ವಿವಿಧ ಕ್ಷೇತ್ರದ ಸಾಧಕರಿಗೆ ಆದರ್ಶ ಸೇವಾ ಪ್ರಶಸ್ತಿ ಪ್ರದಾನ

Share Post

ವರದಿ:ನಂದಿನಿ

ಮೈಸೂರು:25 ಸೆಪ್ಟಂಬರ್ 2019(bharathnewstv.in)ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಮೈಸೂರು ಶರಣ ಮಂಡಲಿ ವತಿಯಿಂದ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ ಅವರ ಆದರ್ಶ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಡಾ.ಎಸ್.ದತ್ತೇಶಕುಮಾರ್ ಅವರಿಗೆ, ಯೋಗ ಕ್ಷೇತ್ರದಲ್ಲಿ ಜಿ.ಎಸ್.ಎಸ್.ಫೌಂಡೇಶನ್ ನ ಶ್ರೀ ಹರಿ, ದಾಸೋಹ ಕ್ಷೇತ್ರದಲ್ಲಿ ಎಚ್.ಆರ್.ರಾಜೇಂದ್ರ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಜನಾಬ್ ಷರೀಫ್ ಅವರಿಗೆ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿರವರು ಮೈಸೂರು ಪೇಟಾ ತೊಡಿಸಿ ಶಾಲೂ ಒದಿಸಿ ರಾಜಗುರು ತಿಲಕ ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ ಆದರ್ಶ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಮಾನವತ್ವದಿಂದ ದೇವತ್ವಕ್ಕೆ ಏರಿದವರು.
ಮೈಸೂರು ಭಾಗದಲ್ಲಿ ಸ್ವಾತಂತ್ರ್ಯ ಬಂದಾಗ ಶೇ 18ರಷ್ಟಿದ್ದ ಶಿಕ್ಷಿತರ ಪ್ರಮಾಣ 1990ರ ಹೊತ್ತಿಗೆ ಶೇ 53ಕ್ಕೆ ಹೆಚ್ಚಿದೆ‌. ಇದಕ್ಕೆ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಶಿಕ್ಷಣ ದಾಸೋಹವೇ ಕಾರಣ.
ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ಶೇ 90ರಷ್ಟು ಪ್ರಾಥಮಿಕ ಮತ್ತು ಪ್ರೌಢಶಾಲೆಗಳೆ ಇದ್ದವು. ಇದರಲ್ಲಿ ಕಲಿತ ಅಸಂಖ್ಯ ಮಂದಿ ಶಿಕ್ಷಿತರಾದರು ಎಂದು ತಿಳಿಸಿದರು ಎಂದು ಕುಂದೂರು ಮಠದ ಡಾ.ಶರತ್ ಚಂದ್ರ ಸ್ವಾಮೀಜಿ ತಿಳಿಸಿದರು‌.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ
ಮೈಸೂರು ದಸರಾ ಸಾಂಸ್ಕೃತಿಕ ಉಪಸಮಿತಿಯ ಅಧ್ಯಕ್ಷ ಎನ್.ವಿ.ಫಣೀಶ್, ದಾಸ್ತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಡಿ.ತಿಮ್ಮಯ್ಯ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಮಂಡಲಿಯ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಪ್ರಧಾನ ಸಂಚಾಲಕ ಎಂ.ಚಂದ್ರಶೇಖರ, ಮುಖಂಡ ಲಕ್ಷ್ಮೀಶ ಹಾಜರಿದ್ದರು.


Share Post

Related posts

Leave a Comment