ಸರಳ ಚಾಮುಂಡೇಶ್ವರಿ ರಥೋತ್ಸವಕ್ಕೆ ರಾಜವಂಶಸ್ಥ ಯದುವೀರ್ ಚಾಲನೆ

36 Views

 

ಮೈಸೂರು:19 ಅಕ್ಟೋಬರ್ 2021

ನ@ದಿನಿ

ವಿಶ್ವವಿಖ್ಯಾತ ದಸರೆಯ ವಿಜಯದಶಮಿ ಬಳಿಕ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಸಂಪ್ರದಾಯಿಕ ರಥೋತ್ಸವ ಸರಳವಾಗಿ ನಡೆಯಿತು.

ಬೆಳಿಗ್ಗೆ ೭.೧೮ ರಿಂದ ೭.೪೫ ರ ಶುಭ ಲಗ್ನದಲ್ಲಿ ಜರುಗಿದ ರಥೋತ್ಸವಕ್ಕೆ ರಾಜವಂಶಸ್ಥ ಶ್ರೀ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರು ಚಾಲನೆ ನೀಡಿದರು.

ರಾಜಪೋಷಕಿನೊಂದಿಗೆ ಮೆರವಣಿಗೆಯಲ್ಲಿ ಸಾಗಿ ಗಮನ ಸೆಳೆದರು. ರಥೋತ್ಸವಕ್ಕೂ ಮುನ್ನ ಚಾಮುಂಡೇಶ್ವರಿ ಗೆ ವಿಶೇಷ ಪೂಜೆ ಸಲ್ಲಿಸಿದರು. ಯಧುವೀರರ ಧಾರ್ಮಿಕ ಕಾರ್ಯಕ್ಕೆ ರಾಜವಂಶಸ್ಥೆ ಪ್ರಮೋದದೇವಿ ಒಡೆಯರು ಸಾಥ್ ನೀಡಿದರು. ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಸಂಪ್ರದಾಯಿಕ ಪೂಜಾ ಕಾರ್ಯಗಳೊಂದಿಗೆ ರಥೋತ್ಸವ ನಡೆಸಿಕೊಟ್ಟರು.

ವಿಜಯದಶಮಿ ಜಂಬೂಸವಾರಿ ವೇಳೆ ಫಿರಂಗಿ ಸಿಡಿಸಲಾಗುತ್ತದೆ.ಅಂತೇಯೇ ರಥೋತ್ಸವ ಸಾಗುವ ವೇಳೆ ಕುಶಾಲಾತೋಪು ಹಾರಿಸುವ ಮೂಲಕ ತಾಯಿಗೆ ಗೌರವ ಸಲ್ಲಿಸಲಾಯಿತು.

Leave a Reply

Your email address will not be published.