ಮೈಸೂರಿನಲ್ಲೇ ಪ್ರಪ್ರಥಮ ಬಾರಿಗೆ ಉಳಿದ ಆಹಾರ ಸಂಗ್ರಹಣ ಕೇಂದ್ರಕ್ಕೆ ಚಾಲನೆ

Share Post

ವರದಿ:ನಂದಿನಿ

ಮೈಸೂರು:5 ಜನವರಿ 2020(Bharathnewstv.in)ಉಳಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅದನ್ನು ಹಸಿದವರಿಗೆ ನೀಡುತ್ತಿರುವ ರಾಜೇಂದ್ರ ರವರ ನೆರವಿಗಾಗಿ ಇಂದು ನೂತನ ಆಹಾರ ಸಂಗ್ರಹಣ ಕೇಂದ್ರಕ್ಕೆ ಚಾಲನೆ ನೀಡಲಾಯಿತು.

 ಮೈಸೂರಿನ ವಾಡ್೯ 47 ರಲ್ಲಿರುವ ಸುಮಸೋಪಾನ ಉದ್ಯಾನವನದ ಆವರಣದಲ್ಲಿ ಮೈಸೂರಿನಲ್ಲೇ ಪ್ರಪ್ರಥಮ ಬಾರಿಗೆ ಉಳಿದ ಆಹಾರ ಪದಾರ್ಥಗಳನ್ನು ಬಿಸಾಡುವ ಬದಲು ಬಡವರು,ನಿರ್ಗಗತಿಕರಿಗೆ ಪ್ರತಿನಿತ್ಯ ಅಕ್ಷಯ ಆಹಾರ ಜೋಳಿಗೆ ಮೂಲಕ ಉಳಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅದನ್ನು ಹಸಿದವರಿಗೆ ನೀಡುತ್ತಿರುವ ರಾಜೇಂದ್ರ ರವರ ನೆರವಿಗಾಗಿ ಇಂದು ನೂತನ ಆಹಾರ ಸಂಗ್ರಹಣ ಕೇಂದ್ರವನ್ನು ಶಾಸಕ ಎಸ್ ಎ ರಾಮದಾಸ್ ಉದ್ಘಾಟಿಸಿದರು.

 ಜನರು ಉಳಿದ ಆಹಾರ ಪದಾರ್ಥಗಳನ್ನು ಈ ಮಳಿಗೆಗೆ ನೀಡಬೇಕಾಗಿ ಈ ಮೂಲಕ ಮನವಿ ಮಾಡಲಾಯಿತು.

  ಇದೇ ಸಂದರ್ಭ ಸಂಘ ಸಂಚಾಲಕ ರಾಜೇಶ್ ,ನಗರಪಾಲಿಕೆ ಸದಸ್ಯ ಶಿವಕುಮಾರ್ ಸೇರಿದಂತೆ ಸ್ಥಳೀಯರು ಭಾಗಿಯಾಗಿದ್ದರು.

 


Share Post

Related posts

Leave a Comment