸ್.ಆನಂದ್, ಕೆ. ಕೋದಂಡರಾಮ, ವಿ.ಚಂದನ, ಆರ್.ರವಿ, ಎಚ್.ಸಿ.ಸುರೇಶ್,
ಮುಖ್ಯಕಾರ್ಯನಿರ್ವಾಹಕ ಕೆ.ಹರ್ಷಿತ್ ಗೌಡ ಸೇರಿದಂತೆ
ಇನ್ನಿತರರು ಉಪಸ್ಥಿತರಿದ್ದರು.